ಅತಂತ್ರರಾಗಿದ್ದಾರೆ ಐಎಎಸ್ ಅಧಿಕಾರಿ ರಂದೀಪ್!

Posted By: ಯಶಸ್ವಿನಿ ಎಂ.ಕೆ
Subscribe to Oneindia Kannada

ಮೈಸೂರು, ಮಾರ್ಚ್ 14 : ರಾಜ್ಯ ಸರಕಾರದ ನಿರ್ಲಕ್ಷ್ಯಕ್ಕೆ ದಕ್ಷ ಐಎಎಸ್ ಅಧಿಕಾರಿಯೋರ್ವರ ಕೆಲಸ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಮೈಸೂರಿನ ನಿರ್ಗಮಿತ ಜಿಲ್ಲಾಧಿಕಾರಿ ಡಿ.ರಂದೀಪ್ ಕೆಲಸವಿಲ್ಲದೇ ಕೂರುವಂತಾಗಿದೆ. ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವರ್ಗಾವಣೆಗೆ ಕುರಿತು ಮಾ.21ರ ತನಕ ಯಥಾಸ್ಥಿತಿ ಕಾಯ್ದು ಕೊಳ್ಳಬೇಕು ಎಂದು ಸಿಎಟಿ ಆದೇಶ ನೀಡಿದ ಹಿನ್ನೆಲೆ, ಹಾಸನ ಜಿಲ್ಲಾಧಿಕಾರಿಯಾಗಿ ಅವರು ಮುಂದುವರಿಯಲಿದ್ದಾರೆ. ಮಂಗಳವಾರ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ ಈ ಕುರಿತು ಆದೇಶ ಹೊರಡಿಸಿದೆ. ಸಿಎಟಿ ಅರ್ಜಿಯ ವಿಚಾರಣೆಯನ್ನು ಪೂರ್ಣಗೊಳಿಸಿದೆ. ಮಾ. 21ರಂದು ಅಂತಿಮ ಆದೇಶವನ್ನು ಪ್ರಕಟಿಸಲಿದೆ.

ಮಾ.21ರ ತನಕ ರೋಹಿಣಿ ಸಿಂಧೂರಿ ವರ್ಗಾವಣೆ ಇಲ್ಲ

ವಾರದ ಹಿಂದೆ ಐಎಎಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ಹಾಸನ ಡಿಸಿಯಾಗಿ ವರ್ಗಾವಣೆಗೊಂಡಿದ್ದರು. ಹಾಸನದ ಡಿಸಿ ರೋಹಿಣಿ ಸಿಂಧೂರಿಯವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿತ್ತು. ಆದತರ ಬಂದು ವರ್ಷವಾಗದೇ ಮತ್ತೆ ತಮ್ಮ ವರ್ಗಾವಣೆ ಮಾಡಿದ ಸರ್ಕಾರದ ನಿಲುವನ್ನು ಪ್ರಶ್ನಿಸಿ ಸಿಎಟಿಯಿಂದ ರೋಹಿಣಿ ಸಿಂಧೂರಿ ತಡೆಯಾಜ್ಞೆ ತಂದಿದ್ದರು. ಇದೀಗ ಮಾರ್ಚ್ 21ರವರೆಗೂ ಹಾಸನ ಜಿಲ್ಲಾಧಿಕಾರಿಯಾಗಿ ಮುಂದುವರೆಯುವಂತೆ ತಡೆಯಾಜ್ಞೆಯಲ್ಲಿ ಆದೇಶಿಸಲಾಗಿದೆ. ಆದರೆ ಮೈಸೂರಿಗೆ ನೂತನ ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ಆಗಮನವಾಗಿದೆ. ರಂದೀಪ್ ಅವರಿಗೆ ಮೈಸೂರು ಇಲ್ಲದೇ, ಹಾಸನವು ಇಲ್ಲದೇ ಅಂತತ್ರರಾಗಿದ್ದಾರೆ.

No work allotment for IAS officer D.Randeep

ರೋಹಿಣಿ ಸಿಂಧೂರಿ ಅವರು 2017ರ ಜು.14ರಂದು ಹಾಸನದ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅವಧಿಗೂ ಮೊದಲೇ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಆದ್ದರಿಂದ, ಅವರು ಸಿಎಟಿಯಲ್ಲಿ ಕರ್ನಾಟಕ ಸರ್ಕಾರದ ಆದೇಶವನ್ನು ಪ್ರಶ್ನಿಸಿದ್ದರು.

