• search

ದಸರಾ ಹೊತ್ತಲ್ಲಿ ನೆನೆಯೋಣ ಬಾಯಲ್ಲಿ ನೀರೂರಿಸುವ ಮೈಸೂರು ತಿನಿಸುಗಳ...

By Yashaswini
Subscribe to Oneindia Kannada
For mysore Updates
Allow Notification
For Daily Alerts
Keep youself updated with latest
mysore News
    Dasara 2017 : Special Foods For Dasara Festival | Oneindia Kannada

    ಮೈಸೂರು, ಸೆಪ್ಟೆಂಬರ್ 13: ಮೈಸೂರು ಆಹಾರ ಪ್ರಿಯರ ಹಾಟ್ ಸ್ಪಾಟ್ ಎಂದರೇ ತಪ್ಪಾಗಲಾರದು. ಇಲ್ಲಿನ ಅಡುಗೆ ರುಚಿ ಸವಿಯದವರೇ ಇಲ್ಲ. ಸಾಂಸ್ಕೃತಿಕ ನಗರಿಯ ಜೊತೆ -ಜೊತೆಗೆ ಮೈಸೂರಿಗೆ ಆಹಾರದ ರಾಜಧಾನಿ ಎಂದರೇ ತಪ್ಪಾಗಲಾರದು. ಅದಕ್ಕೆ ಉತ್ತಮ ಉದಾಹರಣೆಗಳ ಪಟ್ಟಿಯೇ ಇದೆ. ಮೈಸೂರು ಮಸಾಲೆ ದೋಸೆ, ಮೈಸೂರು ಕಾಫಿ, ಮೈಸೂರು ರಸಂ, ಮೈಸೂರು ಬೋಂಡಾ, ಮೈಸೂರು ಚಿಕನ್ ಬಿರಿಯಾನಿ ಹೀಗೆ ಪಟ್ಟಿಯ ಸಾಲು ನಿಲ್ಲುವುದಿಲ್ಲ.

    ಆಹಾರ ಪ್ರಿಯರಿಗೆ ದಸರೆಯಲ್ಲಿ ಬಂಬೂ ಬಿರಿಯಾನಿ ಭಾಗ್ಯ!

    ಮೈಸೂರು ಮಸಾಲೆ ದೋಸೆ
    ಮೈಸೂರು ದೋಸೆ ದೋಸೆ ಪ್ರಿಯರಿಗೆ ನವ ಚೈತನ್ಯ ತಂದಿದೆ. ದೋಸೆಯಲ್ಲೇ ತೀರಾ ಸ್ಪೆಷೆಲ್ ಮತ್ತು ಆಕರ್ಷಕ ರುಚಿ ಹೊಂದಿರುವ ಮಸಾಲೆ ದೋಸೆಯ ಹುಟ್ಟೂರು ನಮ್ಮ ಮೈಸೂರು.

    ಬೆಳಗ್ಗಿನ ತಿಂಡಿಯಲ್ಲಿ ಅಗ್ರಸ್ಥಾನ ಪಡೆಯಿತು 'ದೋಸೆ'

    ಆದರೆ, ಈ ದೋಸೆ ಹುಟ್ಟಿದ ಕಾಲಾವಧಿ ಯಾರಿಗೂ ಗೊತ್ತಿಲ್ಲ. ಎಂಟೊಂಬತ್ತು ಶತಮಾನಗಳ ಹಿಂದಿದ್ದ ಮಂಗರಸ ಎಂಬಾತ ಹಿಟ್ಟಿಗೆ ಜೋಳ ಮತ್ತು ತರಕಾರಿಗಳನ್ನು ಹಾಕಿ ಬೇಯಿಸಿ ಕೊಡುತ್ತಿದ್ದನಂತೆ. ಹೀಗೆ ದೋಸೆ ರೀತಿಯ ತಿನಿಸನ್ನು ರಾಗಿ, ಗೋಧಿದಲೂ ತಯಾರಿಸುತ್ತಿದ್ದನಂತೆ. ಇದಕ್ಕೆ ಆತ ಇಟ್ಟ ಹೆಸರು 'ಚಂದ್ರಮಂಡಲ'ವೆಂದು. ಹೀಗೆ ಈ ಪ್ರಯೋಗವನ್ನು ಮುಂದುವರಿಸಿ ಮಸಾಲೆ ದೋಸೆಯನ್ನು ಪರಿಚಯಿಸಿದ ಎನ್ನುತ್ತಾರೆ ಇತಿಹಾಸಜ್ಞರು.

