ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸುಳ್ವಾಡಿ ದುರಂತಕ್ಕೆ ಒಂದು ತಿಂಗಳು : ಇನ್ನೂ ಮಾಸದ ಸಾವಿನ ನೋವು

|
Google Oneindia Kannada News

ಮೈಸೂರು, ಜನವರಿ 16 : ಚಾಮರಾಜನಗರದ ಸುಳ್ವಾಡಿ ಗ್ರಾಮದ ಕಿಚ್ಚುಗುತ್ತಿ ಮಾರಮ್ಮ ದೇವಾಲಯ ವಿಷಯ ಪ್ರಸಾದ ಪ್ರಕರಣಕ್ಕೆ ಒಂದು ತಿಂಗಳು ಕಳೆದಿದೆ. ಊರಿನಲ್ಲಿ ಇನ್ನೂ ಸ್ಮಶಾನ ಮೌನ ಆವರಿಸಿದೆ.

ಕಳೆದ ಒಂದು ತಿಂಗಳ ಹಿಂದೆ ಚಾಮರಾಜನಗರದ ಹನೂರು ತಾಲ್ಲೂಕಿನ ಸುಳ್ವಾಡಿ ಗ್ರಾಮದ ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದಲ್ಲಿ ವಿಷ ಪ್ರಸಾದ ದುರಂತ ಪ್ರಕರಣ ನಡೆದು ಒಂದು ತಿಂಗಳು. ಆದರೆ, ಸುತ್ತಮುತ್ತಲಿನ ಗ್ರಾಮಗಳ ಜನರು ಇನ್ನೂ ಅದರ ಆಘಾತದಿಂದ ಹೊರ ಬಂದಿಲ್ಲ.

ಪ್ರಸಾದಕ್ಕೆ ವಿಷ ಬೆರೆಸಿದ ಆರೋಪಿಗಳನ್ನು ಪೊಲೀಸರು ಹಿಡಿದ ರೋಚಕ ಕತೆಪ್ರಸಾದಕ್ಕೆ ವಿಷ ಬೆರೆಸಿದ ಆರೋಪಿಗಳನ್ನು ಪೊಲೀಸರು ಹಿಡಿದ ರೋಚಕ ಕತೆ

ಅದರಲ್ಲೂ ವಿಷ ಪ್ರಸಾದ ಸೇವಿಸಿ ಮೃತಪಟ್ಟವರು ಹಾಗೂ ತೀವ್ರವಾಗಿ ಅಸ್ವಸ್ಥಗೊಂಡವರ ಕುಟುಂಬಸ್ಥರು ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಸುಳ್ವಾಡಿ ದೇವಾಲಯದ ಆವರಣ ಹಾಗೂ ಹೆಚ್ಚಿನ ಸಂಖ್ಯೆಯ ಸಂತ್ರಸ್ತರು ಇರುವ ಗ್ರಾಮಗಳಲ್ಲಿ ಇನ್ನೂ ಸೂತಕದ ಛಾಯೆ ಇದೆ. ತಿಂಗಳು ಕಳೆದರೂ ಇನ್ನೂ ನಾಲ್ವರು ಮೈಸೂರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಡಿಸೆಂಬರ್ 14ರಂದು ನಡೆದ ದುರಂತ

ಡಿಸೆಂಬರ್ 14ರಂದು ನಡೆದ ದುರಂತ

ಡಿಸೆಂಬರ್ 14ರಂದು ಯಾರೂ ಕಂಡು ಕೇಳರಿಯದ ದುರಂತ ಜಿಲ್ಲೆಯಲ್ಲಿ ನಡೆದು ಹೋಗಿತ್ತು. ದೇವಸ್ಥಾನಕ್ಕೆ ಗೋಪುರ ನಿರ್ಮಿಸಲು ನಡೆದ ಭೂಮಿಪೂಜೆ ಕಾರ್ಯಕ್ರಮದಲ್ಲಿ ನೀಡಿದ ಪ್ರಸಾದ ಸೇವಿಸಿ 110ಕ್ಕೂ ಹೆಚ್ಚು ಜನರು ಅಸ್ವಸ್ಥ‌ಗೊಂಡಿದ್ದರು. ಮೊದಲ ದಿನವೇ 11 ಜನರು ಮೃತಪಟ್ಟಿದ್ದರು. ನಂತರದ ದಿನಗಳಲ್ಲಿ ಈ ಸಂಖ್ಯೆ 17ಕ್ಕೆ ಏರಿತ್ತು.

ಗಂಭೀರ ಸ್ಥಿತಿಯಲ್ಲಿದ್ದವರೂ ಬದುಕಿದರು

ಗಂಭೀರ ಸ್ಥಿತಿಯಲ್ಲಿದ್ದವರೂ ಬದುಕಿದರು

ಮೈಸೂರಿನ ಆಸ್ಪತ್ರೆಗಳಲ್ಲಿ ಅತ್ಯು ತ್ತಮ ಚಿಕಿತ್ಸೆ ಲಭ್ಯವಾಗಿದ್ದರಿಂದ ಗಂಭೀರ ಸ್ಥಿತಿಯಲ್ಲಿದ್ದವರೂ ಬದುಕಿದರು. ಈಗಲೂ ಒಬ್ಬರು ವೆಂಟಿಲೇಟರ್‌ನಲ್ಲಿದ್ದಾರೆ. ಚಿಕಿತ್ಸೆ ಪಡೆದು ಮನೆಗೆ ಮರಳಿದವರ ಪೈಕಿ ಆರು ಮಂದಿ ಮತ್ತೆ ಕೊಳ್ಳೇಗಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ.

