ನಂಜನಗೂಡು ಉಪಚುನಾವಣೆ: ಅವರ ಮನೆಗೆ ಇವರು ಹೋದರು!

By: ಚಾಮರಾಜನಗರ ಪ್ರತಿನಿಧಿ
Subscribe to Oneindia Kannada

ನಂಜನಗೂಡು, ಮಾರ್ಚ್ 20: ನಂಜನಗೂಡು ವಿಧಾನ ಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲಬೇಕೆಂಬ ಹಠಕ್ಕೆ ಬಿದ್ದಿದ್ದು ಅದಕ್ಕಾಗಿ ಬೇಕಾದ ತಂತ್ರಗಳನ್ನು ರೂಪಿಸಲು ನಾಯಕರು ಮುಂದಾಗಿದ್ದಾರೆ.

ಪಕ್ಷದಿಂದ ದೂರವಾಗಿ ಬಿಜೆಪಿ ಸೇರಿದ್ದ ಕಾಂಗ್ರೆಸ್ ನಾಯಕ ದಿವಂಗತ ಎಂ.ಮಹದೇವು ಅವರ ನಿವಾಸಕ್ಕೆ ಭಾನುವಾರ ಉಸ್ತುವಾರಿ ಸಚಿವ ಡಾ. ಹೆಚ್.ಸಿ.ಮಹದೇವಪ್ಪ ಭೇಟಿ ನೀಡಿದರು. ಅವರ ಜತೆ ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿಯೂ ಇದ್ದರು. ಉಭಯ ನಾಯಕರು ದಿ. ಎಂ.ಮಹದೇವುರವರ ಪತ್ನಿ ರಾಜಮ್ಮರವರ ಜೊತೆ ಸುಮಾರು ಅರ್ಧ ಘಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ. ಇದು ಕ್ಷೇತ್ರದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

Nanjangud By-Election: HC Mahadevappa visited late M Mahadevu House

ಸಚಿವರು ಅಭ್ಯರ್ಥಿ ಕಳಲೆ ಕೇಶವಮೂರ್ತಿರವರ ಗೆಲುವಿಗೆ ಬೆಂಬಲಿಸುವಂತೆ ಮನವಿ ಮಾಡಿದ್ದರೆ, ಅಭ್ಯರ್ಥಿ ಕಳಲೆ ಕೇಶವಮೂರ್ತಿಯವರು ತಮ್ಮ ಗೆಲುವಿಗೆ ಸಹಕಾರ ನೀಡಬೇಕೆಂದು ರಾಜಮ್ಮರವರ ಕಾಲಿಗೆ ಬಿದ್ದು ಬಂದಿದ್ದಾರೆ.

Nanjangud By-Election: HC Mahadevappa visited late M Mahadevu House

ಚುನಾವಣೆಗೆ ಕೆಲವೇ ದಿನಗಳಿರುವಾಗ ಕ್ಷೇತ್ರದಲ್ಲಿ ಮಿಂಚಿನ ಬೆಳವಣಿಗೆಗಳು ನಡೆಯುತ್ತಿದ್ದು ಬಿಜೆಪಿ ನಾಯಕರ ಮನೆಗೆ ಕಾಂಗ್ರೆಸ್ ಉಸ್ತುವಾರಿ ಸಚಿವರು ಭೇಟಿ ನೀಡಿರುವುದೇ ಇದಕ್ಕೆ ಸಾಕ್ಷಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Minister visited BJP leader late M Mahadevu house on Sunday of March 20. District co ordinate minister’s visit was one of the interesting thing ahead of Nanjangud by-election.
Please Wait while comments are loading...