    ಊಟ-ತಿಂಡಿ ಮನೆಗೆ ತಲುಪಿಸುವ- 'ಬ್ರಾಹ್ಮಿನ್ ಲಂಚ್ ಬಾಕ್ಸ್'

    ಮೈಸೂರಿನ ಅಗ್ರಹಾರದಲ್ಲಿದ್ದ ನೆಹರು ಲಂಚ್ ಹೋಂ ಸಾದಾ ದೋಸೆಯನ್ನು ತಯಾರಿಸುತ್ತಿತ್ತು. ಇವರೇ ಮುಂದೆ ಮಸಾಲೆ ದೋಸೆಯನ್ನು ಪರಿಚಯಿಸಿದರು ಎಂಬ ಮಾತಿದೆ. ಒಟ್ಟಿನಲ್ಲಿ ಈ ಎರಡೂ ವಾದಗಳು ಮೈಸೂರಿನ ಕಡೆಯದ್ದೇ ಆಗಿರುವುದರಿಂದ ಮಸಾಲೆ ದೋಸೆಯ ಹುಟ್ಟು ಸಾಂಸ್ಕೃತಿಕ ನಗರಿಯೇ ಎನ್ನುವುದಂತೂ ನಿಜ.(ಚಿತ್ರಕೃಪೆ: ಪಿಟಿಐ)

    ಮೈಸೂರು ಕಾಫಿ

    ಮೈಸೂರು ಕಾಫಿ

    ಕೊಡಗಿನ ಕಾಫಿ ಹೇಗೆ ಪ್ರಸಿದ್ಧಿಯೋ ಹಾಗೆಯೇ ಮೈಸೂರು ಕಾಫಿಯೂ ಪ್ರಸಿದ್ಧಿ. ಪ್ರತಿಷ್ಠಿತ ಮೈಸೂರು ಕಾಫಿ ವರ್ಕ್ಸ್ ತವರೂರು ಮೈಸೂರು. ಹಾಗೆಯೇ ಗಾಯಿತ್ರಿ ಕಾಫಿವರ್ಕ್ಸ್ ಸೇರಿದಂತೆ ಹತ್ತು ಹಲವು ಕಾಫಿ ಕಂಪೆನಿಗಳ ಉತ್ತಮ ಕಾಫಿ ಪುಡಿಗೆ ಮನಸೋಲದ ಮಂದಿ ಇಲ್ಲವೇ ಇಲ್ಲ.

    ಪ್ರತಿಷ್ಠಿತ ಹೊಟೇಲ್ ಗಳಾದ ದಾಸ್ ಪ್ರಕಾಶ್, ಮೈಲಾರಿ, ಲಲಿತ ಮಹಲ್ ಸೇರಿದಂತೆ ಇನ್ನು ಅನೇಕ ಕಡೆಗಳಲ್ಲಿ ಒಂದು ಲೋಟ ಕಾಫಿ ಹೀರಿದರೆ ಸಾಕು, ಅದರ ಆಸ್ವಾದವನ್ನು ಬಲ್ಲವನೇ ಬಲ್ಲನೇನೋ..!

    ಮೈಸೂರು ರಸಂ

    ಮೈಸೂರು ರಸಂ

    ಕರ್ನಾಟಕದ ಅಡುಗೆಯಲ್ಲಿ ಸಾಕಷ್ಟು ಪ್ರಾಂತೀಯ ವೈವಿಧ್ಯಗಳಿವೆ. 1980ರ ದಶಕದ ನಂತರ ಉತ್ತರ ಭಾರತದ ಅಡುಗೆಗಳೂ ಕರ್ನಾಟಕದಲ್ಲಿ ಜನಪ್ರಿಯವಾದವು. ಇಲ್ಲಿನ ತಿನಿಸು ಪಕ್ಕದ ಮೂರು ದಕ್ಷಿಣ ಭಾರತದ ರಾಜ್ಯಗಳ ಮತ್ತು ರಾಜ್ಯದ ಉತ್ತರಕ್ಕೆ ಇರುವ ಮಹಾರಾಷ್ಟ್ರ ರಾಜ್ಯದ ಅನೇಕ ಪ್ರದೇಶಗಳಲ್ಲಿ ಮತ್ತು ಸಮುದಾಯಗಳ ಆಹಾರ, ಹಾಗೂ ಪ್ರಭಾವವನ್ನು ಪ್ರತಿಫಲಿಸುತ್ತದೆ. ಇದರಲ್ಲಿ ಪ್ರಮುಖವಾದದ್ದು ಮೈಸೂರು ರಸಂ.

