ಕೊರಳಲ್ಲಿ ಕಾಂಗ್ರೆಸ್ ಶಾಲು, ನೀತಿ ಸಂಹಿತೆ ಉಲ್ಲಂಘಿಸಿದ ಕಳಲೆ

Subscribe to Oneindia Kannada

ನಂಜನಗೂಡು, ಏಪ್ರಿಲ್ 9: ಇಂದು ಮುಂಜಾನೆ ತಮ್ಮ ಸ್ವ ಗ್ರಾಮ ಕಳಲೆಯಲ್ಲಿ ಮತದಾನ ಮಾಡಿದ ನಂಜನಗೂಡು ಕಾಂಗ್ರೆಸ್ ಅಭ್ಯರ್ಥಿ ಕಳಲೆ ಎನ್ ಕೇಶವ ಮೂರ್ತಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಮತದಾನ ಮಾಡಲು ಮತಗಟ್ಟೆಯೊಳಕ್ಕೆ ತೆರಳುವ ವೇಳೆ ಕಾಂಗ್ರೆಸ್ ಚಿನ್ಹೆ ಹೊಂದಿರುವ ಶಾಲನ್ನು ಕಳಲೆ ಕೇಶವಮೂರ್ತಿ ಧರಿಸಿದ್ದರು.[ನಂಜನಗೂಡಲ್ಲಿ ಗೊಂದಲ ಮೂಡಿಸಿದ ಚುನಾವಣಾ ಆಯೋಗದ ಸುತ್ತೋಲೆ]

Nanjangud by- election: Kalale violated election code of conduct

ಚುನಾವಣಾ ನೀತಿ ಸಂಹಿತೆಯ ನಿಯಮಗಳ ಪ್ರಕಾರ ಮತಗಟ್ಟೆಯ 100 ಮೀಟರ್ ಅಂತರದಲ್ಲಿ ಯಾವುದೇ ಶಾಮಿಯಾನ ಹಾಕಿ ಮತ ಯಾಚಿಸುವುದಾಗಲೀ, ಪಕ್ಷದ ಚಿಹ್ನೆಯಿರುವ ಶಾಲು, ಬ್ಯಾಡ್ಜ್ ಬಳಸುವಂತಿಲ್ಲ.[ನಂಜನಗೂಡು: ಮಹದೇವನಗರದ 700 ನಿವಾಸಿಗಳಿಂದ ಮತದಾನ ಬಹಿಷ್ಕಾರ]

ಹೀಗಾಗಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ಕಾಂಗ್ರೆಸ್ ಅಭ್ಯರ್ಥಿ ಕಳಲೆ ಎನ್ ಕೇಶವ ಮೂರ್ತಿ ಪಕ್ಷದ ಚಿಹ್ನೆಯಿರುವ ಶಾಲು ಹಾಕಿಕೊಂಡಿದ್ದು ನೀತಿ ಸಂಹಿತೆಯ ಉಲ್ಲಂಘನೆ ಎಂದು ಹೇಳಲಾಗುತ್ತಿದೆ. ಈ ಕುರಿತು ಚುನಾವಣಾ ಅಧಿಕಾರಿಗಳಿಗೆ ಮಾಹಿತಿ ನೀಡುವುದಾಗಿ ಮತಗಟ್ಟೆ ಅಧಿಕಾರಿಗಳು ಹೇಳಿದ್ದಾರೆ.

ಈ ಬಗ್ಗೆ ಚುನಾವಣಾ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ನೋಡಬೇಕು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Nanjangud by-poll candidate from Congress Kalale Krishnamurthy wore Congress symbol inside polling station and violated election code of conduct.
Please Wait while comments are loading...