ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕದಲ್ಲಿ ಬಿಜೆಪಿ ಅಲೆ ಅಲ್ಲ, ಬಿರುಗಾಳಿ ಎದ್ದಿದೆ: ಮೋದಿ

By Manjunatha
|
Google Oneindia Kannada News

ಮೈಸೂರು, ಮೇ 01: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಚಾಮರಾಜನಗರ ಸಮೀತ ಸಂತೇಮರನಹಳ್ಳಿಯಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡುತ್ತಿದ್ದಾರೆ.

ಇಂದು ಬೆಳಿಗ್ಗೆ ಮೈಸೂರಿಗೆ ಆಗಮಿಸಿರುವ ಅವರು ಮೇ 8ರವರೆಗೆ ರಾಜ್ಯದ ವಿವಿದೆಡೆ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

Narendra Modi election rally in Mysuru

Newest FirstOldest First
12:52 PM, 1 May

ಸರ್ಕಾರ ಬದಲಿಸಿ, ಬಿಜೆಪಿ ಗೆಲ್ಲಿಸಿ ಘೋಷಣೆಗಳನ್ನು ಕೂಗಿಸಿದ ನರೇಂದ್ರ ಮೋದಿ, ಕೊನೆಯಲ್ಲಿ ಮತ್ತೆ ಕನ್ನಡ ಮಾತನಾಡಿ ಭಾಷಣ ಮುಗಿಸಿದರು.
12:51 PM, 1 May

ನೀವು ನನಗೆ ಬೆಂಬಲ ನೀಡಿ, ನಾನು ನಿಮಗೆ ಬೆಂಬಲ ನೀಡುತ್ತೇನೆ. ಎಲ್ಲರೂ ಸೇರಿ ಕರ್ನಾಟಕದ ಅಭಿವೃದ್ಧಿ ಮಾಡೋಣ, ಮೇ 12ರಂದು ಬಿಜೆಪಿಗೆ ಮತ ನೀಡಿ.
12:48 PM, 1 May

88000 ಕೋಟಿ ಮೊತ್ತದ ಅಭಿವೃದ್ಧಿ ಕಾರ್ಯ ಪ್ರಸ್ತುತ ನಡೆಯುತ್ತಿದೆ ಆದರೆ ಇಲ್ಲಿಯೂ ಕೂಡ ಕಾಂಗ್ರೆಸ್‌ ತೊಡಕು ತಂದೊಡ್ಡುತ್ತಿದೆ.
12:47 PM, 1 May

ಚಾಮರಾಜನಗರ ರೈಲ್ವೇ ಯೋಜನೆ ಜಾರಿ ಆಗಿ ಐದು ವರ್ಷವಾದರೂ ಪ್ರಗತಿಯಾಗಿಲ್ಲ. ಕಾಂಗ್ರೆಸ್‌ನ ರಾಜಕಾರಣ ವಿಕಾಸದ ಹಾದಿಗೆ ಮಾರಕವಾಗಿದೆ ಯೋಜನೆ ಜಾರಿಯಾಗಿದ್ದರೂ ಕರ್ನಾಟಕ ಸರ್ಕಾರ ಭೂಮಿ ನೀಡಲು ಹಿಂದೆ ಮುಂದೆ ನೋಡುತ್ತಿದೆ ಹಾಗಾಗಿ ರೈಲ್ವೆ ಯೋಜನೆ ಇನ್ನೂ ನೆನೆಗುದಿಯಲ್ಲಿದೆ.
12:46 PM, 1 May

ರೈತ ಸೇರಿದಂತೆ ಎಲ್ಲ ವರ್ಗದ ಜನರ ಜೀವನ ಮಟ್ಟವನ್ನು ಹೆಚ್ಚು ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಆದರೆ ಕಾಂಗ್ರೆಸ್‌ ಅಭಿವೃದ್ಧಿಯಲ್ಲೂ ರಾಜಕಾರಣ ಮಾಡುತ್ತಿದೆ.
12:45 PM, 1 May

