ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಸರೆಯ ಸವಿಯನ್ನು ಓಪನ್ ಜೀಪ್ ನಲ್ಲಿ ಸವಿಯುವ ಬನ್ನಿ

|
Google Oneindia Kannada News

ಮೈಸೂರು, ಸೆಪ್ಟೆಂಬರ್ 17 : ದಸರಾಗೆ ದಿನಗಣನೆ ಆರಂಭವಾಗಿದೆ. 'ಮೈಸೂರಿನ ಪ್ರವಾಸಿ ತಾಣಗಳನ್ನು ಜನರಿಗೆ ಪರಿಚಯಿಸುವ ನಿಟ್ಟಿನಲ್ಲಿ ಸೇಫ್‌ವೀಲ್ಸ್ ವತಿಯಿಂದ ದೇಶದಲ್ಲೇ ಮೊದಲ ಬಾರಿಗೆ ಓಪನ್ ಜೀಪ್ ಟೂರ್ಸ್ ಆಯೋಜಿಸಲಾಗಿದೆ' ಎಂದು ಸೇಫ್‌ವೀಲ್ ಮ್ಯಾನೇಜಿಂಗ್ ಡೈರೆಕ್ಟರ್ ಬಿ.ಎಸ್.ಪ್ರಶಾಂತ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ನಗರದ ಸೌಂದರ್ಯ ಸವಿಯಲೆಂದೇ ದೇಶ ವಿದೇಶಗಳಿಂದ ಸಾವಿರಾರು ಪ್ರವಾಸಿಗರು ನಗರಕ್ಕೆ ಬರುತ್ತಾರೆ. ಆದರೆ, ಅವರಿಗೆ ಪ್ರವಾಸಿ ತಾಣಗಳ ಮಾಹಿತಿ ಇರುವುದಿಲ್ಲ. ಪ್ರತಿಯೊಂದು ಸ್ಥಳದ ಐತಿಹಾಸಿಕ ಮಾಹಿತಿಯೊಂದಿಗೆ ಅಂದವನ್ನು ಕಣ್ತುಂಬಿಕೊಳ್ಳಲು ಓಪನ್ ಜೀಪ್ ಟೂರ್ಸ್ ಆಯೋಜಿಸಲಾಗಿದೆ' ಎಂದರು.

ಸೆ.18ರಂದು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬೆಳಗ್ಗೆ 11 ಗಂಟೆಗೆ ಅರಮನೆಯ ಉತ್ತರ ದ್ವಾರದಲ್ಲಿ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ. ಶಾಸಕ ವಾಸು, ಮಾಜಿ ಸಚಿವ ಎಸ್.ಎ.ರಾಮದಾಸ್ ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

Now tourists visiting Mysuru can have Open Jeep experience

'ಓಪನ್ ಜೀಪ್‌ನಲ್ಲಿ 6 ಮಂದಿ ಕೂರುವ ವ್ಯವಸ್ಥೆಯಿದ್ದು ಒಬ್ಬರಿಗೆ 511 ರೂ. ದರ ನಿಗದಿ ಮಾಡಲಾಗಿದೆ. ಕುಟುಂಬದ ಮೂವರು ಸದಸ್ಯರು ಮಾತ್ರ ಒಂದು ಜೀಪ್‌ನಲ್ಲಿ ಪ್ರವಾಸ ಕೈಗೊಂಡರೆ 3,500 ರೂ ದರ ನಿಗದಿಪಡಿಸಿದ್ದೇವೆ. ತಮ್ಮ ಪ್ರವಾಸದ ಸಂತಸದ ಕ್ಷಣಗಳನ್ನು ಸೆರೆ ಹಿಡಿಯುವ ಸಲುವಾಗಿ ಎರಡು ಸೆಲ್ಫಿ ಸ್ಟಿಕ್, ರೇನ್ ಕೋಟ್ ನೀಡುತ್ತೇವೆ' ಎಂದರು.

'ಅಲ್ಲದೆ ಪ್ರತ್ಯೇಕವಾಗಿ ಛಾಯಾಗ್ರಾಹರಕು ಬೇಕೆಂದರೆ ಅದಕ್ಕೂ ವ್ಯವಸ್ಥೆ ಮಾಡುತ್ತೇವೆ. ಮೊದಲೆಲ್ಲ ಸ್ಥಳಗಳ ಮಾಹಿತಿ ನೀಡಲು ಗೈಡ್ ಇರುತ್ತಿದ್ದರು. ಆದರೆ, ಈ ಬಾರಿ ನಾವು ಆಡಿಯೋ ಗೈಡೆಡ್ ವ್ಯವಸ್ಥೆ ಮಾಡಿದ್ದೇವೆ. ಕನ್ನಡ, ಇಂಗ್ಲಿಷ್, ಹಿಂದಿ, ಫ್ರೆಂಚ್ ಭಾಷೆಯಲ್ಲಿ ಮಾಹಿತಿ ಇದ್ದು ಪ್ರವಾಸ ಆರಂಭಿಸುವಾಗ ಸ್ಟಾರ್ಟ್ ಬಟನ್ ಒತ್ತಿದರೆ ಸಂಪೂರ್ಣ ಮಾಹಿತಿ ದೊರೆಯಲಿದೆ' ಎಂದು ಹೇಳಿದರು.

Now tourists visiting Mysuru can have Open Jeep experience

ಪ್ರವಾಸಿಗರನ್ನು ಅವರು ತಂಗಿರುವ ಹೋಟೆಲ್‌ನಲ್ಲಿಯೇ ಪಿಕಪ್ ಮಾಡುವ ವ್ಯವಸ್ಥೆ ಇದ್ದು, ಮೈಸೂರಿಗರನ್ನು ಜಗನ್ಮೋಹನ ಅರಮನೆ ಆವರಣದಿಂದ ಕರೆದೊಯ್ಯಲಾಗುತ್ತದೆ. ಪ್ರತಿದಿನ ಎರಡು ಅವಧಿಯಲ್ಲಿ ಪ್ರವಾಸ ಇರಲಿದೆ.

ಎಲ್ಲೆಲ್ಲಿಗೆ ಭೇಟಿ? : ಲಲಿತ ಮಹಲ್ ಪ್ಯಾಲೇಸ್, ಆಡಳಿತ ತರಬೇತಿ ಕೇಂದ್ರ, ಚಾಮುಂಡಿಬೆಟ್ಟದ ವ್ಯೂ ಪಾಯಿಂಟ್, ರೇಸ್ ಕೋರ್ಸ್, ಸರ್ಕಾರಿ ಅತಿಥಿ ಗೃಹ, ವೆಲ್ಲಿಂಗ್‌ಟನ್ ಹೌಸ್, ಕ್ಲಾಕ್ ಟವರ್, ಪ್ರೀ ಮ್ಯಾಷನ್ ಕ್ಲಬ್, ಟೌನ್‌ಹಾಲ್, ಗಾಂಧಿಚೌಕ, ದೇವರಾಜ ಮಾರುಕಟ್ಟೆ, ಗುರುಸ್ವೀಟ್, ದೊಡ್ಡ ಗಡಿಯಾರ, ಲ್ಯಾನ್ಸ್‌ಡೌನ್ ಬಿಲ್ಡಿಂಗ್, ಮಹಾನಗರ ಪಾಲಿಕೆ, ಗನ್‌ಹೌಸ್ ಗೆ ಭೇಟಿ ನೀಡಬಹುದಾಗಿದೆ.

English summary
With an intent to make the tourists savor the heritage of the city and make their travel memorable, a first of its kind initiative in the city called ‘Open Jeep Tour’ will be launched in the city from September 18, 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X