ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮುಂಡಿ ಬೆಟ್ಟದಲ್ಲಿ ಇಂದಿನಿಂದ ಬಗೆ ಬಗೆಯ ಪ್ರಸಾದ

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಮಾರ್ಚ್ 1: ಭಕ್ತಿ ಹಾಗೂ ಶಕ್ತಿ ದೇವತೆ ನೆಲೆಸಿರುವ ಚಾಮುಂಡಿ ಬೆಟ್ಟದಲ್ಲಿ ಮಧ್ಯಾಹ್ನದ ದಾಸೋಹದ ಜೊತೆಗೆ ಇಂದಿನಿಂದ ಬೆಳಿಗ್ಗೆ ಮತ್ತು ಸಂಜೆ ವೇಳೆ ಭಕ್ತಾದಿಗಳು ಮತ್ತು ಪ್ರವಾಸಿಗರಿಗೆ ಪ್ರಸಾದ ವಿತರಣೆ ಆರಂಭವಾಗಿದೆ.

ಜಿಲ್ಲಾಧಿಕಾರಿ ಡಿ.ರಂದೀಪ್ ಫೆ.23ರಂದು ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ದಾಸೋಹ ಭವನದಲ್ಲಿ ಭಕ್ತಾದಿಗಳು ಮತ್ತು ಪ್ರವಾಸಿಗರಿಗೆ ಪ್ರಸಾದ ವಿನಿಯೋಗಿಸುವುದು ಅವಶ್ಯವಾಗಿದ್ದು, ಮಾರ್ಚ್ 1ರಿಂದ ಅನ್ವಯವಾಗುವಂತೆ ದಿನನಿತ್ಯ ನಡೆಯುವ ಮಧ್ಯಾಹ್ನದ ಪ್ರಸಾದದ ವಿನಿಯೋಗದ ಜೊತೆ ಬೆಳಿಗ್ಗೆ ಮತ್ತು ಸಂಜೆ ಪ್ರಸಾದ ವಿನಿಯೋಗಿಸುವಂತೆ ಅಧಿಕೃತ ಆದೇಶ ಹೊರಡಿಸಿದ್ದರು. ಅದರಂತೆ ಇಂದು ಬೆಳಿಗ್ಗೆ ಪ್ರಸಾದ ವಿತರಿಸಲಾಗಿದೆ.7.30ರಿಂದ 10ಗಂಟೆ, ಮತ್ತು ಸಂಜೆ 7.30ರಿಂದ 9ರವರೆಗೆ ಪ್ರಸಾದ ವಿತರಣೆ ಮಾಡಲಾಗುತ್ತದೆ.

Mysuru: Variety of Prasadam will be distributed in Chamundi hills from today

ಅದರಂತೆ ಇಂದು ಬೆಳಿಗ್ಗೆ ಪ್ರಸಾದ ವಿತರಿಸಲಾಗಿದೆ. ಸೋಮವಾರ ತರಕಾರಿ ಉಪ್ಪಿಟ್ಟು ಮತ್ತು ರವೆ ಕೇಸರಿ ಬಾತ್, ಗುರುವಾರ ಅವಲಕ್ಕಿ ಉಪ್ಪಿಟ್ಟು ಮತ್ತು ಸಿಹಿ ಅವಲಕ್ಕೆ, ಶುಕ್ರವಾರ ತರಕಾರಿ ಬಾತ್ ಮತ್ತು ಬೆಲ್ಲದ ಅನ್ನ, ಶನಿವಾರ ವಾಂಗೀಬಾಥ್ ಮತ್ತು ರವೆ ಸಜ್ಜಿಗೆ, ಭಾನುವಾರ ಟಮೋಟೋ ಬಾತ್ ಮತ್ತು ಬೆಲ್ಲದ ಅನ್ನವನ್ನು ಭಕ್ತರಿಗೆ ಪ್ರಸಾದದ ರೂಪದಲ್ಲಿ ನೀಡಲಾಗುತ್ತಿದೆ. ದೇವಾಲಯಕ್ಕೆ ಗುರುವಾರ ಮುಂಜಾನೆ ಆಗಮಿಸಿದ ಭಕ್ತಾದಿಗಳು ಈ ಪ್ರಸಾದವನ್ನು ಸ್ವೀಕರಿಸಿ ಕೃತಾರ್ಥರಾಗಿದ್ದಾರೆ.

ಚಾಮುಂಡಿ ಬೆಟ್ಟದಲ್ಲಿ ಪ್ರವಾಸಿಗರಿಗೆ ಇನ್ಮುಂದೆ ಊಟ, ಬಗೆಬಗೆ ತಿಂಡಿಚಾಮುಂಡಿ ಬೆಟ್ಟದಲ್ಲಿ ಪ್ರವಾಸಿಗರಿಗೆ ಇನ್ಮುಂದೆ ಊಟ, ಬಗೆಬಗೆ ತಿಂಡಿ

English summary
Varieties of Prasadam Distribution has been started for pilgrims and tourists from morning to evening with the dusk of the afternoon at Chamundi Hill. Distribution started from today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X