ಕೇಂದ್ರ ಸರ್ಕಾರದ ಯೋಜನೆಗಳ ವರದಿ ಒಪ್ಪಿಸಿದ ಮೋದಿ, ಕರ್ನಾಟಕಕ್ಕೆ ನೀಡಿರುವ ಯೋಜನೆಗಳ ಬಗ್ಗೆಯೂ ಮಾಹಿತಿ ನೀಡಿದರು.
12:43 PM, 1 May

2022ರೊಳಗೆ ರೈತರ ಆದಾಯವನ್ನು ಹೆಚ್ಚು ಮಾಡುವ ನಿರ್ಣಯ ಮಾಡಿದ್ದೇವೆ, ಈ ಬಗ್ಗೆ ಕಾರ್ಯಪ್ರವೃತ್ತರಾಗಿದ್ದೇವೆ.
Advertisement
12:42 PM, 1 May

ಚಾಮರಾಜನಗರದಲ್ಲಿ ಕುಡಿಯುವ ನೀರಿನ ತೊಂದರೆ ಇದೆ, ಇಲ್ಲಿನ ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುತ್ತಿಲ್ಲ, ಪ್ರವಾಸೋದ್ಯಮಕ್ಕೆ ಅವಕಾಶ ಇದ್ದರೂ ಕೂಡ ಸರ್ಕಾರ ನಿರ್ಲಕ್ಷ್ಯ ವಹಿಸಿದೆ.
12:41 PM, 1 May

ಎಲ್ಲೆಲ್ಲಿ ಕಾಂಗ್ರೆಸ್‌ ಇರುತ್ತದೊ ಅಲ್ಲೆಲ್ಲಾ ಅಪರಾಧ ಮತ್ತು ಭ್ರಷ್ಟಾಚಾರ ತಾಂಡವವಾಡುತ್ತದೆ. ಸಾಮಾನ್ಯ ನಾಗರೀಕರ ಮಾತಿಗೆ ಬೆಲೆ ಇರುವುದಿಲ್ಲ, ಅಭಿವೃದ್ಧಿ ನಿಂತೇ ಹೋಗುತ್ತದೆ.
12:40 PM, 1 May

ನಾನು ಗುಜರಾತ್‌ನಲ್ಲಿದ್ದಾಗ ಕರ್ನಾಟಕದ ಬಗ್ಗೆ ಕೇಳಿ ಹೆಮ್ಮೆ ಪಡುತ್ತಿದ್ದೆ, ಆದರೆ ಕಳೆದ 5 ವರ್ಷ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದು ಬಿದ್ದಿರುವುದು ನೋಡಿದರೆ ಬೇಸರವಾಗುತ್ತದೆ, ಸಿಟ್ಟು ಬರುತ್ತದೆ, ಇಲ್ಲಿ ಮಹಿಳೆಯರು, ಮಕ್ಕಳು ಸುರಕ್ಷಿತರಲ್ಲ, ಇಲ್ಲಿ ಲೋಕಾಯುಕ್ತ ಕೂಡ ಸುರಕ್ಷಿತವಲ್ಲ ಎಂಬುದು ಸಾಬೀತಾಗಿದೆ.
12:39 PM, 1 May

12 ಮೇ ರಂದು ನಿಮ್ಮ ಆಯ್ಕೆ ಭ್ರಷ್ಟಾಚಾರಿಗಳಿ ಶಿಕ್ಷೆ ಕೊಡುವ ನನ್ನ ನಿರ್ಧಾರಕ್ಕೆ ಶಕ್ತಿ ನೀಡಲಿದೆ. ನೋಟ್ ಬ್ಯಾನ್ ಆದ ನಂತರ ಸಿಕ್ಕಿ ಹಾಕಿಕೊಂಡ ಹಣ ಹೆಸರುವಂತರದ್ದೇ ಆಗಿತ್ತು ವಿನಃ ಕಾರ್ಮಿಕರದ್ದಲ್ಲ.
12:37 PM, 1 May

