ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಮೃಗಾಲಯದ ಟಿಕೆಟ್ ಸುಲಭವಾಗಿ ಪಡೆಯಿರಿ

|
Google Oneindia Kannada News

ಮೈಸೂರು, ಆ.19 : ಜಯಚಾಮರಾಜೇಂದ್ರ ಮೃಗಾಲಯದ ಟಿಕೆಟ್ ಪಡೆಯಲು ಹೊರಗೆ ಸಾಲಾಗಿ ಕಾಯುತ್ತಾ ನಿಲ್ಲುವ ಸಂಕಷ್ಟ ಸದ್ಯದಲ್ಲೇ ಬಗೆಹರಿಯಲಿದೆ. ಮೃಗಾಲಯದವೊಳಗೆ ಟಿಕೆಟ್ ಹಂಚಿಕೆ ಮಾಡುವ ನೂತನ ವ್ಯವಸ್ಥೆಯನ್ನು ಮೃಗಾಲಯದ ಆಡಳಿತ ಮಂಡಳಿ ಶೀಘ್ರದಲ್ಲೇ ಆರಂಭಿಸಲಿದೆ.

ಮೃಗಾಲಯದವೊಳಗೆ ಟಿಕೆಟ್ ಕೌಂಟರ್ ಆರಂಭಿಸುವ ಕುರಿತು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ.ರವಿ ಅವರು ಮಾಹಿತಿ ನೀಡಿದ್ದು, ಮೃಗಾಲಯದವೊಳಗೆ ಸದ್ಯ ಲಭ್ಯವಿರುವ ಸ್ಥಳವನ್ನು ಉಪಯೋಗಿಸಿಕೊಂಡು 42 ಲಕ್ಷ ರೂ. ವೆಚ್ಚದಲ್ಲಿ ಟಿಕೆಟ್ ಕೌಂಟರ್ ನಿರ್ಮಿಸಲಾಗುವುದು ಎಂದು ಹೇಳಿದ್ದಾರೆ.

Mysore zoo

800 ಟಿಕೆಟ್ ನೀಡುವ ವ್ಯವಸ್ಥೆ ಇರುವ ನೂತನ ಕೌಂಟರ್ ತೆರೆಯಲು ಶೀಘ್ರದಲ್ಲೇ ಟೆಂಡರ್ ಕರೆಯಲಾಗುವುದು. ಮೃಗಾಲಯದ ಪ್ರವೇಶ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ದ್ವಾರ ನಿರ್ಮಿಸಲಾಗುವುದು ಎಂದು ರವಿ ಅವರು ಮಾಹಿತಿ ನೀಡಿದ್ದಾರೆ. ಇದರಿಂದ ಮೃಗಾಲಯದ ಹೊರಗೆ ಟಿಕೆಟ್ ಪಡೆಯಲು ಕಾಯುವುದು ತಪ್ಪಲಿದೆ ಎಂದರು. [ಮೃಗಾಲಯಕ್ಕೆ ಬಂದ ವಿರಾಟ್, ಬಬ್ಲಿ]

ಸದ್ಯ ಟಿಕೆಟ್ ಪಡೆಯಲು ಮೃಗಾಲಯದ ಹೊರಗೆ ಸಾಲಿನಲ್ಲಿ ಕಾಯುತ್ತ ನಿಲ್ಲಬೇಕಾಗಿದೆ. ಸಾಲು-ಸಾಲು ರಜೆದಿನಗಳಲ್ಲಿ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುವುದರಿಂದ ನಿಯಂತ್ರಿಸುವುದು ಕಷ್ಟವಾಗುತ್ತದೆ. ಮೃಗಾಲಯದ ಎದುರಿನ ಜನಸಂದಣಿಯಿಂದಾಗಿ ಟ್ರಾಫಿಕ್ ಜಾಮ್ ಸಹ ಉಂಟಾಗುತ್ತದೆ. ಆದ್ದರಿಂದ ನೂತನ ಕೌಂಟರ್ ನಿರ್ಮಿಸಲು ತೀರ್ಮಾನಿಸಲಾಗಿದೆ.

ಇ ಟಿಕೆಟ್ ಸೌಲಭ್ಯ ಬಳಸಿಕೊಳ್ಳಿ : ಎರಡು ವರ್ಷಗಳ ಹಿಂದೆ ಮೃಗಾಲಯಕ್ಕೆ ಪ್ರವೇಶ ಪಡೆಯಲು ಆನ್‌ಲೈನ್ ಮೂಲಕ ಟಿಕೆಟ್ ಬುಕ್ ಮಾಡುವ ಸೌಲಭ್ಯ ಆರಂಭಿಸಲಾಗಿದೆ. ಪ್ರವಾಸಿಗರು ಈ ಸೌಲಭ್ಯವನ್ನು ಹೆಚ್ಚಾಗಿ ಬಳಸಿಕೊಳ್ಳಬೇಕು ಎಂದು ರವಿ ಅವರು ಮನವಿ ಮಾಡಿದ್ದಾರೆ. [ಇ ಟಿಕೆಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ]

English summary
Long queues outside the century old Mysore zoo will come to end soon. Zoo management is building an new entry plaza that will facilitate purchase of tickets inside the zoo. The plaza is being built at an estimated cost of Rs. 42 lakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X