ಕೋಟಿ ಗಳಿಕೆಯ ಕ್ಲಬ್ ಸೇರಿದ ನಂಜನಗೂಡು ನಂಜುಂಡ!

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಡಿಸೆಂಬರ್ 29 : ದಕ್ಷಿಣ ಕಾಶಿ ನಂಜನಗೂಡಿನ ನಂಜುಂಡೇಶ್ವರ ಸನ್ನಿಧಿಯಲ್ಲಿ ದಾಖಲೆಯ ಮೊತ್ತ ಸಂಗ್ರಹವಾಗಿದೆ. ಇದೇ ಮೊದಲ ಬಾರಿಗೆ ತಿಂಗಳಿಗೆ ಬರೋಬ್ಬರಿ 1 ಕೋಟಿ 20 ಲಕ್ಷ ರುಪಾಯಿ ಹಣ ಸಂಗ್ರಹವಾಗಿದೆ. ಒಂದು ಕೋಟಿ ಹತ್ತು ಲಕ್ಷ ರುಪಾಯಿ ನಂಜನಗೂಡಿನಲ್ಲಿ ಹಿಂದಿನ ದಾಖಲೆಯ ಮೊತ್ತವಾಗಿತ್ತು.

ಕೋಟಿ ಕೂಟ ಸೇರಿದ ನಂಜುಂಡ

ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನದ ಈ ತಿಂಗಳ ಹುಂಡಿ ಎಣಿಕೆಯಲ್ಲಿ ಒಟ್ಟು 1,20,85,816 ರುಪಾಯಿ ಹಣ ಸಂಗ್ರಹವಾಗಿದೆ. ಇದರಲ್ಲಿ ಅಮಾನ್ಯಗೊಂಡ ಸಾವಿರ ಮುಖ ಬೆಲೆಯ 4,40,000 ರು.ಗಳು ಹಾಗೂ ಹಳೆ 500 ಮುಖ ಬೆಲೆಯ 12,29,500 ರು.ಗಳು ದೊರೆತಿದೆ.

Nanjangud Nanjundeshwara joins crore club

ಇದಲ್ಲದೆ 21 ವಿದೇಶಿ ನೋಟುಗಳು, 75 ಗ್ರಾಂ ಚಿನ್ನ, 2,900 ಗ್ರಾಂ ಬೆಳ್ಳಿ ದೊರೆತಿವೆ. ಇದರಂತೆ ಕೋಟಿ ಗಳಿಸುವ ದೇವರುಗಳಲ್ಲಿ ಇದೀಗ ನಂಜನಗೂಡಿನ ನಂಜುಂಡನು ಸೇರ್ಪಡೆಗೊಂಡಿರೋದು ವಿಶೇಷ. ಅಪನಗದೀಕರಣದಿಂದಾಗಿ ಜನರು ನೋಟಿನ ಕೊರತೆ ಅನುಭವಿಸುತ್ತಿದ್ದರೂ ನಂಜುಂಡನಿಗೆ ಯಾವುದೇ ಕೊರತೆಯಿಲ್ಲ.

ಬ್ಯಾಂಕ್ ಸಿಬ್ಬಂದಿಗಳಿಂದ ಹಣ ಎಣಿಕೆ

ದೊಡ್ಡ ಪ್ರಮಾಣದ ಹಣವನ್ನು ಬ್ಯಾಂಕ್ ಸಿಬ್ಬಂದಿಗಳಿಂದ ಎಣಿಕೆ ಮಾಡಿಸಲಾಗಿದೆ. ಈ ವೇಳೆ ಸಿಸಿಟಿವಿ ಕ್ಯಾಮರಾ ಅಳವಡಿಸಿ ಹಣ ಎಲ್ಲಿಯೂ ದುರುಪಯೋಗವಾಗದಂತೆ ಎಚ್ಚರಿಕೆ ವಹಿಸಲಾಗಿತ್ತು. ಈ ವೇಳೆ ಮುಜರಾಯಿ ಇಲಾಖೆಯ ಅಧಿಕಾರಿಗಳು ಹಾಗೂ ದೇಗುಲದ ಆಡಳಿತ ಮಂಡಳಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Nanjangud Srikanteshwara temple has earned more than 1 crore rupees in a month in November. This is a record earning by the famous temple in Mysuru district. Many banned notes, golden ornaments were also found in the hundi.
Please Wait while comments are loading...