ಸಿದ್ದರಾಮಯ್ಯ ತವರು ಕ್ಷೇತ್ರ ಆಲಗೋಡಲ್ಲಿ ಅಭಿವೃದ್ಧಿ ಶೂನ್ಯ!

Posted By: ಬಿ.ಎಂ. ಲವಕುಮಾರ್
Subscribe to Oneindia Kannada

ಮೈಸೂರು, ಜನವರಿ 01: ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಜಿಲ್ಲೆ ಟಿ. ನರಸೀಪುರ ಪುರಸಭೆಗೊಳಪಟ್ಟ ಆಲಗೂಡು ಗ್ರಾಮವು ಮೂಲ ಸೌಕರ್ಯಗಳಿಂದ ವಂಚಿತವಾಗಿದೆ.

ಆಲಗೂಡು ಗ್ರಾಮದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಜನರು ಹೆಚ್ಚಿನ ಪ್ರಮಾಣದಲ್ಲಿ ವಾಸವಿದ್ದು, ಮೂಲ ಸೌಕರ್ಯಗಳು ಇಲ್ಲದ ಪರಿಣಾಮ ಇಲ್ಲಿನ ನಿವಾಸಿಗಳು ಸಂಕಷ್ಟದ ಜೀವನ ಸಾಗಿಸುವಂತಾಗಿದೆ.

ಮೈಸೂರು: ಫಸಲಿಗೆ ಬಂದಿದ್ದ ಬಾಳೆ ನಾಶಗೊಳಿಸದ ದುಷ್ಕರ್ಮಿಗಳು

ಆಲಗೂಡು ಗ್ರಾಮ ಕ್ಷೇತ್ರ ವಿಂಗಡಣೆಗೂ ಮೊದಲು ಟಿ. ನರಸೀಪುರ ಕ್ಷೇತ್ರಕ್ಕೆ ಒಳಪಟ್ಟು ಸಚಿವ ಡಾ.ಹೆಚ್.ಸಿ ಮಹದೇವಪ್ಪನವರು ಸುದೀರ್ಘವಾಗಿ ಪ್ರತಿನಿಧಿಸಿದ್ದರು. ಕ್ಷೇತ್ರ ವಿಂಗಡಣೆಯ ನಂತರ ಮುಖ್ಯಮಂತ್ರಿಗಳು ಪ್ರತಿನಿಧಿಸುವ ವರುಣ ಕ್ಷೇತ್ರಕ್ಕೊಳಪಟ್ಟಿದೆ. ಈ ಇಬ್ಬರು ಪ್ರಭಾವಿ ನಾಯಕರ ಆಳ್ವಿಕೆಗೊಳಪಟ್ಟರೂ ಇಲ್ಲಿ ಅಭಿವೃದ್ಧಿ ಮರೀಚಿಕೆಯಾಗಿರುವುದು ನಿಜಕ್ಕೂ ಬೇಸರದ ಸಂಗತಿ.

No basic infrastructure in Algudu village of cm Siddaramaiah's home district

ಆಲಗೂಡು ಗ್ರಾಮ ಅತ್ಯಧಿಕ ಜನ ಸಂಖ್ಯೆಯನ್ನು ಹೊಂದಿದ್ದು, ನಿವಾಸಿಗಳು ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡಿಲ್ಲ ಎನ್ನುವುದು ಇಲ್ಲಿನವರು ಶೌಚಕ್ಕಾಗಿ ಬಯಲನ್ನು ಆವರಿಸಿರುವುದೇ ಹೇಳುತ್ತಿದೆ.

ಇಲ್ಲಿನ ಜನರ ಮನವೊಲಿಸಿ ಅವರಿಗೆ ಶೌಚಾಲಯ ನಿರ್ಮಿಸಿಕೊಡುವಲ್ಲಿ ಸ್ಥಳೀಯ ಪ್ರತಿನಿಧಿಗಳು ವಿಫಲರಾಗಿರುವುದು ಕಾಣಿಸುತ್ತಿದೆ. ಸ್ಥಳೀಯರು ಹೇಳುವ ಪ್ರಕಾರ ಶೌಚಾಲಯ ನಿರ್ಮಿಸಲು ಬಹಳಷ್ಟು ಜನಕ್ಕೆ ಜಾಗದ ಸಮಸ್ಯೆ ಕಾಡುತ್ತಿದೆಯಂತೆ.

