ಮೈಸೂರು ವಾರಿಯರ್ಸ್ ತಂಡಕ್ಕೆ ಆಟಗಾರರ ಆಯ್ಕೆ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಆಗಸ್ಟ್ 22 : ಎನ್.ಆರ್. ಸಮೂಹದ ಒಡೆತನದಲ್ಲಿರುವ ಮೈಸೂರು ವಾರಿಯರ್ಸ್, ಜೊಜೊ ಕ್ರಿಕೆಟ್‍ಕ್ಲಬ್ ನ ನಂದಕಿಶೋರ್, ರಾಷ್ಟ್ರೀಯ ಕ್ರಿಕೆಟ್‍ಕ್ಲಬ್ ನ ಕಿಶನ್ ಬೆಡರೆ ಅವರನ್ನು ತನ್ನಲ್ಲಿ ಸೇರ್ಪಡೆಗೊಳಿಸಿಕೊಂಡಿದೆ. ಕೆ.ಪಿ.ಎಲ್‍ತಂಡಕ್ಕೆ ಕ್ರಿಕೆಟ್ ಪ್ರತಿಭೆಗಳನ್ನು ಆಯ್ಕೆ ಮಾಡಲು ಇತ್ತೀಚೆಗೆ ಬೆಂಗಳೂರು ಮತ್ತು ಮೈಸೂರಿನಲ್ಲಿ ಪ್ರತಿಭಾನ್ವೇಷಣೆ ಪಂದ್ಯಗಳನ್ನು ಏರ್ಪಡಿಸಲಾಗಿತ್ತು. ಇದರಲ್ಲಿ 205 ಮಹತ್ವಾಕಾಂಕ್ಷಿ ಕ್ರಿಕೆಟಿಗರು ಕರ್ನಾಟಕದ ವಿವಿಧ ಭಾಗಗಳಿಂದ ಭಾಗವಹಿಸಿದ್ದರು.

ಕೆಪಿಎಲ್ 2017- ಮೈಸೂರು ವಾರಿಯರ್ಸ್ ತಂಡದ ಪಾಲುದಾರ ಘೋಷಣೆ

ಮೈಸೂರು ಭಾಗದಿಂದ 105 ಕ್ರಿಕೆಟ್ ಪಟುಗಳು ಭಾಗವಹಿಸಿದ್ದರು. ಇದರಲ್ಲಿ 50 ಮಂದಿ ಬೌಲರ್‍ಗಳು, 10 ಮಂದಿ ಬ್ಯಾಟ್ಸ್ ಮನ್ ಗಳು, 40 ಆಲ್‍ರೌಂಡರ್ ಗಳು ಮತ್ತು 05 ವಿಕೆಟ್‍ಕೀಪರ್‍ ಕಮ್ ಬ್ಯಾಟ್ಸ್‍ಮನ್ ಆಗಿ ತಂಡದಲ್ಲಿ ಸ್ಥಾನ ಪಡೆದರು.
ಬೆಂಗಳೂರಿನಲ್ಲಿ ಸುಮಾರು 100 ಆಕಾಂಕ್ಷಿಗಳು ಉಮೇದಿನಿಂದ ಭಾಗವಹಿಸಿದ್ದರು.

 Mysuru warriors’ shortlists two players from talent hunt

ಎರಡು ಸ್ಥಳಗಳಲ್ಲಿ ಆಯೋಜಿಸಲಾಗಿದ್ದ ಆಯ್ಕೆ ಪ್ರಕ್ರಿಯೆಯಲ್ಲಿ ದಿನದ ಅಂತ್ಯದ ವೇಳೆಗೆ, ಸುಮಾರು 43 ಆಟಗಾರರನ್ನು ಆಯ್ಕೆ ಮಾಡಲಾಯಿತು. ಅಂತಿಮ ಸುತ್ತುಗಳ ನಂತರ 12 ಆಟಗಾರರನ್ನು ಆಯ್ಕೆ ಮಾಡಲಾಯಿತು.

 Mysuru warriors’ shortlists two players from talent hunt

ಇವರು ಆಗಸ್ಟ್ 14, ರಿಂದ ಮೈಸೂರು ವಾರಿಯರ್ಸ್‍ ತಂಡದ ಆಟಗಾರರೊಂದಿಗೆ ಅಭ್ಯಾಸದ ಸರಣಿಯಲ್ಲಿ ಪಾಲ್ಗೊಂಡಿದ್ದರು. ನಂತರ ಅವರಲ್ಲಿ ಇಬ್ಬರನ್ನು ಮೈಸೂರು ವಾರಿಯರ್ಸ್‍ ತಂಡವನ್ನು ಪ್ರತಿನಿಧಿಸಲು ಆರಿಸಿಕೊಳ್ಳಲಾಯಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mysuru Warriors has shortlisted Nanda Kishor and Kishan Bedare from the recently conducted cricket talent hunt held in Mysuru and Bengaluru

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