ಸುಂದರ ಮೈಸೂರು ದಸರಾ ಮಾವುತರ ಕರಾಳ ಬದುಕಾ ಕಂಡೀರಾ?

By: ಬಿ.ಎಂ ಲವಕುಮಾರ್, ಮೈಸೂರು
Subscribe to Oneindia Kannada

ಬಿಸಿಲಾದರೆ ಮೈಸುಡುವ..ಮಳೆಬಂದರೆ ಸೋರುವ ಮುರುಕಲು ಗುಡಿಸಲುಗಳು..ವಿದ್ಯುತ್, ರಸ್ತೆ, ನೀರನ್ನು ಕಾಣದ ಆದಿಮಾನವರ ಬದುಕು..ಇದು ಕುಶಾಲನಗರ ಬಳಿಯ ಆನೆಕಾಡು ಆನೆ ಶಿಬಿರದಲ್ಲಿ ವಾಸ ಮಾಡುತ್ತಿರುವ ಮಾವುತರ ದಯನೀಯ ಸ್ಥಿತಿ.

ಆಧುನಿಕತೆಯಿಂದ ದೂರವಾಗಿ ಆದಿಮಾನವರಂತೆ ಯಾವುದೇ ಮೂಲಭೂತ ಸೌಲಭ್ಯವಿಲ್ಲದೆ ಬದುಕುತ್ತಿದ್ದಾರೆ. ಪ್ರತಿವರ್ಷ ಮೈಸೂರು ದಸರಾಕ್ಕೆ ಹೋಗುತ್ತಾರೆ. ಸುಮಾರು ಒಂದೂವರೆ ತಿಂಗಳ ಕಾಲ ಆನೆಗಳೊಂದಿಗೆ ಅರಮನೆಯಲ್ಲಿ ವಾಸ್ತವ್ಯ ಹೂಡುವ ಈ ಕುಟುಂಬಗಳಿಗೆ ಆಧುನಿಕ ಬದುಕಿನ ಚಹರೆಗಳೆಲ್ಲವೂ ತಿಳಿದಿದೆ. ಪ್ರತಿದಿನ ಉತ್ತಮ ಬೋಜನವೂ ಸಿಗುತ್ತದೆ. ಆದರೆ ಅಲ್ಲಿಂದ ಹಿಂತಿರುಗಿದ ಬಳಿಕ ಮತ್ತೆ ಮುರುಕಲು ಗುಡಿಸಲು, ಅದೇ ಗಂಜಿ ಅನ್ನ ಅಷ್ಟೇ..[ಮೈಸೂರಿನಲ್ಲಿ ಗಜಪಡೆಯ ತಾಲೀಮು ಹೇಗಿರುತ್ತೆ ಗೊತ್ತಾ?]

ಸರ್ಕಾರವು ಆನೆಶಿಬಿರದಲ್ಲಿರುವ ಅರಣ್ಯ ಸಿಬ್ಬಂದಿಗಳಿಗೆ ವಸತಿ ಗೃಹ, ವಿದ್ಯುತ್, ನೀರಿನ ಸೌಲಭ್ಯ ನೀಡಿದೆ. ಅಲ್ಲಿಯೇ ಆನೆಗಳನ್ನು ಸಲಹುವ ಮಾವುತರು, ಕಾವಾಡಿಗಳ ಎಂಟು ಕುಟುಂಬಗಳಿವೆ. ಇವರಿಗೆ ಗುಡಿಸಲೇ ಅರಮನೆ. ವಿದ್ಯುತ್ ಅಂತೂ ಇಲ್ಲವೇ ಇಲ್ಲ. ನೀರಿಗಾಗಿ ಒಂದು ಬೋರ್‍ವೆಲ್ ಇದೆ. ಆದರೆ ಬೇಸಿಗೆ ಬಂದರೆ ಅದರಲ್ಲೂ ನೀರು ಬರುವುದಿಲ್ಲ. ಹಾಗಾಗಿ ನೀರು ಹುಡುಕಿಕೊಂಡು ಕಿ.ಮೀ.ಗಟ್ಟಲೆ ಸಾಗಬೇಕು.

ಅಭಿವೃದ್ಧಿ ಮಂತ್ರ ಜಪಿಸುವ ನಮ್ಮ ಜನಪ್ರತಿನಿಧಿಗಳು ಆಧುನಿಕ ನಾಗಾಲೋಟದಲ್ಲಿ ಸಾಗುತ್ತಿರುವ ಪಟ್ಟಣದ ಮಂದಿಯನ್ನಷ್ಟೆ ನೋಡುತ್ತಿದ್ದಾರೆ. ಆದರೆ ಕಾಡಿನ ನಡುವೆ ಆಧುನಿಕ ಯುಗದಲ್ಲೂ ಆದಿ ಮಾನವರಂತೆ ಬದುಕುವ ಮಾವುತರು, ಕಾವಾಡಿಗಳು ಕಾಣಿಸುತ್ತಲೇ ಇಲ್ಲ. ಸರ್ಕಾರ ತಾರತಮ್ಯತೆ ಎಷ್ಟರ ಮಟ್ಟಿಗೆ ಇದೆ ಎಂಬುದು ಇಲ್ಲಿಗೆ ಭೇಟಿ ನೀಡಿದವರಿಗೆ ಮಾತ್ರ ತಿಳಿಯುತ್ತದೆ.