ಇದನ್ನು ಪರಿಹರಿಸುವುದು ಕಷ್ಟವೇನಲ್ಲ. ಆದರೆ ಸ್ಥಳೀಯ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ಹಿತಾಸಕ್ತಿಯ ಕೊರತೆ ಇಲ್ಲಿ ಎದ್ದು ಕಾಣುತ್ತಿದೆ. ಇನ್ನು ಗ್ರಾಮದ ನಿವಾಸಿಗಳು ಕೂಲಿ ಕಾರ್ಮಿಕರಾಗಿದ್ದು, ಕಡು ಬಡತನ ಎದುರಿಸುತ್ತಿದ್ದಾರೆ.

No basic infrastructure in Algudu village of cm Siddaramaiah's home district

ಪರಿಣಾಮ ತಮ್ಮ ಮಕ್ಕಳಿಗೆ ಉನ್ನತ ವ್ಯಾಸಂಗ ಮಾಡಿಸಲು ಸಾಧ್ಯವಾಗಿಲ್ಲ. ಪಟ್ಟಣದಲ್ಲಿ ಸಣ್ಣ ಪುಟ್ಟ ವ್ಯಾಪಾರ ಮಾಡುತ್ತಾ ಬದುಕು ಕಟ್ಟಿಕೊಂಡಿರುವ ಇವರು ತಮ್ಮ ಮಕ್ಕಳನ್ನು ತಮ್ಮ ಸಹಾಯಕ್ಕೆ ಬಳಸಿಕೊಳ್ಳುತ್ತಿರುವುದರಿಂದ ಅವರ ವಿದ್ಯಾಭ್ಯಾಸ ಪ್ರಾಥಮಿಕ ಹಂತದಲ್ಲೇ ಮೊಟಕುಗೊಳ್ಳುತ್ತಿದ್ದು, ಎಸ್‍ಎಸ್‍ಎಲ್‍ಸಿಯಲ್ಲಿ ಉತ್ತೀರ್ಣರಾಗಿರುವವರ ಸಂಖ್ಯೆ ಬಹಳ ವಿರಳವಾಗಿದೆ.

ಗ್ರಾಮದ ಜನಸಂಖ್ಯೆಗನುಗುಣವಾಗಿ ಬಡಾವಣೆ ಅಭಿವೃದ್ಧಿ ಹೊಂದದ ಕಾರಣ ಒಂದೇ ಮನೆಯಲ್ಲಿ ಮೂರರಿಂದ ನಾಲ್ಕು ಕುಟುಂಬಗಳು ವಾಸಿಸುತ್ತಿದ್ದಾರೆ. ಇಂದಿನ ಐಟಿ-ಬಿಟಿ ಯುಗದಲ್ಲೂ ಕೆಳಮಟ್ಟದ ಪರಿಸ್ಥಿತಿ ಇರುವ ಗ್ರಾಮಗಳು ಇಂದಿಗೂ ಇದೆಯೇ ಎಂಬ ಪ್ರಶ್ನೆ ಉದ್ಬವಿಸುತ್ತಿದೆ.

ರಾಜ್ಯ ಮತ್ತು ಕೇಂದ್ರ ಸರ್ಕಾರ ಸ್ವಚ್ಛತೆ ಮತ್ತು ಶುದ್ಧ ಕುಡಿಯುವ ನೀರು ಕಲ್ಪಿಸಿಕೊಡಲು ಯೋಜನೆಗಳನ್ನು ಜಾರಿಗೆ ತಂದಿದ್ದರೂ ಸರ್ಕಾರದ ಯೋಜನೆಗಳು ಪ್ರಚಾರದಲ್ಲಿದೆಯೇ ಹೊರತು ಕಾರ್ಯಗತಗೊಂಡಿರುವುದು ಇಲ್ಲಿ ಕಂಡು ಬರುತ್ತಿಲ್ಲ.

ಇದಕ್ಕೆ ಸಾಕ್ಷಿ ಎಂಬಂತೆ ಶುದ್ಧ ಕುಡಿಯುವ ನೀರಿನ ಘಟಕ ಕಾಮಗಾರಿ ಮುಗಿದು ವರ್ಷ ಕಳೆದರೂ ಚಾಲನೆಗೊಂಡಿಲ್ಲ. ಅಶುಚಿತ್ವ ಎಲ್ಲೆಡೆ ಕಂಡು ಬರುತ್ತಿದೆ. ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
No basic infrastructure in Algudu village of t Narasipura, Mysuru. It is a home district for Karnataka Chief Minister Siddaramaiah.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