ಮಾ. 7ರಂದು ಕರ್ನಾಟಕ ಸರ್ಕಾರ ರೋಹಿಣಿ ಸಿಂಧೂರಿ ಸೇರಿದಂತೆ 11 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿತ್ತು. ಮಾ. 8ರಂದು ರೋಹಿಣಿ ಸಿಂಧೂರಿ ಅವರು ಈ ಆದೇಶವನ್ನು ಸಿಎಟಿಯಲ್ಲಿ ಪ್ರಶ್ನಿಸಿದ್ದರು. ಮಾ. 13ರತನಕ ವರ್ಗಾವಣೆಗೆ ಮಧ್ಯಂತರ ತಡೆಯಾಜ್ಞೆ ನೀಡಿ ಸಿಎಟಿ ಆದೇಶ ನೀಡಿತ್ತು. ಮಂಗಳವಾರ ಮಾರ್ಚ್ 21ರ ತನಕ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ನೀಡಿದೆ ಮತ್ತು ಅಂದು ಅಂತಿಮ ತೀರ್ಪನ್ನು ಪ್ರಕಟಿಸಲಿದೆ.

ರೋಹಿಣಿ ಸಿಂಧೂರಿ ಸೇರಿ 5 ಅಧಿಕಾರಿಗಳ ವರ್ಗಾವಣೆ ಆದೇಶ ರದ್ದು

ರಿಲ್ಯಾಕ್ಸ್ ಮೂಡ್ ನಲ್ಲಿಜಿಲ್ಲಾಧಿಕಾರಿ ಹುದ್ದೆಯಿಂದ ಬಿಡುಗಡೆ ಹೊಂದಿದ ಬಳಿ ರಂದೀಪ್ ರಿಲ್ಯಾಕ್ಸ್ ಮೂಡ್ ನಲ್ಲಿದ್ದು, ತಮ್ಮ ಮುದ್ದಿನ ಶ್ವಾನ ಲಿಲ್ಲಿ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ.

ನಿತ್ಯ 10 ಗಂಟೆಗೂ ಹೆಚ್ಚು ಕಾಲ ಕಚೇರಿ ಕೆಲಸ ಕಾರ್ಯದಲ್ಲಿ ಮಗ್ನರಾಗಿರುತ್ತಿದ್ದ ಅವರು ಪತ್ನಿ ಮತ್ತು ಪುತ್ರಿ ಹಾಗೂ ಲಿಲ್ಲಿ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. ನಿತ್ಯ ಬೆಳಗ್ಗೆ ಮತ್ತು ಸಂಜೆ ಅವು ಗಳನ್ನು ವಾಕಿಂಗ್ ಕರೆದುಕೊಂಡು ಹೋಗುವುದರೊಂದಿಗೆ ಅವುಗಳನ್ನು ಆಟವಾಡಿಸುತ್ತಾ ಸಂತಸದಲ್ಲಿದ್ದಾರೆ.

ಪ್ರವಾಸಕ್ಕೆ ಸಿದ್ಧತೆ
ಹಾಸನಕ್ಕೆ ಜಿಲ್ಲಾಧಿಕಾರಿಯಾಗಿ ವರ್ಗಾವಣೆಯಾಗಲು ಇರುವ ಕಾನೂನು ತೊಡಕು ನಿವಾರಣೆಯಾಗಲು ಇನ್ನೂ ವಾರಗಳ ಕಾಲ ಸಮಯ ಬೇಕಾಗಿರುವುದರಿಂದ ಮೈಸೂರಿನ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳಾದ ಮೇಲುಕೋಟೆ, ಕಬಿನಿ ಹಿನ್ನೀರು, ಕೆಆರ್‌ಎಸ್‌ ಮೊದಲಾದ ಸ್ಥಳಗಳಿಗೆ ಕುಟುಂಬದವರೊಂದಿಗೆ ತೆರಳುತ್ತಿರುವುದಾಗಿ ಮಾಹಿತಿ ನೀಡಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hassan deputy commissioner Randeep, who was the Mysuru DC is in relax mood now. As he is not taking his charge yet, he is planning to make some trips near by Mysuru with family.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