ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಝೂ ಮಾಹಿತಿ ಕುರಿತಾಗಿ ಮೈ ಝೂ ಅಪ್ಲಿಕೇಷನ್ ಬಿಡುಗಡೆ

By Yashaswini
|
Google Oneindia Kannada News

ಮೈಸೂರು, ಡಿಸೆಂಬರ್ 19 : ಪ್ರವಾಸಿಗರಿಗೆ ಮೃಗಾಲಯದ ಸಮಗ್ರ ಮಾಹಿತಿಯನ್ನು ತಿಳಿಸುವ ಮೈಜೂ ಅಪ್ಲಿಕೇಷನ್ ಒಂದನ್ನು ಇದೇ ಮೊದಲ ಬಾರಿಗೆ ಬಿಡುಗಡೆ ಮಾಡಲಾಯಿತು.

ಮೂಲತಃ ಮೈಸೂರಿನ ಕೆಸರೆ ನಿವಾಸಿಯಾದ, ಯುನೈಟೆಡ್ ಕಿಂಗ್‍ಡಂನ ಜೀನಿಯಸ್ ಲೀಡ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ನಿರ್ದೇಶಕರಾಗಿರುವ ದೀಪಕ್ ರಾಯ್ ಈ ಕುರಿತು ಮಾತನಾಡಿ, ಮೃಗಾಲಯದ ನಕ್ಷೆ ಹಾಗೂ ಸ್ಥಳ ವೀಕ್ಷಿಸಲು, ಯಾವ ಕಡೆಗಳಲ್ಲಿ ಯಾವ ಪ್ರಾಣಿ ಇದೆ ಎಂಬುದೂ ಸೇರಿದಂತೆ, ಆ ಪ್ರಾಣಿಯ ಸಮಗ್ರ ಮಾಹಿತಿಯೂ ಆ್ಯಪ್‍ನಲ್ಲಿ ಲಭ್ಯವಿರುತ್ತದೆ. ಅಲ್ಲದೇ ಮೃಗಾಲಯದಲ್ಲಿನ ಕುಡಿಯುವ ನೀರು, ಶೌಚಾಲಯ, ಊಟೋಪಚಾರ ವ್ಯವಸ್ಥೆ ಬಗ್ಗೆ ಮಾಹಿತಿ ದೊರೆಯಲಿದೆ ಎಂದು ವಿವರಿಸಿದರು.

ಆಪ್ ಮೂಲಕವೇ ಯಾವುದೇ ಬ್ಯಾಂಕ್‍ನ ಕಾರ್ಡ್ ಬಳಸಿ ಮೃಗಾಲಯ ಪ್ರವೇಶದ ಟಿಕೆಟ್ ಸಹ ಕೊಳ್ಳ ಬಹುದಾಗಿದೆ. ಅಲ್ಲದೆ ಮೊಬೈಲ್ ವಾಲೆಟ್ ಮೂಲಕ ಮೃಗಾಲಯ ದತ್ತು ಸ್ವೀಕಾರ ಯೋಜನೆಗೂ ಒಳಪಡಬಹುದಾಗಿದೆ.

'Myzoo' app will help to Mysuru zoo view.

ಜೀನಿಯಸ್ ಲೀಡ್ ಟೆಕ್‌ ಪ್ರೈವೇಟ್ ಲಿಮಿಟೆಡ್‌ ಸಂಸ್ಥೆ 3.5 ಲಕ್ಷ ರೂ.ಗಳಲ್ಲಿ 'ಮೈಜೂ' ಆಪ್ ಮೈಸೂರು ಮೃಗಾಲಯಕ್ಕೆ ಆಗಮಿಸುವ ಪ್ರವಾಸಿಗರನ್ನು ದೃಷ್ಟಿಯಲ್ಲಿಟ್ಟುಕೊಂಡು ಅಭಿವೃದ್ಧಿ ಮಾಡಿದೆ. ಇದರ ಬಳಕೆ ಮೂಲಕ ಪ್ರವಾಸಿಗರು ಮೃಗಾಲಯಕ್ಕೆ ಭೇಟಿ ನೀಡಿದ ಸಂದರ್ಭ ಮೃಗಾಲಯದಲ್ಲಿರುವ ಅಗತ್ಯ ಸೌಲಭ್ಯಗಳ ನೆರವು ಪಡೆಯುವ ಜತೆಗೆ ಟಿಕೇಟ್‌ ಖರೀದಿ, ಮೃಗಾಲಯಕ್ಕೆ ವಂತಿಗೆ ನೀಡಲೂ ಸಾಧ್ಯವಾಗಲಿದೆ.

