ಮೈಸೂರಿಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆಯಲ್ಲಿ ಹೊಸ ದಾಖಲೆ

Posted By:
Subscribe to Oneindia Kannada

ಮೈಸೂರು, ಜೂನ್ 16 : ಪ್ರವಾಸೋದ್ಯಮ ಕೇಂದ್ರ ಹಾಗೂ ಸಾಂಸ್ಕೃತಿಕ ನಗರಿ ಮೈಸೂರು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನೂತನ ದಾಖಲೆ ನಿರ್ಮಿಸಿದೆ. ಪ್ರವಾಸಿಗರ ಸ್ವರ್ಗ ಮೈಸೂರಿಗೆ ಬೇಸಿಗೆ ರಜೆ ಹಿನ್ನೆಲೆಯಲ್ಲಿ 2017ರ ಏಪ್ರಿಲ್, ಮೇ ತಿಂಗಳುಗಳಲ್ಲಿ ದಾಖಲೆಯ ಸಂಖ್ಯೆಯಲ್ಲಿ ಪ್ರವಾಸಿಗರು ದಾಂಗುಡಿ ಇಟ್ಟಿದ್ದರು. ಏಪ್ರಿಲ್ ತಿಂಗಳಿನಲ್ಲಿ ಅಧಿಕೃತ ಅಂಕಿ-ಅಂಶಗಳ ಪ್ರಕಾರ ಮೈಸೂರು ಅರಮನೆಯನ್ನು 3,19,437 ಮಂದಿ ವೀಕ್ಷಿಸಿದ್ದು, ಇದು ನೂತನ ದಾಖಲೆಯನ್ನು ನಿರ್ಮಿಸಿದೆ.

ಇದುವರೆಗೆ ಏಪ್ರಿಲ್‍ನಲ್ಲಿ 3 ಲಕ್ಷ ಪ್ರವಾಸಿಗರು ಅರಮನೆಗೆ ಭೇಟಿ ನೀಡಿದ ನಿದರ್ಶನ ಈವರೆಗೆ ಇಲ್ಲ. ಅದೇ ರೀತಿ ಮೇ ಮಾಹೆಯಲ್ಲಿ 5 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಆಗಮಿಸಿದ್ದರು. ಇದೂ ಕೂಡ ಸಾರ್ವಕಾಲಿಕ ದಾಖಲೆಯಾಗಿದೆ. ಕಳೆದ ವರ್ಷ ಏಪ್ರಿಲ್ ಮಾಹೆಯಲ್ಲಿ 2,88,332 ಮಂದಿ ವೀಕ್ಷಕರು ಅರಮನೆಗೆ ಭೇಟಿ ನೀಡಿದ್ದರು. ಇದು ಈವರೆಗಿನ ದಾಖಲೆಯಾಗಿತ್ತು. ಇದನ್ನು ಮೀರಿ 31 ಸಾವಿರಕ್ಕೂ ಹೆಚ್ಚು ಮಂದಿ ಈ ಬಾರಿ ಅರಮನೆ ವೀಕ್ಷಣೆಗೆ ಆಗಮಿಸಿದ್ದಾರೆ.

ರಾತ್ರಿ 10 ಗಂಟೆ ಮೇಲೆ ಚಾಮುಂಡಿ ಬೆಟ್ಟಕ್ಕೆ ಕಾಲಿಟ್ಟರೆ ಕೇಸ್!

New Record in Number of tourists to Mysore during 2017 Summer

ಅದೇ ರೀತಿ ಮೇ ತಿಂಗಳಿನಲ್ಲಿ 5,27,186 ಮಂದಿ ಪ್ರವಾಸಿಗರು ಆಗಮಿಸಿ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದ್ದಾರೆ. ಏಪ್ರಿಲ್ ಕೊನೆ ಎರಡು ದಿನ ಸುಮಾರು 47 ಸಾವಿರ ಮಂದಿ ಹಾಗೂ ಮೇ 1 ರಂದು 26 ಸಾವಿರಕ್ಕೂ ಹೆಚ್ಚು ಮಂದಿ ಭೇಟಿ ನೀಡಿ ಅರಮನೆಯನ್ನು ವೀಕ್ಷಿಸಿದ್ದಾರೆ. ಮೇ ತಿಂಗಳಿನಲ್ಲಿ 14 ರಂದು ಅತಿ ಹೆಚ್ಚು ಮಂದಿ ಅಂದರೆ 28,943 ಮಂದಿ ಭೇಟಿ ನೀಡಿದ್ದರು. . ಅದೇ ರೀತಿ ಮೈಸೂರು ಮೃಗಾಲಯಕ್ಕೂ ದಾಖಲೆ ಪ್ರಮಾಣದಲ್ಲಿ ವೀಕ್ಷಕರು ಭೇಟಿ ನೀಡಿದ್ದು, ಏಪ್ರಿಲ್ ಮತ್ತು ಮೇ ಮಾಹೆಯಲ್ಲಿ ಹಿಂದಿನ ಎಲ್ಲಾ ದಾಖಲೆಗಳನ್ನೂ ಮುರಿದಿದ್ದಾರೆ.

