ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವರುಣಾದಲ್ಲಿ ವಿಜಯೇಂದ್ರ ಬೆಂಬಲಿಗರ ಮಾಸ್ಟರ್‌ ಪ್ಲಾನ್‌

By Manjunatha
|
Google Oneindia Kannada News

Recommended Video

ವರುಣಾದಲ್ಲಿ ಬಿ ಎಸ್ ವೈ ಮಗ ಬಿ ಎಸ್ ವಿಜಯೇಂದ್ರ ಬೆಂಬಲಿಗರ ಮಾಸ್ಟರ್ ಪ್ಲಾನ್ | Oneindia Kannada

ಮೈಸೂರು, ಏಪ್ರಿಲ್ 26: ವರುಣಾ ಕ್ಷೇತ್ರದಿಂದ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರಿಗೆ ಟಿಕೆಟ್ ನೀಡಿದ ಕಾರಣ ಬಿಜೆಪಿಗರು ತಮ್ಮದೇ ಪಕ್ಷವನ್ನು ಸೋಲಿಸಲು ಮುಂದಾಗಿದ್ದಾರೆ!

ಹೌದು ಈ ಬಾರಿ ಮತದಾನದ ದಿನ ಬಿಜೆಪಿ ಅಥವಾ ಇನ್ನಾವುದೇ ಪಕ್ಷಕ್ಕೆ ಮತ ಹಾಕದೆ ನೋಟಾಕ್ಕೆ ಮತ ಹಾಕುವಂತೆ ಫೇಸ್‌ಬುಕ್ ವಾಟ್ಸ್‌ಆಪ್‌ನಲ್ಲಿ ಅಭಿಯಾನ ನಡೆಯುತ್ತಿದೆ. ನೋಟಾಕ್ಕೆ ಶೇ12 ಮತ ಬಂದರೂ ಮರು ಚುನಾವಣೆ ಆಗುತ್ತದೆ ಆಗ ವಿಜಯೇಂದ್ರಗೆ ಟಿಕೆಟ್ ತಪ್ಪಿಸಿದವರಿಗೆ ತಕ್ಕ ಶಾಸ್ತಿ ಮಾಡಿದಂತಾಗುತ್ತದೆ ಎಂಬ ಸಂದೇಶಗಳು ವಾಟ್ಸ್‌ಆಪ್‌, ಫೇಸ್‌ಬುಕ್‌ಗಳಲ್ಲಿ ಹರಿದಾಡುತ್ತಿದೆ.

ವರುಣಾದಲ್ಲಿ ಗೆಲ್ಲುವವರು ಯಾರು? ಇಲ್ಲಿದೆ ಗ್ರೌಂಡ್ ರಿಪೋರ್ಟ್ವರುಣಾದಲ್ಲಿ ಗೆಲ್ಲುವವರು ಯಾರು? ಇಲ್ಲಿದೆ ಗ್ರೌಂಡ್ ರಿಪೋರ್ಟ್

ಬಿಎಸ್‌ವೈ ಪುತ್ರ ವಿಜಯೇಂದ್ರ ಅವರು ವರುಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂಬ ಮಾತುಗಳು ಕೇಳಿಬರುತ್ತಿದ್ದವು, ಆದರೆ ಚುನಾವಣಾ ನಾಮಪತ್ರ ಸಲ್ಲಿಸುವ ಕೊನೆಯ ದಿನ ನಡೆದ ನಾಟಕೀಯ ಬೆಳವಣಿಗೆಗಳಿಂದ ವಿಜಯೇಂದ್ರಗೆ ಬಿಜೆಪಿ ಟಿಕೆಟ್ ತಪ್ಪಿತು. ಹೀಗಾಗಿ ವಿಜಯೇಂದ್ರ ಬೆಂಬಲಿಗರು ದಾಂಧಲೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.

ಅನಂತ್‌ಕುಮಾರ್, ಸಂತೋಶ್‌ ಜಿ ಮೇಲೆ ಸಿಟ್ಟು

ಅನಂತ್‌ಕುಮಾರ್, ಸಂತೋಶ್‌ ಜಿ ಮೇಲೆ ಸಿಟ್ಟು

ವಿಜಯೇಂದ್ರಗೆ ಟಿಕೆಟ್ ತಪ್ಪಿಸಲು ಬಿಜೆಪಿಯ ಅನಂತ್‌ಕುಮಾರ್ ಮತ್ತು ರಾಜ್ಯ ಸಂಘಟನಾ ಕಾರ್ಯದರ್ಶಿ ಸಂತೋಶ್‌ ಜಿ ಎನ್ನಲಾಗುತ್ತಿದ್ದು, ಅವರ ವಿರುದ್ಧವೂ ವಿಜಯೇಂದ್ರ ಬೆಂಬಲಿಗರು ಪ್ರತಿಭಟನೆ ಮಾಡಿದ್ದರು. ಆ ನಂತರ ಹಲವು ಬಿಜೆಪಿ ಅಭ್ಯರ್ಥಿಗಳ ಬೆಂಬಲ ವಿಜಯೇಂದ್ರಗೆ ಸಿಕ್ಕಿತು ಆದರೂ ಟಿಕೆಟ್ ಸಿಗಲಿಲ್ಲ.

