ಮೊಬೈಲ್‌ನ ನಕಲಿ ಬಿಡಿಭಾಗ ಮಾಡುತ್ತಿದ್ದ 9 ಜನರ ಬಂಧನ

Posted By:
Subscribe to Oneindia Kannada

ಮೈಸೂರು, ಸೆಪ್ಟೆಂಬರ್ 14 : ಇಂಟೆಕ್ಸ್ ಮೊಬೈಲ್ ಕಂಪನಿಯ ನಕಲಿ ಬಿಡಿಭಾಗಗಳನ್ನು ಮಾರಾಟ ಮಾಡುತ್ತಿದ್ದ ಮೂರು ಅಂಗಡಿಗಳ ಮೇಲೆ ದಾಳಿ ಮಾಡಿದ ಮೈಸೂರು ನಗರ ಸಿಸಿಬಿ ಮತ್ತು ಲಷ್ಕರ್ ಪೊಲೀಸರು ಎಂಟು ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೈಸೂರು ನಗರದ ಕೆ.ಟಿ.ರಸ್ತೆಯಲ್ಲಿರುವ ಮದನ್ ಆಕ್ಸೆಸರೀಸ್, ಶ್ರೀ ಕೈವೆ ಮೊಬೈಲ್ ಶಾಪ್ ಮತ್ತು ಓ ಆಕ್ಸೆಸರೀಸ್‌ಗಳ ಮೇಲೆ, ನಿಖರವಾಗಿ ಸಿಕ್ಕ ಮಾಹಿತಿಯ ಮೇರೆಗೆ ಸೆ.13ರಂದು ದಾಳಿ ಮಾಡಿ ಅಕ್ರಮವಾಗಿ ಇಂಟೆಕ್ಸ್ ಮೊಬೈಲ್ ಕಂಪನಿಯ ನಕಲಿ ಬಿಡಿಭಾಗಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿ ಮಾಲೀಕರು ಮತ್ತು ಕೆಲಸಗಾರರನ್ನು ಬಂಧಿಸಿದ್ದಾರೆ.

Nine people arrested for selling fake mobile parts in Mysuru

ಬಂಧಿತರು ಒಂಬತ್ತು ಜನ : ಲಷ್ಕರ್ ಮೊಹಲ್ಲಾ ನಿವಾಸಿಗಳಾದ ದಿನೇಶ್ ಕುಮಾರ (30), ಪೇಮರಾಂ (22), ವಿಕ್ರಂ ಕುಮಾರ್ (19), ಬಲವಂತ ಸಿಂಗ್ (23), ಪ್ರಕಾಶ್‌ಕುಮಾರ್.ಬಿ (20), ಓಬಿಸಿಂಗ್ (38), ಆಶುಸಿಂಗ್ (19), ದೊಡ್ಡವಕ್ಕಲಗೇರಿ ನಿವಾಸಿ ಮಹೇಂದರ್ ಸಿಂಗ್ (22), ಕೆ.ಟಿ.ಸ್ಟ್ರೀಟ್ ನಿವಾಸಿ ಓಂ ಸಿಂಗ್ (21).

ಇವರನ್ನು ದಸ್ತಗಿರಿ ಮಾಡಿ ಒಟ್ಟು 40,000 ರು. ಮೌಲ್ಯದ ಇಂಟೆಕ್ಸ್ ಮೊಬೈಲ್ ಕಂಪನಿಯ ನಕಲಿ ಬಿಡಿ ಭಾಗಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ದಾಳಿ ಕಾರ್ಯವನ್ನು ಸಿ.ಸಿ.ಬಿ.ಯ ಎ.ಸಿ.ಪಿ. ಸಿ.ಗೋಪಾಲ್‌ರವರ ನೇತೃತ್ವದಲ್ಲಿ ಸಿ.ಸಿ.ಬಿ.ಯ ಇನ್ಸ್‌ಪೆಕ್ಟರ್ ಜಿ.ಸಿ.ರಾಜು, ಪಿ.ಎಸ್.ಐ. ಎಂ.ಜೆ.ಜಯಶೀಲನ್, ಎಚ್.ರಮೇಶ್, ಎ.ಎಸ್.ಐ ಶಾಂತರಾಜು ಹಾಗೂ ಸಿಬ್ಬಂದಿಗಳಾದ ಗಣೇಶ್.ಎಂ.ಆರ್, ಕೆ. ಮುರುಳಿಗೌಡ, ಶ್ರೀನಿವಾಸಪ್ರಸಾದ್, ರವಿ, ಸಂತೋಷ್, ಮಂಜುನಾಥ್, ರವಿ, ರಾಜೇಶ್ ಮತ್ತು ಲಷ್ಕರ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಕಾಂತರಾಜು ಮತ್ತು ಸಿಬ್ಬಂದಿಗಳ ತಂಡ ನಡೆಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mysuru CCB police and Lashkar police raid 3 mobile shops and have arrested 9 people who were selling fake spare parts. A case has been booked at Lashkar police station in Mysore. ಮೊಬೈಲ್‌ನ ನಕಲಿ ಬಿಡಿಭಾಗ ಮಾಡುತ್ತಿದ್ದ 9 ಜನರ ಬಂಧನ
Please Wait while comments are loading...