ಮೈಸೂರು: ಯೋಗ ದಿನಾಚರಣೆ ಕಾರ್ಯಕ್ರಮ ಬೇರೆಡೆಗೆ ಶಿಫ್ಟ್

ಏಪ್ರಿಲ್‍ನಲ್ಲಿ ಇದೇ ಮೊದಲ ಬಾರಿಗೆ 3 ಲಕ್ಷಕ್ಕೂ ಹೆಚ್ಚು ಮಂದಿ ಭೇಟಿ ನೀಡಿದ್ದರೆ, ಮೇನಲ್ಲಿ 4.93 ಲಕ್ಷ ವೀಕ್ಷಕರೊಂದಿಗೆ ಅತಿ ಹೆಚ್ಚು ಮಂದಿ ಭೇಟಿ ನೀಡಿ ಇತಿಹಾಸ ಸಾವಿರ ಮಂದಿ ಭೇಟಿ ನೀಡಿದ್ದರು. ಈ ಮೂರು ದಿನ (ಮೇ 1 ಸೇರಿ)ಗಳಲ್ಲಿ ಸುಮಾರು 73 ಸಾವಿರ ಪ್ರವಾಸಿಗರು ಅರಮನೆಗೆ ಟಿಕೆಟ್ ಮೂಲಕ ಪ್ರವೇಶ ಪಡೆದು ವೀಕ್ಷಿಸಿದ್ದಾರೆ.

30 ಸಾವಿರಕ್ಕೂ ಹೆಚ್ಚು ಮಂದಿ ಇದೇ ಅವಧಿಯಲ್ಲಿ ಅರಮನೆ ಆವರಣದಿಂದಲೇ ಅರಮನೆಯ ವೈಭವವನ್ನು ಕಣ್ತುಂಬಿಕೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಹೀಗಾಗಿ 1 ಲಕ್ಷ ಪ್ರವಾಸಿಗರು ಮೂರು ದಿನಗಳ ಅವಧಿಯಲ್ಲಿ ಆಗಮಿಸಿದ್ದು, ದಾಖಲೆ ನಿರ್ಮಾಣವಾಗಿದೆ. ಮೇ ತಿಂಗಳಿನಲ್ಲಿ ಈವರೆಗಿನ ದಾಖಲೆ 4,97,916 ಆಗಿತ್ತು. ಆದರೆ ಈ ಬಾರಿ 30 ನಿರ್ಮಿಸಿದ್ದಾರೆ. ಶಾಲಾ-ಕಾಲೇಜುಗಳಿಗೆ ಬೇಸಿಗೆ ರಜೆ ಇದ್ದ ಕಾರಣ ಹಾಗೂ ಪ್ರವಾಸಕ್ಕೆ ಪ್ರಶಸ್ತ ಸ್ಥಳವಾದ ಹಿನ್ನೆಲೆಯಲ್ಲಿ ಎಲ್ಲರೂ ಮೈಸೂರಿನತ್ತ ಮುಖ ಮಾಡಿದ್ದರು.

ಮೈಸೂರಿನಲ್ಲಿ ಟ್ರಿಣ್-ಟ್ರಿಣ್ ಸೈಕಲ್ ಯೋಜನೆಗೆ ಸಿದ್ದರಾಮಯ್ಯ ಚಾಲನೆ

ರಾಜ್ಯವಷ್ಟೇ ಅಲ್ಲ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಸೇರಿದಂತೆ ದೇಶದ ಮೂಲೆ, ಮೂಲೆಗಳಿಂದ ಪ್ರವಾಸಿಗರು ಮೈಸೂರಿಗೆ ಆಗಮಿಸಿದ್ದರು. ವಿದೇಶಿ ಪ್ರವಾಸಿಗರೂ ಹೆಚ್ಚಿನ ಸಂಖ್ಯೆಯಲ್ಲಿ ಮೈಸೂರಿಗೆ ಬಂದಿದ್ದಾರೆ. ಮೈಸೂರು ಜಿಲ್ಲೆ ಮತ್ತು ಸುತ್ತಮುತ್ತಲಿನ ಪ್ರವಾಸಿ ತಾಣಗಳು ತುಂಬಿ ತುಳುಕಿದ್ದವು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
During this year's summer the number of visitors to Mysore as tourists has been tremendously increased and it broke the previous records.
Please Wait while comments are loading...