ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫೇಸ್ ಬುಕ್ ನಲ್ಲಿ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ: ಯುವಕನ ಮೇಲೆ ದೂರು

By Yashaswini
|
Google Oneindia Kannada News

ಮೈಸೂರು, ಡಿಸೆಂಬರ್ 28 : ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರನ್ನು ನಿಂದಿಸುವ ಭರಾಟೆಯಲ್ಲಿ ಹಿಂದೂ ದೇವರ ಬಗ್ಗೆ ಬಾಯಿಗೆ ಬಂದಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ ಯುವಕನ ವಿರುದ್ಧ ದೂರು ದಾಖಲಾಗಿದೆ.

ಮೈಸೂರಿನ ಹಾರೋಹಳ್ಳಿ ರವೀಂದ್ರ ಎಂಬಾತ ಹಿಂದೂ ದೇವರು ಹಾಗೂ ದೇವತೆಗಳ ಬಗ್ಗೆ ಅವಹೇಳನಕಾರಿಯಾಗಿ ಬರೆದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾನೆ. ರಾಮ, ಲಕ್ಷ್ಮಣ, ಸೀತೆ, ಕೃಷ್ಣನ ಬಗ್ಗೆ ಅವಾಚ್ಯ ಶಬ್ದದ ಬಳಕೆ ಮಾಡಿದ್ದಾನೆ. ಈತ ಮೈಸೂರು ವಿಶ್ವವಿದ್ಯಾಲಯದ ಪ್ರೊ. ಮಹೇಶ್‍ಚಂದ್ರ ಗುರು ಮಾರ್ಗದರ್ಶನದಲ್ಲಿ ಪಿಎಚ್.ಡಿ ಮಾಡುತ್ತಿದ್ದಾನೆ.

Harohalli Ravindra

ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದಿರುವುದು ಏನು?
ಸೀತೆಗೂ ಲಕ್ಷ್ಮಣನಿಗೂ ಅಕ್ರಮ ಸಂಬಂಧವಿತ್ತು. ಸೀತೆ ತಾನಾಗಿಯೇ ರಾವಣನ ಬಳಿ ಲೈಂಗಿಕ ಸುಖಕ್ಕಾಗಿ ಹೋಗಿದ್ದಳು. ರಾವಣನ ಜೊತೆಗಿನ ಲೈಂಗಿಕ ಸಂಪರ್ಕದ ನಂತರವೇ ಲವ-ಕುಶ ಹುಟ್ಟಿದ್ದು. ಹೀಗೆ ರಾಮ, ಲಕ್ಷಣ, ಸೀತೆ ಕುರಿತು ಅವಹೇಳನಕಾರಿಯಾಗಿ ಬರೆದಿದ್ದಾನೆ. ಅಷ್ಟೇ ಅಲ್ಲದೇ ಅನಂತ್ ಕುಮಾರ್ ಹೆಗಡೆ ಹಾಗೂ ಯೋಗಿ ಆದಿತ್ಯನಾಥ್ ರನ್ನು ಟೀಕಿಸಿದ್ದಾನೆ.

ಸಂವಿಧಾನ ಬದಲಾವಣೆ ಹೇಳಿಕೆ : ಕ್ಷಮೆ ಕೋರಿದ ಅನಂತ್ ಕುಮಾರ್ ಹೆಗ್ಡೆಸಂವಿಧಾನ ಬದಲಾವಣೆ ಹೇಳಿಕೆ : ಕ್ಷಮೆ ಕೋರಿದ ಅನಂತ್ ಕುಮಾರ್ ಹೆಗ್ಡೆ

ಶ್ರೀಕೃಷ್ಣ ತನ್ನ ತಂಗಿ ಸುಭದ್ರೆ ಜೊತೆ ಲೈಂಗಿಕ ಸಂಪರ್ಕ ಇಟ್ಟುಕೊಂಡಿದ್ದ. ಕೃಷ್ಣ 16 ಸಾವಿರ ಗೋಪಿಕಾ ಸ್ತ್ರೀಯರ ಜೊತೆ ತನ್ನ ತಂಗಿಯ ಜೊತೆಯೂ ಲೈಂಗಿಕ ಸುಖ ಪಡೆದಿದ್ದಾನೆ. ಈಶ್ವರ ದಲಿತ ಸಮುದಾಯಕ್ಕೆ ಸೇರಿದವನು. ಪಾರ್ವತಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು ಎಂದು ಶಿವ, ಪಾರ್ವತಿ, ಅಗ್ನಿದೇವನ ಕುರಿತು ಅಸಹ್ಯ ಪದಗಳ ಬಳಸಿ ಬರೆದಿದ್ದಾನೆ. ಗಣೇಶ, ಸುಬ್ರಹ್ಮಣ್ಯ ಸೇರಿದಂತೆ ಬಹುತೇಕ ಹಿಂದೂ ದೇವರ ಬಗ್ಗೆ ಅವಹೇಳನ ಮಾಡಿದ್ದಾನೆ.

Facebook Post

ಈತನ ಪೋಸ್ಟ್ ಗೆ ಆಕ್ರೋಶಭರಿತ ಕಾಮೆಂಟ್ ಗಳು ಬಂದಿದ್ದು, ಆತನ ಮೇಲೆ ಕ್ರಮ ಕೈಗೊಳ್ಳುವಂತೆ ಫೇಸ್ ಬುಕ್‍ ನಲ್ಲೇ ಆಗ್ರಹಿಸಿದ್ದಾರೆ. ಮೈಸೂರಿನ ಸಮಗ್ರ ರಕ್ಷಣಾ ವೇದಿಕೆ ವತಿಯಿಂದ ಡಿಸಿಪಿ ವಿಷ್ಣುವರ್ಧನ ಅವರಿಗೆ ದೂರು ನೀಡಲಾಗಿದೆ.

English summary
Objectionable post in Facebook, which hurts Hindu sentiments, Harohalli Ravindra, who is doing PH.D, complaint registered in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X