ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಮಾಜಿ ಶಾಸಕ ರಾಮದಾಸ್ ಬಂಧನ

By ಯಶಸ್ವಿನಿ ಎಂ.ಕೆ
|
Google Oneindia Kannada News

Recommended Video

ಪ್ರತಿಭಟನೆ ವೇಳೆ ಶಾಸಕ ರಾಮದಾಸ್ರನ್ನು ಬಂಧಿಸಿದ ಮೈಸೂರು ಪೊಲೀಸರು | Oneindia Kannada

ಮೈಸೂರು, ಡಿಸೆಂಬರ್ 15 : ಸ್ವಚ್ಛ ಉಸಿರಿಗಾಗಿ ಅನಿರ್ದಿಷ್ಟಾವಧಿ ಹೋರಾಟ ನಡೆಸುತ್ತಿದ್ದ ಮಾಜಿ ಸಚಿವ ಎಸ್.ಎ.ರಾಮದಾಸ್ ಸೇರಿದಂತೆ 20 ಕ್ಕೂ ಹೆಚ್ಚು ಹೋರಾಟಗಾರರನ್ನು ಮೈಸೂರಿನ ವಿದ್ಯಾರಣ್ಯಪುರಂನ ಪೊಲೀಸರು ಬಂಧಿಸಿದ್ದಾರೆ.

ರಾಜಕೀಯ ದಾಳಕ್ಕೆ ಸಾಕ್ಷಿಯಾದ ಗಾರ್ಬೇಜ್ ಪಾಲಿಟಿಕ್ಸ್ ರಾಜಕೀಯ ದಾಳಕ್ಕೆ ಸಾಕ್ಷಿಯಾದ ಗಾರ್ಬೇಜ್ ಪಾಲಿಟಿಕ್ಸ್

ಮೈಸೂರಿನ ಜೆ.ಪಿ.ನಗರದ ಸುಯೇಜ್ ಫಾರಂ ಎದುರು ಗುರುವಾರದಿಂದ ರಾಮದಾಸ್ ನೇತೃತ್ವದಲ್ಲಿ ಸಾರ್ವಜನಿಕರು, ಸಂಘಸಂಸ್ಥೆಗಳವರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದು, ಶುಕ್ರವಾರ ಸುಯೇಜ್ ಫಾರಂಗೆ ತೆರಳುತ್ತಿದ್ದ ಲಾರಿಗಳನ್ನು ತಡೆಯಲು ರಾಮದಾಸ್ ಹಾಗೂ ಬೆಂಬಲಿಗರು ಮುಂದಾಗಿದ್ದಾರೆ.

ಮಾ. ಸಚಿವ ರಾಮದಾಸ್ ಮೇಲೆ ಆರೋಪ ಮಾಡಿದ್ದ ಪ್ರೇಮಕುಮಾರಿ ಚುನಾವಣೆಗೆಮಾ. ಸಚಿವ ರಾಮದಾಸ್ ಮೇಲೆ ಆರೋಪ ಮಾಡಿದ್ದ ಪ್ರೇಮಕುಮಾರಿ ಚುನಾವಣೆಗೆ

Mysuru Vidyaranyapuram police arrests BJP leader A Ramadas

ಸಾಮರ್ಥ್ಯ ಮೀರಿ ಕಸ ವಿಲೇವಾರಿ ಮಾಡುತ್ತಿರುವುದನ್ನು ವಿರೋಧಿಸಿ ಲಾರಿಗಳನ್ನು ತಡೆಯಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ಮತ್ತು ರಾಮದಾಸ್ ನಡುವೆ ಕೆಲ ಸಮಯ ಮಾತಿನ ಚಕಮಕಿ ನಡೆದಿದೆ. ಅಲ್ಲದೆ, ತಳ್ಳಾಟ, ನುಕಾಟ ಕೂಡ ಆಗಿದೆ. ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದ ಮೇರೆಗೆ ಪೊಲೀಸರು ರಾಮದಾಸ್ ಹಾಗೂ ವೃದ್ಧ ಮಹಿಳೆಯರು ಸೇರಿದಂತೆ 20ಕ್ಕೂ ಹೆಚ್ಚು ಹೋರಾಟಗಾರರನ್ನು ಬಂಧಿಸಿದ್ದಾರೆ.

English summary
Mysuru Vidyaranyapuram police have arrested BJP leader and former MLA S.A.Ramdas who has started a protest by indefinite fasting in Mysuru against dumping garbage in the sewage farm in Vidyaranyapuram.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X