    ಬೆಸ್ಟ್ ರೆಸಿಪಿ ಎಂದೇ ಹೆಸರಾಗಿರುವ ರಸಂ ಕಾಂಬಿನೇಷನ್ ಸೂಪರೋ ಸೂಪರ್. ಕೆಂಪು ಮೆಣಸಿನ ಕಾಯಿ , ಮೆಂತ್ಯೆ, ಜೀರಿಗೆ, ಅರಿಶಿನದ ಪುಡಿ ಸೇರಿದಂತೆ ಹತ್ತು ಹಲವು ಮಸಾಲೆ ಪದಾರ್ಥಗಳ ಮಿಶ್ರಣ ಸೇರಿಸಿ, ಘಮ್ಮೆನ್ನುವ ಇಂಗಿನ ಒಗ್ಗರಣೆಯನ್ನು ನೀಡಿದರೆ ರಸಂ ಪುಡಿ ಸಿದ್ಧಗೊಳ್ಳುತ್ತದೆ. ಇದರ ಸಾರು ತಯಾರಿಸಿ ಬಿಸಿ ಅನ್ನದೊಂದಿಗೆ ಸವಿದರೆ... ಆಹಾ..!

    ಮೈಸೂರು ಬೋಂಡಾ

    ಮೈಸೂರು ಬೋಂಡಾ

    ಮೈಸೂರು ದಸರಾ ಸಂಭ್ರಮ. ಮೈಸೂರು ಅಡುಗೆಗಳನ್ನು ನಾಲಿಗೆ ಬಯಸುತ್ತದೆ. ಅದನ್ನು ತಣಿಸಲೆಂದೆ ಮೈಸೂರಿನವರು ತಿನ್ನಲು ಬಳಸುವ ಬೋಂಡಾ ಇದಾಗಿದೆ. ಮಾಡೋದು ತುಂಬಾ ಅಂದ್ರೆ ತುಂಬಾನೇ ಸಿಂಪಲ್. ಒಂದು ಬಟ್ಟಲು ಮೈದಾ, ಒಂದು ಬಟ್ಟಲು ಅಕ್ಕಿ ಹಿಟ್ಟು, ಸ್ವಲ್ಪ ಅಡುಗೆ ಸೋಡಾ, ಮೊಸರು, ಉಪ್ಪು ಸಣ್ಣಕ್ಕೆ ಕತ್ತರಿಸಿದ ಹಸಿಮೆಣಸಿನಕಾಯಿ, ಶುಂಠಿ, ಮತ್ತು ಕೊತ್ತಂಬರಿ ಸೊಪ್ಪು. ಎಲ್ಲವನ್ನೂ ನೀರು ಬೆರಸಿ ಚೆನ್ನಾಗಿ ಮಿಕ್ಸ್ ಮಾಡಿ. ದೋಸೆ ಹಿಟ್ಟಿ ಗಿಂತ ದಪ್ಪ ವಾಗಿರಲಿ ಮಿಶ್ರಣ. ಹತ್ತು ನಿಮಿಷ ಬಿಟ್ಟು ಬಿಸಿ ಎಣ್ಣೆಯಲ್ಲಿ ಕರಿದು ತೆಗೆಯಿರಿ. ಇದರ ಹೊರ ಕವಚ ಗರಿಗರಿಯಾಗಿದ್ದು, ಒಳಗಡೆ ಬ್ರೆಡ್ ತರಹ ಸಾಫ್ಟ್ ಆಗಿರುತ್ತೆ. ತಿನ್ನೋಕೂ ರುಚಿಯೇ ಸರಿ.

    ಸಂಭ್ರಮದ ದಸರಾಕ್ಕೆ ಮುನ್ನುಡಿ

    ಸಂಭ್ರಮದ ದಸರಾಕ್ಕೆ ಮುನ್ನುಡಿ

    ಒಟ್ಟಾರೆ ಸಾಂಸ್ಕೃತಿಕ ರಾಜಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮೈಸೂರು, ಭಾರತೀಯ ಆಹಾರ ಪದ್ಧತಿಗೆ ಮತ್ತಷ್ಟು ಕೊಡುಗೆ ನೀಡುತ್ತಿರುವುದಂತೂ ಸುಳ್ಳಲ್ಲ. ಜಗತ್ಪ್ರಸಿದ್ಧ ಮೈಸೂರು ದಸರಾ ಹೊತ್ತಲ್ಲಿ ಅರಮನೆ ನಗರಿಯ ಗತ ವೈಭವವನ್ನೂ, ಇಲ್ಲಿನ ಸಂಸ್ಕೃತಿಯನ್ನು ನೆನಪಿಸಿಕೊಳ್ಳುವ ಮೂಲಕ ಸಂಭ್ರಮದ ದಸರಾಕ್ಕೆ ಮುನ್ನುಡಿ ಬರೆಯೋಣ.

    ಇನ್ನಷ್ಟು ಮೈಸೂರು ಸುದ್ದಿಗಳುView All

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    Cultural city Mysuru is very famaous for it's tasty food culture. On Dasara occasion we can recall yummy foods of Mysuru, like Masal Dosa, Bonda, Mysuru coffee here.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more