10% ಕಮಿಷನ್‌ ಸರ್ಕಾರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳು ಮಾಡಿದೆ, 12 ಮೇ ನಂದು ಕರ್ನಾಟಕದ ಭವಿಷ್ಯವನ್ನು ಆಯ್ಕೆ ಮಾಡಬೇಕಿದೆ, ಬಿಜೆಪಿಗೆ ಮತ ಹಾಕಿ ಕರ್ನಾಟಕದ ಭಾಗ್ಯವನ್ನು ಬದಲಾಯಿಸಿ
Advertisement
12:36 PM, 1 May

ಕುಟುಂಬ ರಾಜಕಾರಣ ಪ್ರಜಾಪ್ರಭುತ್ವವನ್ನು, ದೇಶವನ್ನು ಹಾಳುಮಾಡಿದೆ. ಕರ್ನಾಟಕದಲ್ಲಿ ಕುಟುಂಬ ರಾಜಕೀಯ ನಡೆಯಲು ಅವಕಾಶ ಕೊಡಬೇಡಿ
12:35 PM, 1 May

'ಮುಖ್ಯಮಂತ್ರಿಗಳಿಗೆ 2+1 ಸೂತ್ರ ನಡೆಯುತ್ತಿದ್ದರೆ, ಮಂತ್ರಿಗಳಿಗೆ 1+1 ಸೂತ್ರ ನಡೆಯುತ್ತಿದೆ'. ಕುಟುಂಬ ರಾಜಕೀಯದ ಬಗ್ಗೆ ಮೋದಿ ವಾಗ್ದಾಳಿ.
12:34 PM, 1 May

ಸಿದ್ದರಾಮಯ್ಯ ಅವರು ಸೋಲಿನ ಭಯದಿಂದ ಎರಡು ಕಡೆ ಚುನಾವಣೆಗೆ ನಿಂತಿದ್ದಾರೆ, ಕಳೆದ ಬಾರಿ ಗೆದ್ದಿದ್ದ ಕ್ಷೇತ್ರದಿಂದ ಅವರ ಮಗನನ್ನು ಬಲಿ ಕೊಡಲು ತಯಾರಿ ನಡೆಸಿದ್ದಾರೆ.
12:33 PM, 1 May

ಕರ್ನಾಟಕದಲ್ಲಿ 2+1 ರಾಜಕೀಯ ನಡೆಯುತ್ತಿದೆ. ಸಿದ್ದರಾಮಯ್ಯ ಅವರು ಎರಡು ಕ್ಷೇತ್ರದಿಂದ ಸ್ಪರ್ಧಿಸಿ ಮಗನಿಗೆ ಒಂದು ಕ್ಷೇತ್ರದಿಂದ ಸೀಟು ಕೊಡಿಸಿದ್ದಾರೆ. ಇದನ್ನು ನಾನು 2+1 ಸಂಸ್ಕೃತಿ ಎನ್ನುತ್ತೇನೆ.
12:32 PM, 1 May

'ವಿಶ್ವೇಶ್ವರಯ್ಯ ಅವರ ಹೆಸರನ್ನು 5 ಬಾರಿಯಾದರೂ ಉಲ್ಲೇಖ ಮಾಡಿ ಬಿಡಿ ಸಾಕು' ಮತ್ತೆ ರಾಹುಲ್ ಗಾಂಧಿ ಕಾಲೆಳೆದ ಮೋದಿ. ರಾಹುಲ್ ಗಾಂಧಿ ವಿಶ್ವೇಶ್ವರಯ್ಯ ಅವರ ಹೆಸರು ಹೇಳಲು ಕಷ್ಟಪಟ್ಟಿದ್ದರು.
12:31 PM, 1 May

'ಕೈಯಲ್ಲಿ ಕಾಗದ ಹಿಡಿದುಕೊಳ್ಳದೆ, ಸತತವಾದಿ 15 ನಿಮಿಷ ಕರ್ನಾಟಕ ಕಾಂಗ್ರೆಸ್‌ ಸರ್ಕಾರದ ಸಾಧನೆಗಳ ಬಗ್ಗೆ ಹೇಳಿ ನೋಡೋಣ' ಎಂದು ರಾಹುಲ್ ಗಾಂಧಿಗೆ ಸವಾಲು ಹಾಕಿದ ಮೋದಿ
12:29 PM, 1 May

