ಮೈಸೂರಿನಲ್ಲಿ ಇಂದು ಗಾನಕೋಗಿಲೆ ಜಾನಕಿ ಅವರ ಕೊನೆ ಸಂಗೀತ ಕಾರ್ಯಕ್ರಮ

Posted By:
Subscribe to Oneindia Kannada

ಮೈಸೂರು, ಅಕ್ಟೋಬರ್ 21: ಗಾಯನ ಕೇತ್ರದಲ್ಲಿ ಭಾರತ ಮಾತ್ರವಲ್ಲ, ವಿಶ್ವದ ಅನೇಕ ರಾಷ್ಟ್ರಗಳಲ್ಲಿ ತಮ್ಮದೇ ಆದ ಅಭಿಮಾನಿಗಳ ಪಡೆ ಹೊಂದಿರುವ ಬಹುಭಾಷಾ ಹಿರಿಯ ಗಾಯಕಿ ಎಸ್. ಜಾನಕಿ ಅವರು ಸಾಂಸ್ಕೃತಿಕ ವಿದಾಯ ಹೇಳಲಿದ್ದಾರೆ. ಎಸ್.ಜಾನಕಿ ಅವರು ಕೊನೆಯ ಕಾರ್ಯಕ್ರಮಕ್ಕೆ ಅಕ್ಟೋಬರ್ 28ರಂದು ಮೈಸೂರು ವಿಶ್ವವಿದ್ಯಾನಿಲಯದ ಬಯಲು ರಂಗಮಂದಿರ ಸಾಕ್ಷಿಯಾಗಲಿದೆ.

ಈ ಮಹಾನ್ ಗಾಯಕಿಗೂ ಹುಟ್ಟುಹಬ್ಬದ ಶುಭಾಶಯ ಹೇಳಿ!

ಹೌದು, ಈ ಕುರಿತು ಸ್ವತಃ ಎಸ್. ಜಾನಕಿಯವರೇ 'ಒನ್ಇಂಡಿಯಾಕ್ಕೆ' ತಿಳಿಸಿದ್ದಾರೆ. ನಾನು ಸಂಗೀತ ಕಲಿತಿಲ್ಲ. ಕೇವಲ ಹತ್ತು ತಿಂಗಳಷ್ಟೇ ಸಂಗೀತ ಕಲಿಯಲು ಹೋಗಿದ್ದೆ. ಆದರೆ ದೈವದತ್ತವಾಗಿ ಬಂದ ಕೊಡುಗೆಯಿಂದ ಯಾವುದೇ ಶೈಲಿ ಹಾಡುಗಳನ್ನು ಕೊಟ್ಟರೂ ಸರಾಗವಾಗಿ ಹಾಡಿದ್ದೇನೆ. ಕೆಲವರಿಗೆ ದೈವದತ್ತವಾಗಿ ಉತ್ತಮ ಧ್ವನಿ ಇರುತ್ತದೆ. ಅಂತಹವರು ಸರಾಗವಾಗಿ ಹಾಡುತ್ತಾರೆ ಎಂದರು.

Nightingale S Janaki will be ended her singing journey on Oct 28th in Mysuru

ಪ್ರಸಿದ್ಧ ಸಂಗೀತ ನಿರ್ದೇಶಕರು ನನ್ನಿಂದ ಒಳ್ಳೆಯ ಹಾಡುಗಳನ್ನು ಹಾಡಿಸಿದ್ದಾರೆ. ಅದರ ಬಗ್ಗೆ ನನಗೆ ಸಂತೃಪ್ತಿಯಿದೆ. ನನಗೀಗ 80 ವರ್ಷ. ಇನ್ನೂ ಹಾಡಬಾರದು, ಈಗ ಹಾಡುವುದನ್ನು ನಿಲ್ಲಿಸಿದರೆ ಚೆಂದ ಅನಿಸುತ್ತದೆ. ಆದ್ದರಿಂದ ಗಾಯನಕ್ಕೆ ವಿದಾಯ ಹೇಳುತ್ತಿದ್ದೇನೆ. ಈಗ ಹಾಡುವವರು ಅನೇಕ ಮಂದಿ ಇದ್ದಾರೆ. ಇಂದಿನ ಮಕ್ಕಳು ಅದ್ಭುತವಾಗಿ ಹಾಡುತ್ತಿದ್ದಾರೆ. ರಿಯಾಲಿಟಿ ಶೋಗಳಲ್ಲಿ ಮಕ್ಕಳು ಹಾಡುವುದನ್ನು ನೋಡಿದ್ದೇನೆ. ಮಕ್ಕಳಿಂದಲೇ ಕಲಿಯುವ ಅನೇಕ ವಿಷಯಗಳಿವೆ ಎಂದರು.

1952ರಲ್ಲಿ ಜಿ.ಕೆ. ವೆಂಕಟೇಶ್ ಅವರು ಮೈಸೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಿ.ಬಿ.ಶ್ರೀನಿವಾಸ್ ಅವರೊಂದಿಗೆ ಹಾಡಿದ್ದೆ. ಆದರೆ ಆ ಕಾರ್ಯಕ್ರಮ ನಡೆದ ಸ್ಥಳದ ಬಗ್ಗೆ ನನಗೆ ನೆನಪಿಲ್ಲ. ನಾಲ್ಕು ರಸ್ತೆಗಳು ಸೇರುವ ಸ್ಥಳದಲ್ಲಿದ್ದ ಮೈದಾನದಲ್ಲಿ ನಡೆದ ಈ ಕಾರ್ಯಕ್ರಮವನ್ನು ವೀಕ್ಷಿಸಲು ಭಾರೀ ಸಂಖ್ಯೆಯಲ್ಲಿ ಸಂಗೀತಪ್ರಿಯರು ಸೇರಿದ್ದರು. ಅನಂತರ ನಾನು ಮೈಸೂರಿನ ಯಾವುದೇ ಕಾರ್ಯಕ್ರಮದಲ್ಲಿ ಹಾಡಿರಲಿಲ್ಲ.

