ಉಪ ಚುನಾವಣೆ ಫಲಿತಾಂಶದ ಬಗ್ಗೆ ತಕರಾರು ತೆಗೆಯುವಂತೆಯೇ ಇಲ್ಲ

Subscribe to Oneindia Kannada

ಬೆಂಗಳೂರು, ಏಪ್ರಿಲ್ 13: ದೇಶದೆಲ್ಲೆಡೆ ಎಲೆಕ್ಟ್ರಾನಿಕ್ ವೋಟಿಂಗ್ ಮೆಷೀನ್ (ಇವಿಎಂ) ಗಳ ಟ್ಯಾಂಪರಿಂಗ್ ವಿಚಾರ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಆದರೆ ನಂಜನಗೂಡು ಮತ್ತು ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಯಾರೇ ಗೆದ್ದರೂ ಇವಿಎಂಗಳ ಬಗ್ಗೆ ಮಾತ್ರ ತಕರಾರು ತೆಗೆಯುವಂತೆಯೇ ಇಲ್ಲ.

ಕಾರಣ ಇಲ್ಲಿ ಬಳಸುತ್ತಿರುವ ನೂತನ ವಿವಿಪ್ಯಾಟ್ ಒಳಗೊಂಡ ಎಲೆಕ್ಟ್ರಾನಿಕ್ ವೋಟಿಂಗ್ ಮೆಷೀನ್ ಗಳು.[ಉಪಚುನಾವಣೆಗೆ ಹೊಸ ವಿವಿಪ್ಯಾಟ್ ಮತ ಯಂತ್ರಗಳು]

No one can doubt EVM in by election because of VVPAT

ಚುನಾವಣಾ ಅಕ್ರಮಗಳನ್ನು ತಡೆಯುವುದಕ್ಕೆ ಮತ್ತು ಪಾರದರ್ಶಕ ಚುನಾವಣೆ ನಡೆಸುವುದಕ್ಕಾಗಿ ಇದೇ ಮೊದಲ ಬಾರಿಗೆ ಪೂರ್ಣ ಮಟ್ಟದಲ್ಲಿ ವಿವಿಪ್ಯಾಟ್ ಗಳನ್ನು ಒಳಗೊಂಡ ಮತಯಂತ್ರಗಳನ್ನು ಚುನಾವಣಾ ಆಯೋಗ ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಬಳಸಿದೆ.

ಈ ವಿವಿಪ್ಯಾಟ್ ಗಳನ್ನು ಮತಯಂತ್ರಗಳಿಗೆ ಜೋಡಿಸಲಾಗಿರುತ್ತದೆ. ಇವಿಎಂನಲ್ಲಿ ಮತದಾನ ಮಾಡುತ್ತಿದ್ದಂತೆ ಯಾರಿಗೆ ಮತ ಹಾಕಿದ್ದೇವೆ ಎನ್ನುವುದನ್ನು ತೋರಿಸುವ ಚೀಟಿಯೊಂದು ವಿವಿಪ್ಯಾಟ್ ನಲ್ಲಿ ಕಾಣಿಸಿಕೊಳ್ಳುತ್ತದೆ.

ವಿವಿ ಪ್ಯಾಟ್ ನ ಗ್ಲಾಸಿನಲ್ಲಿ ಈ ಚೀಟಿ 7 ಸೆಕೆಂಡ್ ಗಳ ಕಾಲ ಮತದಾರರಿಗೆ ಕಾಣಿಸಿಕೊಳ್ಳುತ್ತದೆ. ನಂತರ ಇದು ಬಾಕ್ಸಿನೊಳಗೆ ಬೀಳುತ್ತದೆ.

ಒಂದೊಮ್ಮೆ ಮತ ಎಣಿಕೆ ವೇಳೆ ಮತಯಂತ್ರದಲ್ಲಿ ದೋಷವುಂಟಾದಲ್ಲಿ ವಿವಿಪ್ಯಾಟ್ ಬಾಕ್ಸ್ ನಲ್ಲಿ ದಾಖಲಾದ ಮತಗಳನ್ನು ಚುನಾವಣಾಧಿಕಾರಿ ಅನುಮತಿಯೊಂದಿಗೆ ಸಿಬ್ಬಂದಿ ತಕ್ಷಣಕ್ಕೆ ಎಣಿಕೆ ಮಾಡಬಹುದಾಗಿದೆ.
ಹೀಗಾಗಿ ಯಾವುದೇ ಗೊಂದಲಗಳಿಗೂ ಇಲ್ಲಿ ಅವಕಾಶವಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
No one can alleges tampering of Electronic Voting Machines (EVM) in Nanjangud and Gundlupet by-election. Here Election Commission used VVPATs along with EVMs that makes transparency in voting.
Please Wait while comments are loading...