'ಕಾಂಗ್ರೆಸ್‌ನವರ ಹೆಸರುವಂತರು, ನಾವು ಕಾರ್ಮಿಕರು, ಬಿಜೆಪಿಗರು ನಿಮ್ಮ ಮುಂದೆ ಹೇಗೆ ಕುಳಿತುಕೊಳ್ಳಲು ಸಾಧ್ಯ' ರಾಹುಲ್‌ ಬಗ್ಗೆ ವ್ಯಂಗ್ಯ ಮಾಡಿದ ಮೋದಿ
12:28 PM, 1 May

ರಾಹುಲ್ ಗಾಂಧಿ 15 ನಿಮಿಷ ಮಾತನಾಡುವುದೇ ದೊಡ್ಡ ಸಂಗತಿ, 15 ನಿಮಿಷ ನಾನು ಕೂತುಕೊಳ್ಳುವುದಿಲ್ಲ ಎಂಬುದು ಕೇಳಿದರೆ ನಗು ಬರುತ್ತದೆ.
12:27 PM, 1 May

ರಾಹುಲ್ ಗಾಂಧಿ ಇತ್ತೀಚೆಗೆ ನನಗೆ ಸವಾಲು ಹಾಕಿದ್ದಾರೆ, ಅವರು ಹೇಳಿದ್ದರು 'ನಾನು ಸಂಸತ್‌ನಲ್ಲಿ 15 ನಿಮಿಷ ಮಾತನಾಡಿದರೆ, ನರೇಂದ್ರ ಮೋದಿ ಕುಳಿತುಕೊಳ್ಳಲೇ ಸಾಧ್ಯವಿಲ್ಲ' ಎಂಬುದು ಅವರ ಸವಾಲು.
12:25 PM, 1 May

2014ರಲ್ಲಿ ಕರ್ನಾಟಕದ 39 ಹಳ್ಳಿಗಳಲ್ಲಿ ವಿದ್ಯುತ್‌ ಇರಲಿಲ್ಲ, ನಮ್ಮ ಯೋಜನೆಗಳಿಂದ ವಿದ್ಯುತ್ ತಲುಪಿದೆ. ಆದರೆ ಕಾಂಗ್ರೆಸ್‌ ಉತ್ತರ ಕೊಡಬೇಕು, 2014ರ ಮುಂಚೆ ನಾಲ್ಕು ವರ್ಷಗಳಲ್ಲಿ ಎರಡು ಹಳ್ಳಿಗಳಿಗೆ ಮಾತ್ರ ವಿದ್ಯುತ್ ತಲುಪಿತ್ತು ಆದರೆ ನೀವು ನಮ್ಮನ್ನು ಪ್ರಶ್ನೆ ಮಾಡುತ್ತೀರಿ.
12:23 PM, 1 May

ಮನಮೋಹನ್ ಸಿಂಗ್, ಸೋನಿಯಾ ಗಾಂಧಿ ಅವರುಗಳು ಎಲ್ಲಾ ಹಳ್ಳಿಗಳಿಗೆ, ಎಲ್ಲಾ ಮನೆಗಳಿಗೆ ವಿದ್ಯುತ್ ಕೊಡುತ್ತೇವೆ ಎಂದಿದ್ದರು ಆದರೆ ಏಕೆ ಮಾಡಲಿಲ್ಲ, ಏಕೆ ಜನರನ್ನು ದಾರಿ ತಪ್ಪಿಸುವ ಕಾರ್ಯ ಮಾಡಿದರು ಎಂದು ನಾವು ಪ್ರಶ್ನಿಸಬೇಕಿದೆ.
12:20 PM, 1 May

ರಾಹುಲ್ ಗಾಂಧಿಗೆ ದೇಶದ ಇತಿಹಾಸ ಗೊತ್ತಿಲ್ಲ, ಅವರಿಗೆ ವಂದೇ ಮಾತರಂ ಬಗ್ಗೆ ಗೌರವ ಇಲ್ಲ, ಅವರಿಗೆ ಅವರದ್ದೇ ಪಕ್ಷದ ನಾಯಕರ ಬಗ್ಗೆಯೂ ಗೊತ್ತಿಲ್ಲ.
12:19 PM, 1 May