ಕರ್ನಾಟಕ ಮೃಗಾಲಯ ಪ್ರಾಧಿಕಾರ, ಚಾಮರಾಜೇಂದ್ರ ಮೃಗಾಲಯದ ವತಿಯಿಂದ ಸೋಮವಾರದಿಂದ ಆರಂಭಗೊಂಡ ನಾಲ್ಕು ದಿನಗಳ ಅಖಿಲ ಭಾರತ ಮೃಗಾಲಯ ನಿರ್ದೇಶಕರ ಸಮ್ಮೇಳನದಲ್ಲಿ 'ಮೈಜೂ' ಆ್ಯಪ್‌ನ್ನು ಬಿಡುಗಡೆ ಮಾಡಲಾಯಿತು. ದೀಪಕ್‌ ರಾಯ್‌ ಅವರು ಇದನ್ನು ಅಭಿವೃದ್ಧಿ ಮಾಡಿದ್ದು, ಇದರಲ್ಲಿ ಮೃಗಾಲಯಕ್ಕೆ ಆಗಮಿಸುವ ಪ್ರವಾಸಿಗರಿಗೆ ಮಾರ್ಗದರ್ಶನ ಮಾಡುವ ಪ್ರಯತ್ನ ಮಾಡಲಾಗಿದೆ.

ರಾತ್ರಿ ಸಫಾರಿಗೆ ಚಿಂತನೆ :

ರಾತ್ರಿ ಸಫಾರಿಗೆ ಯಾವುದೇ ಪ್ರಸ್ತಾವನೆ ಬಂದರೆ ಸಾಧಕ-ಬಾಧಕ ಪರಿಶೀಲಿಸಿ ಅನುಮತಿ ನೀಡಲು ಕೇಂದ್ರ ಮೃಗಾಲಯ ಪ್ರಾಧಿಕಾರ ಸಿದ್ಧವಿದೆ. ಈ ಹಿಂದೆ ಬನ್ನೇರುಘಟ್ಟ ಮೃಗಾಲಯಕ್ಕೆ ಅನುಮತಿ ನೀಡಲಾಗಿತ್ತು. ಆದರೆ, ಅದು ಕಾರ್ಯರೂಪಕ್ಕೆ ಬರಲಿಲ್ಲ. ಇನ್ನೂ ಆನ್ ಜೂ ಮಾದರಿಯಲ್ಲಿ ಮೃಗಾಲಯಗಳ ಅಭಿವೃದ್ಧಿಗೆ ಚಿಂತನೆ ನಡೆದಿದೆ. ಪ್ರಾಣಿಗಳಿಗೆ ಸ್ವಾತಂತ್ರ್ಯ ನೀಡುವ ನಿಟ್ಟಿನಲ್ಲಿ ಆನ್ ಜೂ ಅತ್ಯಗತ್ಯವಾಗಿದೆ ಎನ್ನುತ್ತಾರೆ ಅಧಿಕಾರಿಗಳು. .

English summary
The mobile app named 'Myzoo' has been developed for the convenience of visitors to Mysuru Zoo. With the help of the app, visitors can get help from the zoo with the details of the animals from where they are located, at the restaurant, toilet or the place they like.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X