ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರ್ಕಾರದಿಂದ ಮಾತ್ರ ಮಹಿಳಾ ದೌರ್ಜನ್ಯ ನಿಲ್ಲಿಸಲು ಸಾಧ್ಯವಿಲ್ಲ: ನಾಗಲಕ್ಷ್ಮೀ ಬಾಯಿ

|
Google Oneindia Kannada News

ಮೈಸೂರು, ಅಕ್ಟೋಬರ್. 15:ವಿಶ್ವವಿಖ್ಯಾತ ಮೈಸೂರು ದಸರಾ 2018ರ ಆರನೇ ದಿನದ ಅಂಗವಾಗಿ ಆಯೋಜಿಸಿದ್ದ ಜಾನಪದ ಸಿರಿ ಕಾರ್ಯಕ್ರಮವನ್ನು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ಉದ್ಘಾಟಿಸಿದರು.

ದಸರಾ ಓಪನ್ ಸ್ಟ್ರೀಟ್ ಫೆಸ್ಟಿವಲ್ ನಲ್ಲಿ ಪುಂಡರಿಂದ ಕಿರುಕುಳ: ಸಂತ್ರಸ್ತೆಯರು ಹೇಳಿದ್ದೇನು?ದಸರಾ ಓಪನ್ ಸ್ಟ್ರೀಟ್ ಫೆಸ್ಟಿವಲ್ ನಲ್ಲಿ ಪುಂಡರಿಂದ ಕಿರುಕುಳ: ಸಂತ್ರಸ್ತೆಯರು ಹೇಳಿದ್ದೇನು?

ಮೈಸೂರಿನ ಜೆಕೆ ಮೈದಾನದಲ್ಲಿ ಇಂದು ಸೋಮವಾರ (ಅ.15) ಮಹಿಳಾ ಮತ್ತು ಮಕ್ಕಳ ಉಪಸಮಿತಿಯಿಂದ ಆಯೋಜನೆಗೊಂದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ದಿನೇ ದಿನೇ ಹೆಚ್ಚುತ್ತಿದೆ. ದಯಮಾಡಿ ದೌರ್ಜನ್ಯ ನಡೆದರೆ ಪೊಲೀಸ್ ಕಂಪ್ಲೇಂಟ್ ಕೊಡಿ.

Nagalakshmi Bai said only the government can not stop womens violence

ಎಷ್ಟೋ ಪ್ರಕರಣಗಳು ಮರ್ಯಾದೆಗೆ ಅಂಜಿ ಮುಚ್ಚಿ ಹೋಗುತ್ತಿವೆ. ಮಹಿಳೆ ಮೇಲೆ ದೌರ್ಜನ್ಯ ನಡೆಯಬಾರದು. ಕೇವಲ ಸರ್ಕಾರದಿಂದ ಮಾತ್ರ ಮಹಿಳಾ ದೌರ್ಜನ್ಯ ನಿಲ್ಲಿಸಲು ಸಾಧ್ಯವಿಲ್ಲ ಎಂದು ನಾಗಲಕ್ಷ್ಮೀ ಬಾಯಿ ಸೂಚಿಸಿದರು.

 ಮೈಸೂರು ದಸರಾ - ವಿಶೇಷ ಪುರವಣಿ ಮೈಸೂರು ದಸರಾ - ವಿಶೇಷ ಪುರವಣಿ

ಕಾರ್ಯಕ್ರಮದಲ್ಲಿ ಹಲವು ಜಾನಪದ ಶೈಲಿಯ ರೂಪಕಗಳನ್ನು ಮಹಿಳೆಯರು ಅನಾವರಣಗೊಳಿಸಿದರು.

ಮೈಸೂರು ದಸರಾ - ವಿಶೇಷ ಪುರವಣಿ

ಪ್ರಧಾನ ಕವಿಗೋಷ್ಠಿ ಸಂಪನ್ನ
ಕವಿಗಳ ಮಾನಸಿಕ ಬಿಡುಗಡೆಗೆ ಕಾವ್ಯ ಮಾಧ್ಯಮವಾಗಲಿದ್ದು, ವರ್ತಮಾನದ ಬಿಕ್ಕಟ್ಟುಗಳಿಗೆ ಮುಖಾಮುಖಿಯಾಗದಿರುವ ಯಾವೊಬ್ಬ ಲೇಖಕ, ಕವಿಯೂ ಪ್ರಸ್ತುತನಲ್ಲ ಎಂದು ಖ್ಯಾತ ಸಾಹಿತಿ ಡಾ. ಶ್ರೀಕಂಠ ಕೂಡಿಗೆ ಅಭಿಪ್ರಾಯಪಟ್ಟರು.

Nagalakshmi Bai said only the government can not stop womens violence

ಜಗನ್ಮೋಹನ ಅರಮನೆಯಲ್ಲಿ ನಡೆದ ಪ್ರಧಾನ ಕವಿಗೋಷ್ಠಿಯಲ್ಲಿ ಮಾತನಾಡಿದ ಅವರು ಕವಿತೆ, ಕಾವ್ಯಗಳು, ಕಥೆಗಳು ಹೀಗೆ ಬರವಣಿಗೆಯಲ್ಲಿ ಮೂಡಿ ಬರುವ ಪ್ರತಿಯೊಂದು ಲೇಖನಗಳು ಇಂದಿನ ಸಮಾಜದ ಜಾಗೃತಿಗೆ ಪೂರಕವಾಗಿಬೇಕು. ಸಮಾಜದ ಅಸಹ್ಯ, ಅನ್ಯಾಯವನ್ನು ಪ್ರತಿಭಟಿಸುವಂತದ್ದಾಗಿರಬೇಕು ಎಂದರು.

 ಮೈಸೂರು ದಸರಾ: ಪೊಲೀಸ್ ಬ್ಯಾಂಡ್, ಎಸ್ ಪಿಬಿ ಸಂಗೀತಕ್ಕೆ ತಲೆದೂಗಿದ ಶ್ರೋತೃಗಳು ಮೈಸೂರು ದಸರಾ: ಪೊಲೀಸ್ ಬ್ಯಾಂಡ್, ಎಸ್ ಪಿಬಿ ಸಂಗೀತಕ್ಕೆ ತಲೆದೂಗಿದ ಶ್ರೋತೃಗಳು

ಕಾರ್ಯಕ್ರಮದಲ್ಲಿ ಸಚಿವ ಜಿಟಿ ದೇವೇಗೌಡ, ಖ್ಯಾತ ಕವಯಿತ್ರಿ ಸುಕನ್ಯಾ ಮಾರುತಿ, ಮೈಸೂರು ವಿವಿ ಕುಲಸಚಿವ ಪ್ರೊ. ಆರ್ ರಾಜಣ್ಣ ಸೇರಿದಂತೆ ಉಪಸ್ಥಿತರಿದ್ದರು.

English summary
Karnataka State Women Commission Chairperson Nagalakshmi Bai said in Janapada Siri programme only the government can not stop women's violence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X