ಮೈಸೂರು: ಮತಹಾಕಲು ಮನಸ್ಸಿದೆ, ಆದ್ರೆ ಮತಗಟ್ಟೆಯೇ ಇಲ್ಲ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಫೆಬ್ರವರಿ, 09: ಕೆಲವರಿಗೆ ಮನೆಯ ಮುಂದೆಯೇ ಮತಗಟ್ಟೆ ಇರುತ್ತದೆ. ಆದರೆ ಅವರಿಗೆ ಮತಹಾಕಲು ಆಲಸ್ಯತನ. ಇನ್ನೂ ಕೆಲವರಿಗೆ ಮತಹಾಕಲು ಮನಸ್ಸಿದ್ದರೂ ಮತಗಟ್ಟೆಯೇ ಇರುವುದಿಲ್ಲ ಈ ಪರಿಸ್ಥಿತಿ ಎದುರಿಸುತ್ತಿರುವುದು ಮೈಸೂರಿನ ಮಹದೇವಪುರದ ಜನತೆ.

ನಿಮಗೆ ಮತ ಬೇಕಾದರೆ ನಮ್ಮ ಊರಿಗೆ ಮತಗಟ್ಟೆಕೊಡಿ ಎಂದು ಕಳೆದ ಹಲವು ವರ್ಷಗಳಿಂದ ನಂಜನಗೂಡು ತಾಲೂಕಿನ ಬದನವಾಳು ಗಾಮ ಪಂಚಾಯತಿ ವ್ಯಾಪ್ತಿಗೆ ಸೇರಿದ ಮಹದೇವನಗರ ಗ್ರಾಮದ ಜನತೆ ಕೇಳುತ್ತಾ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.['ಅಪ್ಪ ಮಕ್ಕಳಿಗೆ ಮದುವೆ, ಹಬ್ಬದ ಊಟ ಮಾಡಿ ಅಭ್ಯಾಸವಿಲ್ಲ']

Mysuru

ಮಹದೇವನಗರದಲ್ಲಿ ಸುಮಾರು 650ಕ್ಕೂ ಹೆಚ್ಚು ಮತದಾರರಿದ್ದರೂ ಮತಗಟ್ಟೆಯಿಲ್ಲ. ಮತಗಟ್ಟೆಯಿರುವುದು ವೀರದೇವನಪುರದಲ್ಲಿ. ನಾಲ್ಕು ಕಿಲೋ ಮೀಟರ್ ದೂರವಿರುವ ಅಲ್ಲಿಗೆ ಹೋಗಬೇಕಾದರೆ ಯಾವುದೇ ಬಸ್ ಸೌಲಭ್ಯವಿಲ್ಲ. ಸ್ವಂತ ವಾಹನವಿಲ್ಲದವರು ನಡೆದುಕೊಂಡು ಹೋಗುವುದು ಅನಿವಾರ್ಯ. ವಯಸ್ಸಾದವರು, ವಿಕಲಚೇತನರು ಅಷ್ಟು ದೂರ ಹೋಗಿ ಮತ ಹಾಕಿ ಬರುವುದಾದರೂ ಹೇಗೆ? ಗ್ರಾಮದಲ್ಲಿಯೇ ಮತಗಟ್ಟೆ ಸ್ಥಾಪಿಸಿ ಎನ್ನುವುದು ಗ್ರಾಮಸ್ಥರ ಒತ್ತಾಯ.

ಅಷ್ಟು ದೂರ ಹೋಗಿ ಓಟು ಹಾಕಿ ಬರೋಕೆ ಒಂದು ದಿನ ಆಗುತ್ತದೆ. ವಯಸ್ಸಾದ ನಾವು ಹೇಗೆ ಹೋಗಲಿ ಎಂಬುದು ಇಲ್ಲಿನ ವೃದ್ಧರ ಬೇಸರವಾಗಿದೆ. ಪಕ್ಕದ ಗ್ರಾಮ ಸಿಂಗನೂರಲ್ಲಿ 280 ಮತದಾರರು ಇದ್ದಾರೆ. ಅಲ್ಲಿ ಮತಗಟ್ಟೆ ಕೇಂದ್ರ ಇದೆ. ಆದರೆ ಮಹದೇವಪುರದಲ್ಲಿ ಏಕೆ ಮತಗಟ್ಟೆ ಸ್ಥಾಪನೆ ಮಾಡುತ್ತಿಲ್ಲ ಎಂದು ಮತದಾರರು ಪ್ರಶ್ನಿಸಿದ್ದಾರೆ.[ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ಹುದ್ದೆಗೆ 15 ಸ್ಪರ್ಧಿಗಳು]

ಗ್ರಾಮದಲ್ಲಿ ಮತಗಟ್ಟೆ ಕೇಂದ್ರಗಳನ್ನು ತೆರೆಯುವಂತೆ ರಾಜ್ಯ ಚುನಾವಣೆ ಆಯೋಗ, ಮುಖ್ಯಮಂತ್ರಿಗಳಿಗೆ, ಸಚಿವರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ 18 ವರ್ಷಗಳಿಂದ ಹೋರಾಟ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೆಲಸ ಕಾರ್ಯ ಬದಿಗೊತ್ತಿ ನಾಲ್ಕು ಕಿಮೀ ನಡೆದು ಹೋಗಿ ಮತಹಾಕುವ ಪರಿಸ್ಥಿತಿ ಮಾತ್ರ ದೂರವಾಗಿಲ್ಲ. ಈ ಬಾರಿಯಾದರೂ ಜಿಲ್ಲಾಡಳಿತ ಮತ ಗಟ್ಟೆ ಸ್ಥಾಪಿಸಲಿ ಎಂದು ಗ್ರಾಮಸ್ಥರು ಮನವಿ ಮಾಡಿಕೊಳ್ಳುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
People have interest to vote on next election. But no election booth in Mahadeavapura, Mysuru. Booth in Veeradevapura. But Veeradevapura its too far Mahadeavapura people.
Please Wait while comments are loading...