ಪ್ರವಾಸಿರನ್ನು ಕೈ ಬೀಸಿ ಕರೆಯುತ್ತಿದೆ ಮೈಸೂರಿನ ಮಾಗಿ ಉತ್ಸವ

Posted By:
Subscribe to Oneindia Kannada

ಮೈಸೂರು, ಡಿಸೆಂಬರ್ 25 : ವರ್ಷಾಂತ್ಯದ ವೇಳೆಗೆ ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರನ್ನು ರಂಜಿಸಲು 'ಮೈಸೂರು ಮಾಗಿ ಉತ್ಸವ' ಆಯೋಜಿಸಲಾಗಿದೆ. ನಗರಕ್ಕೆ ಬರುವ ಪ್ರವಾಸಿಗರು ಉತ್ಸವದಲ್ಲಿ ಪಾಲ್ಗೊಳ್ಳಬಹುದಾಗಿದೆ.

ಜನವರಿ 1ರ ತನಕ ನಡೆಯಲಿರುವ ಉತ್ಸವದಲ್ಲಿ ಫಲಪುಷ್ಪ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ, ಮಕ್ಕಳ ಹಬ್ಬ ಮತ್ತು ಓಪನ್ ಸ್ಟ್ರೀಟ್ ಫೆಸ್ಟಿವಲ್ ಏರ್ಪಡಿಸಲಾಗಿದೆ. ಅರಮನೆ ಆವರಣದಲ್ಲಿ ಪ್ರತಿದಿನ ಸಂಜೆ 7 ರಿಂದ 9ರ ವರೆಗೆ ವಿವಿಧ ಸಾಂಸ್ಕೃತಿ ಕಾರ್ಯಕಮಗಳನ್ನು ಆಯೋಜಿಸಲಾಗಿದೆ.

ಮಾಗಿಯ ಚಳಿಗೆ ಅವರೆಕಾಯಿ ಸುಗ್ಗಿ

Mysuru winter festival attracts tourists

ಕ್ರಿಸ್ ಮಸ್ ಸಡಗರ, ಹೊಸ ವರ್ಷಾರಂಭಕ್ಕೆ ಕೆಲವೇ ದಿನಗಳು ಬಾಕಿ ಇದೆ. ಇದರ ಜೊತೆಗೆ ಮಾಗಿ ಸಂಭ್ರಮ, ಇವೆಲ್ಲದಕ್ಕೆ ಸಾಕ್ಷಿಯಾಗುತ್ತಿರುವ ಸಾಂಸ್ಕೃತಿಕ ನಗರಿ ಮೈಸೂರಿಗೆ ಪ್ರವಾಸಿಗರ ದಂಡೇ ಹರಿದುಬರುತ್ತಿದೆ.

ಮೈಸೂರು ಮಾಗಿ ಉತ್ಸವ': ಹಬ್ಬಕ್ಕೆ ಸಿದ್ಧವಾದ ಅರಮನೆ ನಗರಿ

ಡಿ.26 ರಿಂದ 28ರ ವರೆಗೆ ಪಾರಂಪರಿಕ ಸೈಕಲ್ ಸವಾರಿ, ಡಿ.27 ರಿಂದ 29ರ ವರೆಗೆ ಮಾಗಿ ಆಹಾರ ಮತ್ತು ಕೇಕ್ ಉತ್ಸವ ಆಯೋಜಿಸಲಾಗಿದೆ. ಮಾಗಿ ಉತ್ಸವವನ್ನು ದಸರಾ ಮಾದರಿಯಲ್ಲಿ ವಿನೂತನ ಬ್ರಾಂಡ್‌ ಆಗಿ ರೂಪಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.

ಚಿತ್ರಗಳಲ್ಲಿ : ಕ್ರಿಸ್‌ಮಸ್ ಹಬ್ಬದ ಸಂಭ್ರಮ, ಸಡಗರ

ನೂರಾರು ಪ್ರವಾಸಿಗರು ಮೈಸೂರಿಗೆ ಆಗಮಿಸಿರುವುದರಿಂದ ಚಾಮುಂಡಿ ಬೆಟ್ಟದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸುಮಾರು 2 ಗಂಟೆಗಳ ಕಾಲ ಬೆಟ್ಟಕ್ಕೆ ತೆರಳುವ ಮಾರ್ಗಗಳು ಬಂದ್ ಆಗಿದ್ದವು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The heritage city and the city of palaces Mysuru witnessing for first-ever Mysuru Winter Festival (MWF). The 10-day festival organized on the lines of Dasara at Mysuru palace.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