ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿ ಅಧಿಕಾರಕ್ಕೇರುವ ತನಕ ಪಾದರಕ್ಷೆ ಧರಿಸಲ್ಲ: ಮೈಸೂರು ಯುವಕ ಶಪಥ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜೂನ್ 26 : ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು. ಅಲ್ಲಿಯವರೆಗೆ ಪಾದರಕ್ಷೆ ಧರಿಸುವುದಿಲ್ಲ ಎಂದು ಮೈಸೂರಿನ ಕೆಸರೆಯ ಕುರಿಮಂಡಿ ನಿವಾಸಿ ಕಿರಣ್ ಕುಮಾರ್ ಎಂಬುವವರು ಶಪಥ ಮಾಡಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬರಬೇಕು, ಯಡಿಯೂರಪ್ಪ ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ಕಿರಣ್ ಕುಮಾರ್ ಅವರಿಗೆ ಇದೆಯಂತೆ. ಅದಕ್ಕಾಗಿ ಚಪ್ಪಲಿಯನ್ನು ಬಿಟ್ಟು ಎರಡು ತಿಂಗಳಿನಿಂದ ಬರಿಗಾಲಿನಲ್ಲಿ ನಡೆದಾಡುತ್ತಿದ್ದಾರೆ. ರಾಜ್ಯದಲ್ಲಿ 104 ಸೀಟು ಬಂದರೂ ಬಿಜೆಪಿ ಅಧಿಕಾರ ಹಿಡಿಯಲು ಆಗಲಿಲ್ಲ. ಇದು ನನಗೆ ತುಂಬ ನೋವು ತಂದಿದೆ ಎನ್ನುತ್ತಾರೆ ಕಿರಣ್ ಕುಮಾರ್.

ಕುಮಾರಸ್ವಾಮಿ ಸಿಎಂ ಆಗಲೆಂದು 11 ವರ್ಷ ಗಡ್ಡ-ತಲೆಗೂದಲು ಬಿಟ್ಟ ಆಸಾಮಿಕುಮಾರಸ್ವಾಮಿ ಸಿಎಂ ಆಗಲೆಂದು 11 ವರ್ಷ ಗಡ್ಡ-ತಲೆಗೂದಲು ಬಿಟ್ಟ ಆಸಾಮಿ

ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವವರೆಗೂ ಪಾದರಕ್ಷೆ ಹಾಕಲ್ಲ ಎಂದು ಶಪಥ ಮಾಡಿದ್ದಾರೆ. ಸಾಲದು ಎಂಬಂತೆ ಬಿಜೆಪಿ ಅಧಿಕಾರಕ್ಕೆ ಮತ್ತೆ ಬಂದರಷ್ಟೇ ನನ್ನ ಕಾಲಿಗೆ ಪಾದರಕ್ಷೆ. ಇಲ್ಲವಾದರೆ ನನ್ನ ಜೀವನ ಪೂರ್ತಿ ಪಾದರಕ್ಷೆಯೇ ಹಾಕದಂತೆ ಓಡಾಡುತ್ತೇನೆ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

Mysuru youth took a stand not to wear footwear till BJP come in to power in Karnataka

ಇತ್ತೀಚಿನ ದಿನಗಳಲ್ಲಿ ರಾಜಕೀಯ ಪಕ್ಷಗಳ ವಿಭಿನ್ನ- ವಿಚಿತ್ರ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಹಿಂದೆ ಕೆ.ಆರ್.ನಗರದ ಅಭಿಮಾನಿಯೊಬ್ಬ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲೆಂದು ಹಲವು ವರ್ಷಗಳಿಂದ ಕೂದಲು ಬಿಟ್ಟಿದ್ದನ್ನು ಸ್ಮರಿಸಬಹುದು.

English summary
Kiran Kumar, a resident of Kesare Kurimandi, Mysuru, has expressed his admiration for the BJP. He decided will not wear footwear, until BJP come in to power in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X