ಹೊಸ ವರುಷಕ್ಕೆ ಮೈಸೂರಿನ ಜನ ಸವಿಯಬಹುದು ತಿರುಪತಿ ಮಾದರಿ ಲಾಡು

Posted By: ಯಶಸ್ವಿನಿ ಎಂ.ಕೆ
Subscribe to Oneindia Kannada
   ಹೊಸ ವರ್ಷ ವಿಶೇಷ : ಮೈಸೂರಿನ ದೇವಸ್ಥಾನದಲ್ಲಿ 2 ಲಕ್ಷ ಲಡ್ಡು ವಿತರಣೆ | Oneindia Kannada

   ಮೈಸೂರು, ಡಿಸೆಂಬರ್ 27 : ಹೊಸ ವರ್ಷದ ಪ್ರಯುಕ್ತ ಮೈಸೂರಿನ ಯೋಗಾನರಸಿಂಹ ದೇವಸ್ಥಾನವು ತಿರುಪತಿಯಲ್ಲಿ ಮಾಡುವ ರೀತಿಯಲ್ಲಿ 2 ಲಕ್ಷ ಲಾಡುಗಳನ್ನು ಸಾರ್ವಜನಿಕರಿಗೆ ವಿತರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. 1994ರಿಂದಲೂ ನೂತನ ವರ್ಷದ ಸಂಭ್ರಮದಲ್ಲಿ ದೇವಸ್ಥಾನದ ವತಿಯಿಂದ ಲಾಡುಗಳನ್ನು ವಿತರಿಸಲಾಗುತ್ತಿದೆ.

   ಚಾಮುಂಡೇಶ್ವರಿ ದೇವಿಯ ತಂಗಿ ಚಿಕ್ಕದೇವಮ್ಮನ ನೆಲೆ ಗೊತ್ತಾ?

   ಆರಂಭದಲ್ಲಿ 1 ಸಾವಿರ ಲಾಡು ವಿತರಣೆ ಮಾಡಲಾಗಿತ್ತು. ನಾಲ್ಕು ವರ್ಷಗಳಿಂದ 1 ಲಕ್ಷ ಲಾಡುಗಳನ್ನು ನೀಡಲಾಗುತ್ತಿತ್ತು. ಈ ವರ್ಷ 2 ಲಕ್ಷ ಲಾಡುಗಳನ್ನು ವಿತರಿಸಲು ಸಿದ್ಧತೆ ಮಾಡಲಾಗಿದೆ. 1500 ಗ್ರಾಂ ತೂಕದ 5 ಸಾವಿರ ಲಾಡು, 100 ಗಾಂ ತೂಕದ 2 ಲಕ್ಷ ಲಾಡುಗಳನ್ನು ವಿತರಿಸಲಾಗುವುದು.

   On the occasion of New year Tirupati prasadam like laddu in Mysuru

   ಈ ಕುರಿತಾಗಿ ಮಾಹಿತಿ ನೀಡಿದ ಭಾಷ್ಯಂ ಸ್ವಾಮೀಜಿ, ಜನವರಿ 1ರಂದು ಯೋಗಾನರಸಿಂಹ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ತಿರುಪತಿ ಮಾದರಿಯ 2 ಲಕ್ಷ ಲಾಡುಗಳನ್ನು ಬೆಳಗ್ಗೆ 4ರಿಂದ ಮಧ್ಯಾಹ್ನ 12ರವರೆಗೆ ವಿತರಿಸಲಾಗುವುದು ಎಂದು ತಿಳಿಸಿದರು.

   On the occasion of New year Tirupati prasadam like laddu in Mysuru

   ಲಾಡುಗಳನ್ನು ತಯಾರಿಸಲು 50 ಮಂದಿ ನುರಿತ ಬಾಣಸಿಗರು ಡಿಸೆಂಬರ್ 21ರಿಂದ ಕಾರ್ಯ ನಿರತರಾಗಿದ್ದಾರೆ. ಲಾಡು ತಯಾರಿಸಲು 50 ಕ್ವಿಂಟಲ್ ಕಡ್ಲೇಹಿಟ್ಟು, 100 ಕ್ವಿಂಟಲ್ ಸಕ್ಕರೆ, 4 ಸಾವಿರ ಲೀಟರ್ ಖಾದ್ಯ ತೈಲ, 100 ಕೆ.ಜಿ. ಗೋಡಂಬಿ, 100 ಕೆ.ಜಿ. ಒಣದ್ರಾಕ್ಷಿ, 50 ಕೆ.ಜಿ. ಬಾದಾಮಿ, 50 ಕೆ.ಜಿ. ಡೈಮಂಡ್ ಸಕ್ಕರೆ, 10 ಕೆ.ಜಿ. ಪಿಸ್ತಾ, 20 ಕೆ.ಜಿ. ಏಲಕ್ಕಿ, 20 ಕೆ.ಜಿ. ಜಾಕಾಯಿ ಮತ್ತು ಜಾಪತ್ರೆ, 5 ಕೆ.ಜಿ. ಪಚ್ಚೆ ಕರ್ಪೂರ, 50 ಕೆ.ಜಿ. ಲವಂಗ ಬಳಸಲಾಗಿದೆ ಎಂದು ಮಾಹಿತಿ ನೀಡಿದರು.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   On new year occasion Mysuru Yoga Narasimha temple administration decides to distribute 2 lakh laddus like Tirupati prasadam to devotees.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