ಕೇವಲ ಹಳ್ಳಿಗಳಿಗೆ ವಿದ್ಯುತ್ ತಲುಪಿಸಿ ನಾವು ಸುಮ್ಮನೆ ಕೂರುವರಲ್ಲ, ನಾವು ಎಲ್ಲಾ ಮನೆಗಳಿಗೆ ವಿದ್ಯುತ್ ನೀಡುವ ಪ್ರಯತ್ನ ಮಾಡುತ್ತಿದ್ದೇವೆ. ಆದರೆ ನಮ್ಮ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿದ ಕಾಂಗ್ರೆಸ್‌ 60 ವರ್ಷ ಆಡಳಿತ ಮಾಡಿದರೂ ಕೋಟ್ಯಾಂತರ ಮನೆಗಳಿಗೆ ಏಕೆ ವಿದ್ಯುತ್ ತಲುಪಲಿಲ್ಲ ಎಂದು ಪ್ರಶ್ನಿಸುತ್ತೇನೆ.
12:17 PM, 1 May

ಕಾಂಗ್ರೆಸ್‌ನ ಹೊಸ ಅಧ್ಯಕ್ಷರು ಉತ್ಸಾಹದಲ್ಲಿ ಏನೇನೊ ಮಾತನಾಡಿಬಿಡುತ್ತಾರೆ, ಹಳ್ಳಿಗಳಿಗೆ ವಿದ್ಯುತ್‌ ತಲುಪಿಸಲು ಸಹಾಯ ಮಾಡಿದ ಕಾರ್ಮಿಕರಿಗಾಗಿ ರಾಹುಲ್ ಅವರ ಬಾಯಿಂದ ಕೆಲವು ಒಳ್ಳೆಯ ಶಬ್ದ ಬಂದಿದ್ದರೆ ಚೆನ್ನಾಗಿರುತ್ತಿತ್ತು. ಆದರೆ ಅವರಿಂದ ಒಳ್ಳೆಯ ಮಾತಿನ ನಿರೀಕ್ಷೆ ಮಾಡುವುದು ವ್ಯರ್ಥ
12:14 PM, 1 May

ಭಾರತದ 18000 ಹಳ್ಳಿಗಳಿಗೂ ವಿದ್ಯುತ್ ಸಂಪರ್ಕ ನೀಡುವ ಕಾರ್ಯವನ್ನು ನಾವು ಮಾಡಿದ್ದೇವೆ, ಇದಕ್ಕೆ ನಾನು ದೇಶದ ಕಾರ್ಮಿಕರಿಗೆ ಧನ್ಯವಾದಗಳನ್ನು ಹೇಳುತ್ತೇನೆ.
12:13 PM, 1 May

ಕರ್ನಾಟಕದಲ್ಲಿ ಬಿಜೆಪಿ ಹವಾ ಇಲ್ಲ, ಬಿರುಗಾಳಿಯೇ ಎದ್ದಿದೆ, ಬಿಸಿಲಲ್ಲಿ ನಿಂತು ಕಾಯುತ್ತಿರುವ ನಿಮ್ಮ ಶ್ರಮವನ್ನು ನಾವು ವ್ಯರ್ಥ ಮಾಡುವುದಿಲ್ಲ.
12:12 PM, 1 May

ಕನ್ನಡದಲ್ಲಿ ಭಾಷಣ ಆರಂಭಿಸಿದ ನರೇಂದ್ರ ಮೋದಿ, ದೇವರುಗಳಿಗೆ ನಮಿಸಿ ಭಾಷಣ ಆರಂಭ, ಮೈಸೂರಿನ ಮಠ, ಸಾಹಿತಿಗಳು, ಡಾ.ರಾಜಕುಮಾರ್ ಇತ್ಯಾದಿ ಮಹಾಪುರಷರ ನೆನೆದ ಮೋದಿ

English summary
Narendra Modi election rally in Mysuru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X