ವಿಷ ಪ್ರಸಾದ ಆರೋಪಿಗಳ ವಿರುದ್ಧ ಎಸ್ಸಿ, ಎಸ್ಟಿ ಕೇಸ್ ದಾಖಲುವಿಷ ಪ್ರಸಾದ ಆರೋಪಿಗಳ ವಿರುದ್ಧ ಎಸ್ಸಿ, ಎಸ್ಟಿ ಕೇಸ್ ದಾಖಲು

ಸುಳ್ವಾಡಿಯಲ್ಲಿ ಸ್ಮಶಾನ ಮೌನ

ಸುಳ್ವಾಡಿಯಲ್ಲಿ ಸ್ಮಶಾನ ಮೌನ

ಮೃತಪಟ್ಟವರಲ್ಲಿ ಬಹುತೇಕರು ಕುಟುಂಬಗಳಿಗೆ ಆಧಾರವಾಗಿದ್ದವರು. ಸರ್ಕಾರ ಪರಿಹಾರ ಕೊಟ್ಟಿದ್ದರೂ, ಆಸ್ತಿ ಕೊಡಿಸುವ ಭರವಸೆ ನೀಡಿದ್ದರೂ ಅವರ ಕುಟುಂಬದ ಸದಸ್ಯರು ಇನ್ನೂ ದಿಕ್ಕು ತೋಚ ದಂತಾಗಿರುವ ಸ್ಥಿತಿಯಿಂದ ಹೊರ ಬಂದಿಲ್ಲ.

ಬಿದರಹಳ್ಳಿ ಹಾಗೂ ದೊರೆಸ್ವಾಮಿ ಮೇಡುವಿನ ಆರು ಜನರು ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಪರಸ್ಪರ ಸಂಬಂಧಿಗಳಾಗಿರುವ ಇವರ ಮನೆಯಲ್ಲಿ ಈಗಲೂ ದುಃಖ ಮಡುಗಟ್ಟಿದೆ. ಪೈಶಾಚಿಕ ಕೃತ್ಯಕ್ಕೆ ಬಲಿಯಾದ ಕೃಷ್ಣ ನಾಯ್ಕ ಮತ್ತು ಮೈಲಿಬಾಯಿ ಮಕ್ಕಳು ಇನ್ನೂ ಕಣ್ಣೀರು ಸುರಿಸುತ್ತಿದ್ದಾರೆ.

ದೇವಾಲಯದಲ್ಲಿ ನಡೆಯದ ಪೂಜೆ

ದೇವಾಲಯದಲ್ಲಿ ನಡೆಯದ ಪೂಜೆ

ಈ ಮಧ್ಯೆ, ದುರ್ಘಟನೆ ನಡೆದ ನಂತರ ಸುಳ್ವಾಡಿ ಮಾರಮ್ಮ ದೇವಾಲಯಕ್ಕೆ ಬೀಗ ಹಾಕಲಾಗಿದೆ. ಒಂದು ತಿಂಗಳಿಂದ ಪೂಜೆ ನಡೆಯುತ್ತಿಲ್ಲ. ಬೆರಳೆಣಿಕೆಯ ಸಂಖ್ಯೆಯಲ್ಲಿ ಬರುವ ಭಕ್ತರು ಹೊರಗಿನಿಂದಲೇ ಕೈ ಮುಗಿದು ಹೋಗುತ್ತಿದ್ದಾರೆ. ಸಾಮಾನ್ಯವಾಗಿ ಮಂಗಳವಾರ ಮತ್ತು ಶುಕ್ರವಾರ ಭಾರಿ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಬರುತ್ತಿದ್ದರು. ಆಡುಗಳ ಬಲಿ ಕೊಟ್ಟು, ಅಲ್ಲೇ ಅಡುಗೆ ಸಿದ್ಧಪಡಿಸಿ ಪ್ರಸಾದವಾಗಿ ಸೇವಿಸುತ್ತಿದ್ದರು. ಇದೆಲ್ಲ ಈಗ ನಿಂತಿದೆ.

ಇಂದು ನ್ಯಾಯಾಲಯಕ್ಕೆ ಹಾಜರು
ಈ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳಾದ ಇಮ್ಮಡಿ ಮಹಾದೇವಸ್ವಾಮಿ, ಅಂಬಿಕಾ, ಮಾದೇಶ

ಸುಳ್ವಾಡಿ ವಿಷಪ್ರಸಾದ ಪ್ರಕರಣ: ಚಿಕಿತ್ಸೆ ಪಡೆದು ಮನೆಗೆ ಹಿಂತಿರುಗಿದ 6 ಜನರು ಮತ್ತೆ ಅಸ್ವಸ್ಥಸುಳ್ವಾಡಿ ವಿಷಪ್ರಸಾದ ಪ್ರಕರಣ: ಚಿಕಿತ್ಸೆ ಪಡೆದು ಮನೆಗೆ ಹಿಂತಿರುಗಿದ 6 ಜನರು ಮತ್ತೆ ಅಸ್ವಸ್ಥ

English summary
One month ago Poison Prasadam tragedy happened in the place at Maramma temple in Sulwadi village in Hanur taluk. But the people of the surrounding villages have not yet come out of shock .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X