ಗೆದ್ದ ಅಭ್ಯರ್ಥಿಯ 12 ರಷ್ಟು ಮತ ಸಾಕು

ಗೆದ್ದ ಅಭ್ಯರ್ಥಿಯ 12 ರಷ್ಟು ಮತ ಸಾಕು

ಇದೀಗ ವಿಜಯೇಂದ್ರ ಬೆಂಬಲಿಸಿ ನೋಟಾ ಅಭಿಯಾನ ವರುಣಾ ಕ್ಷೇತ್ರದಲ್ಲಿ ನಡೆಯುತ್ತಿದ್ದು, ಗೆದ್ದ ಅಭ್ಯರ್ಥಿ ಪಡೆದ ಮತಗಳ ಶೇ 12 ರಷ್ಟು ಮತಗಳು ನೋಟಾಕ್ಕೆ ಬಿದ್ದರೂ ಆ ಕ್ಷೇತ್ರದಲ್ಲಿ ಮರು ಚುನಾವಣೆ ನಡೆಸಬೇಕಾಗುತ್ತದೆ. ಹಾಗಾಗಿ ವಿಜಯೇಂದ್ರ ಬೆಂಬಲಿಗರು ನೋಟಾ ಅಭಿಯಾನ ಪ್ರಾರಂಭಿಸಿದ್ದಾರೆ.

ಅಂತೂ ಮಾತನಾಡಿದರು ಬಿಜೆಪಿಯ 'ಸಡನ್ ಸ್ಟಾರ್' ವಿಜಯೇಂದ್ರಅಂತೂ ಮಾತನಾಡಿದರು ಬಿಜೆಪಿಯ 'ಸಡನ್ ಸ್ಟಾರ್' ವಿಜಯೇಂದ್ರ

ಉಪಚುನಾವಣೆಯಲ್ಲಿ ವಿಜಯೇಂದ್ರ ಅಭ್ಯರ್ಥಿ

ಉಪಚುನಾವಣೆಯಲ್ಲಿ ವಿಜಯೇಂದ್ರ ಅಭ್ಯರ್ಥಿ

ಒಂದು ವೇಳೆ ನೋಟಾಕ್ಕೆ ನಿಗದಿತ ಮತಗಳು ಬಿದ್ದು ಉಪ ಚುನಾವಣೆ ನಡೆದರೆ ಆಗ ಪಕ್ಷದ ಮೇಲೆ ಒತ್ತಾಯ ಹೇರಿ ವಿಜಯೇಂದ್ರ ಅವರನ್ನೇ ಅಭ್ಯರ್ಥಿ ಮಾಡಿಕೊಳ್ಳಬಹುದು ಎಂಬುದು ವಿಜಯೇಂದ್ರ ಬೆಂಬಲಿಗರ ದೂರಾಲೋಚನೆ. 'Vote for NOTA in Varuna' ಎಂಬ ವಾಟ್ಸ್‌ಆಪ್‌ ಗ್ರೂಪ್‌ಗಳು ರಚನೆಯಾಗಿದ್ದು, ಅದರಲ್ಲಿಯೂ ಚರ್ಚೆಗಳು ನಡೆಯುತ್ತಿವೆ. ಕರಪತ್ರಗಳನ್ನು ಮಾಡಿ ಹಂಚಲಾಗುತ್ತಿದೆ.

ಗೆಲ್ಲುವ ವಿಶ್ವಾಸದಲ್ಲಿ ಯತೀಂದ್ರ ಸಿದ್ದರಾಮಯ್ಯ

ಗೆಲ್ಲುವ ವಿಶ್ವಾಸದಲ್ಲಿ ಯತೀಂದ್ರ ಸಿದ್ದರಾಮಯ್ಯ

ವರುಣಾ ಕ್ಷೇತ್ರದಲ್ಲಿ ಬಿಜೆಪಿ ಪರ ತೋಟದಪ್ಪ ಬಸವರಾಜು ಸ್ಪರ್ಧಿಸಿದ್ದರೆ, ಜೆಡಿಎಸ್‌ ಪರ ಸತೀಶ್‌ ಕುಮಾರ್ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್‌ ಪರ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರು ಸ್ಪರ್ಧಿಸುತ್ತಿದ್ದು ಗೆಲ್ಲುವ ಭರವಸೆಯಲ್ಲಿದ್ದಾರೆ..

ವರುಣಾದಲ್ಲಿ ವಿಜಯೇಂದ್ರಗೆ ಟಿಕೆಟ್ ಕೈತಪ್ಪಿದ ಬಳಿಕ ಏನೇನಾಯ್ತು?ವರುಣಾದಲ್ಲಿ ವಿಜಯೇಂದ್ರಗೆ ಟಿಕೆಟ್ ಕೈತಪ್ಪಿದ ಬಳಿಕ ಏನೇನಾಯ್ತು?

English summary
Yeddyurappa's son Vijayendra followers making NOTA campaign in Varuna constituency. If NOTA gets 12% votes Varuna will have By election. if that happen Vijayendra can get ticket for by-election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X