ಆನೆ ಮಾವುತರ ವಾಸವೆಲ್ಲಿ?

ಆನೆ ಮಾವುತರ ವಾಸವೆಲ್ಲಿ?

ಕುಶಾಲನಗರದಿಂದ ಮಡಿಕೇರಿ ಕಡೆಗೆ ತೆರಳುವಾಗ ಬಸವನಹಳ್ಳಿ ದಾಟಿ ಮುಂದೆ ಸಾಗಿದಾಗ ಆನೆಕಾಡು ಅರಣ್ಯಪ್ರದೇಶ ಎದುರಾಗುತ್ತದೆ. ಇಲ್ಲಿ ಮೇವು ತಿನ್ನುತ್ತಾ ನಿಂತ ಆನೆಗಳು, ಅರಣ್ಯ ಸಿಬ್ಬಂದಿಗಳ ವಸತಿ ಗೃಹಗಳು ಕಾಣಸಿಗುತ್ತವೆ. ಇದನ್ನು ನೋಡಿದ ತಕ್ಷಣವೇ ನಾವು ಆನೆಶಿಬಿರ, ಇಲ್ಲಿ ಆನೆ ಮಾವುತರು ನೆಲೆ ನಿಂತಿದ್ದಾರೆ ಎಂದು ನಿಸ್ಸಂಕೋಚವಾಗಿ ಹೇಳಿಬಿಡಬಹುದು.

ಮಕ್ಕಳು ಶಾಲೆಗೆ ಎಷ್ಟು ದೂರ ಸಾಗಬೇಕು?

ಮಕ್ಕಳು ಶಾಲೆಗೆ ಎಷ್ಟು ದೂರ ಸಾಗಬೇಕು?

ಅಕ್ಷರ ಕಲಿಯಲು ಮಕ್ಕಳು ಕಿ.ಮೀ.ಗಟ್ಟಲೆ ನಡೆದು ಶಾಲೆಗೆ ಹೋಗುತ್ತಾರೆ. ಆದರೆ ಈ ಮಕ್ಕಳು ಸೂರ್ಯ ಮುಳುಗುವುದರೊಳಗೆ ಓದುಬರಹ ಮುಗಿಸಬೇಕು. ವಿದ್ಯುತ್ ಇಲ್ಲದ ಕಾರಣ ಕತ್ತಲೆಯಾದ ಬಳಿಕ ಯಾವುದೂ ಸಾಧ್ಯವಿಲ್ಲ.

ಗುಡಿಸಲೇ ಇವರ ಅರಮನೆ

ಗುಡಿಸಲೇ ಇವರ ಅರಮನೆ

ಅರಣ್ಯದ ನಡುವೆ ಅಲ್ಲಲ್ಲಿ ಹರಕು, ಮುರುಕಿನ ಹೊಗೆಯಾಡುವ ಗುಡಿಸಲು, ಅದರ ಎದುರು ಕೆಲಸದಲ್ಲಿ ನಿರತರಾದ ಮಹಿಳೆಯರು, ಮಣ್ಣಿನಲ್ಲಿ ಆಟವಾಡುವ ಮಕ್ಕಳು ಕಂಡುಬರುತ್ತಾರೆ

ಆಧುನಿಕತೆ ಬದುಕು ನೋಡಿದವರಿಗೆ ಆಧುನಿಕ ಬದುಕಿಲ್ಲ

ಆಧುನಿಕತೆ ಬದುಕು ನೋಡಿದವರಿಗೆ ಆಧುನಿಕ ಬದುಕಿಲ್ಲ

ದಸರಾ ಹಬ್ಬದಂದು ಆನೆಗಳಿಗೆ ಭರ್ಜರಿ ತಯಾರಿ ನೀಡಲು ಮೈಸೂರು ಅರಮನೆಗೆ ತೆರಳುವ ಇವರು ಆಧುನಿಕ ಬದುಕನ್ನು ಬಹಳ ಹತ್ತಿರದಿಂದ ಕಂಡವರು. ಆದರೆ ಇವರ ಬದುಕೇ ಶೋಚನೀಯ. ಕುಡಿಯಲು ನೀರಿಲ್ಲ. ಉಳಿಯಲು ಸರಿಯಾದ ನೆಲೆಯಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
No one take care about Aane kaadu Mahouts life. All mahouts are living in huts from 20 years near aanekaadu, Madikeri. Government don't provide atleast fundamental facilities means No more current, water, roads in their houses.
Please Wait while comments are loading...