ನನ್ನ ಮಕ್ಕಳಂತಿರುವ ನವೀನ್, ಪ್ರವೀಣ್ ಮತ್ತು ಪವನ್ ಕಳೆದ ಹತ್ತು ವರ್ಷಗಳಿಂದಲೂ ಮೈಸೂರಿನಲ್ಲಿ ಕಾರ್ಯಕ್ರಮ ನಡೆಸಿಕೊಡುವಂತೆ ಕೇಳುತ್ತಿದ್ದರು. ಹಲವು ಅಡೆತಡೆಗಳಿಂದ ಅದು ಈಡೇರಲಿಲ್ಲ. ಅವರ ಮೇಲಿನ ಪ್ರೀತಿಗಾಗಿ ಅಕ್ಟೋಬರ್ 28ರಂದು ಹಾಡುತ್ತಿದ್ದೇನೆ. ಅದುವೇ ನನ್ನ ಕಡೆಯ ಕಾರ್ಯಕ್ರಮವಾಗಿರುತ್ತದೆ ಎಂದರು.

ವಯಸ್ಸಾದ ಹಿನ್ನೆಲೆಯಲ್ಲಿ ಗಾಯನದಿಂದ ಹಿಂದೆ ಸರಿಯುತ್ತಿದ್ದೇನೆ. ಆ ನಂತರ ಯಾವುದೇ ಕಾರ್ಯಕ್ರಮದಲ್ಲೂ ಮುಖ್ಯ ಅತಿಥಿಯಾಗಿಯೂ ಭಾಗವಹಿಸುವುದಿಲ್ಲ . ಟಿವಿ ಹಾಗೂ ಪತ್ರಿಕೆಗಳಿಗೆ ಸಂದರ್ಶನವನ್ನು ನೀಡುವುದಿಲ್ಲ ಎಂದು ತಿಳಿಸಿದರು.

ಮೈಸೂರಿನ ನಂಟು ನೆನಪಿಸಿಕೊಂಡ ಗಾನ ಕೋಗಿಲೆ:
ಸಾಂಸ್ಕೃತಿಕ ನಗರಿ ಮೈಸೂರಿಗೆ ನಾನು ಆಗಾಗ ಬಂದು ಹೋಗಿದ್ದೇನೆ. ನಾಲ್ಕು ವರ್ಷದ ಹಿಂದೆ ಮೈಸೂರಿಗೆ ಬಂದು ಇಲ್ಲಿನ ಮಕ್ಕಳೊಂದಿಗೆ ಮೆಟ್ಟಿಲುಗಳ ಮೂಲಕ ಚಾಮುಂಡಿ ಬೆಟ್ಟವನ್ನು ಹತ್ತಿ ದೇವಿಯ ದರ್ಶನ ಪಡೆದಿದ್ದೇನೆ. ಅರಮನೆಯ ಸೊಬಗನ್ನು ಕಣ್ತುಂಬಿಕೊಂಡಿದ್ದೇನೆ. ಕೆಆರ್ ಎಸ್ ಅನ್ನು ವೀಕ್ಷಿಸಿದ್ದೇನೆ. ಮೈಸೂರು ಒಂದು ಸುಂದರ ನಗರ ಎಂದು ಅವರು ಬಣ್ಣಿಸಿದರು.

ದೇಶದಲ್ಲಿಯೇ ಉತ್ತಮ ವಿಶ್ವವಿದ್ಯಾನಿಲಯ ಎಂಬ ಕೀರ್ತಿಗೆ ಪಾತ್ರವಾಗಿರುವ ಮೈಸೂರು ವಿವಿಯಿಂದ ಗೌರವ ಡಾಕ್ಟರೇಟ್ ಸ್ವೀಕರಿಸಿದ್ದು ಹೆಮ್ಮೆ ತಂದಿದೆ. ಮೈಸೂರಿನ ಕಾರ್ಯಕ್ರಮಕ್ಕೆ ಸಂಗೀತ ಪ್ರಿಯರನ್ನು, ನನ್ನ ಅಭಿಮಾನಿಗಳನ್ನು ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಕಾರ್ಯಕ್ರಮಕ್ಕೆ ತಮಿಳುನಾಡು, ಆಂಧ್ರ ಮತ್ತು ಕೇರಳದಿಂದಲೂ ನನ್ನ ಅಭಿಮಾನಿಗಳು ಬರುವುದಾಗಿ ತಿಳಿಸಿದ್ದಾರೆ. ಇದು ನನಗೆ ಸಂತಸ ತಂದಿದೆ ಎಂದು ತಿಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Nightingale S Janaki will be ended her singing journey on Oct 28th in Mysuru. From that day she will not sing songs in any stage and she will not participate in any recordings, S Janaki herself told to Oneindia in Mysuru.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