• search

ಅಕ್ಟೋಬರ್ 1 ರಿಂದ ರಾಷ್ಟ್ರವ್ಯಾಪ್ತಿ ಲಾರಿ, ಟ್ರಕ್ ಮುಷ್ಕರ

By Mahesh
Subscribe to Oneindia Kannada
For mysore Updates
Allow Notification
For Daily Alerts
Keep youself updated with latest
mysore News

  ಮೈಸೂರು, ಸೆ. 27: ರಾಷ್ಟ್ರೀಯ ಹೆದ್ದಾರಿಗಳ ಟೋಲ್ ವಸೂಲಿ ವಿರೋಧಿಸಿ ರಾಷ್ಟ್ರವ್ಯಾಪ್ತಿ ಲಾರಿ ಹಾಗೂ ಟ್ರಕ್ ಮುಷ್ಕರ ಅಕ್ಟೋಬರ್ 1 ರಿಂದ ಆರಂಭವಾಗಲಿದೆ. ಕರ್ನಾಟಕ ಸೇರಿದಂತೆ ದೇಶದೆಲ್ಲೆಡೆ ಸುಮಾರು 93 ಲಕ್ಷಕ್ಕೂ ಸರಕು ಸಾಗಣೆ ವಾಹನಗಳು ಸಂಚಾರ ಸ್ಥಗಿತಗೊಳಿಸಲಿವೆ ಎಂದು ಕರ್ನಾಟಕ ಲಾರಿ ಮಾಲೀಕರು ಹಾಗೂ ಏಜೆಂಟ್ ಗಳ ಸಂಘದ ಅಧ್ಯಕ್ಷ ಜಿ.ಆರ್ ಷಣ್ಮುಗಪ್ಪ ಹೇಳಿದ್ದಾರೆ.

  ಆಗಸ್ಟ್ 28 ರಂದು ದೆಹಲಿಯಲ್ಲಿ ನಡೆದ ಅಖಿಲ ಭಾರತ ವಾಹನ ಸಾಗಣೆ ಕಾಂಗ್ರೆಸ್ ನ ಕಾರ್ಯಕಾರಿ ಸಮಿತಿ (ಎಐಎಂಟಿಸಿ) ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಅಕ್ಟೋಬರ್ 1ರಿಂದ ರಾಷ್ಟ್ರವ್ಯಾಪ್ತಿ ಸರಕು ಸಾಗಣೆ ವಾಹನಗಳ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಗೊಳ್ಳಲಿದೆ ಎಂದರು. [ಮರಳಿನ ಬೆಲೆ ಗಗನಮುಖಿ, ಕಟ್ಟಡ ನಿರ್ಮಾಣಕ್ಕೆ ಬರೆ]

  ಟೋಲ್ ಶುಲ್ಕ ಸಂಗ್ರಹ ಪಾರದರ್ಶಕವಾಗಿಲ್ಲ: ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಸಂಗ್ರಹ ಪಾರದರ್ಶಕವಾಗಿಲ್ಲ. ಇದರಿಂದ ಟ್ರಕ್ ಮಾಲೀಕರಿಗೆ ಭಾರಿ ನಷ್ಟವಾಗುತ್ತಿದೆ. ಸರಿಯಾದ ಸಮಯಕ್ಕೆ ಸರಕು ಸಾಗಣಿಕೆ ಕೂಡಾ ಸಾಧ್ಯವಾಗುತ್ತಿಲ್ಲ. ಪ್ರತಿವರ್ಷ ಟೋಲ್ ಗೇಟ್ ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಗುತ್ತಿಗೆದಾರರಿಗೆ ಮಾತ್ರ ಅನುಕೂಲವಾಗುತ್ತಿದೆ. ವಾರ್ಷಿಕ ಟೋಲ್ ಪರ್ಮಿಟ್ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

  Nationwide Truck operators Strike From Oct 1 : G.R. Shanmugappa

  ಪ್ರತಿ ದಿನಕ್ಕೆ 400 ಕಿ.ಮೀ ದೂರ ಕ್ರಮಿಸುತ್ತಿದ್ದ ಟ್ರಕ್ ಗಳು ಈಗ 250 ಕಿ.ಮೀ ದಾಟುವುದು ಕಷ್ಟವಾಗುತ್ತಿದೆ. ಇಂಧನ ಬಳಕೆ ಕೂಡಾ ಇಲ್ಲಿ ಗಮಿಸಬೇಕಾಗುತ್ತದೆ. ನಿಧಾನಗತಿ ಸಾಗಾಟ, ಇಂಧನ ಬಳಕೆ ವ್ಯಯ ಲೆಕ್ಕ ಹಾಕಿದರೆ 87,000 ಕೋಟಿ ರು ನಷ್ಟವಾಗುತ್ತಿದೆ ಎಂದರು.

  ವಾರ್ಷಿಕ ಟೋಲ್ ಸಂಗ್ರಹ ವ್ಯವಸ್ಥೆ: ವಾರ್ಷಿಕ ಟೋಲ್ ಸಂಗ್ರಹ ವ್ಯವಸ್ಥೆ ಸೂಕ್ತವಾಗಿದ್ದು ಇದರಿಂದ ವಾರ್ಷಿಕ 1 ಲಕ್ಷ ಕೋಟಿ ಮೌಲ್ಯದ ಇಂಧನ ಉಳಿತಾಯ ಸಾಧ್ಯ ಎಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಐಐಎಂ) ಸಮೀಕ್ಷೆ ವರದಿಯಿಂದ ತಿಳಿದು ಬಂದಿದೆ.

  ಆದರೆ, ಸರ್ಕಾರ ಈ ಬಗ್ಗೆ ಗಮನ ಹರಿಸದೆ ಸ್ಪೀಡ್ ಗವರ್ನರ್ಸ್ ಅಳವಡಿಕೆಗೆ ಬಗ್ಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಹೇಳಿದರು. ದೇಶದಲ್ಲಿ ಸುಮಾರು 373 ಟೋಲ್ ಪ್ಲಾಜಗಳಿದ್ದು, 62 ಟೋಲ್ ಪ್ಲಾಜಗಳು ಹೂಡಿಕೆ (13,415 ಕೋಟಿ ರು) ಗಿಂತ 21,897 ಕೋಟಿ ರು ಅಧಿಕ ಮೊತ್ತವನ್ನು ಈಗಾಗಲೇ ಸಂಗ್ರಹಿಸಿವೆ. ಅದರೂ, ಶೇ 100ರಷ್ಟು ಟೋಲ್ ಶುಲ್ಕ ಸಂಗ್ರಹ ಜಾರಿಯಲ್ಲಿದೆ. ಹೀಗಾಗಿ ವಾರ್ಷಿಕ ಶುಲ್ಕ ಸಂಗ್ರಹ ವ್ಯವಸ್ಥೆಗೆ ಆಗ್ರಹಿಸುತ್ತಿದ್ದೇವೆ ಎಂದು ಹೇಳಿದರು.

  ಇನ್ನಷ್ಟು ಮೈಸೂರು ಸುದ್ದಿಗಳುView All

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Federation of Karnataka State Lorry Owners and Agents Association's President G.R Shanmugappa today (Sept 27) announced that Goods vehicles in the State will stay off roads on Oct.1 as part of a nation-wide strike protesting against the collection of toll fee on Highways.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more