ಚಿತ್ರಗಳು : ಮೈಸೂರು ವಿವಿ ಶತಮಾನದ ಸಂಭ್ರಮಕ್ಕೆ ತೆರೆ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಜುಲೈ 23 : ಮೈಸೂರು ವಿಶ್ವ ವಿದ್ಯಾಲಯವು ಶತಮಾನದ ಸಂಭ್ರಮದಲ್ಲಿ ಕಳೆದೊಂದು ವರ್ಷದಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು, ಶುಕ್ರವಾರ ಸಂಜೆ ಶತಮಾನೋತ್ಸವದ ಸಂಭ್ರಮಕ್ಕೆ ತೆರೆ ಎಳೆಯಲಾಯಿತು.

ಈ ಅಭೂತಪೂರ್ವ ಕಾರ್ಯಕ್ರಮಕ್ಕೆ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ರಾಜ್ಯಪಾಲ ವಾಜುಭಾಯಿ ರುಢಾಭಾಯಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಸಾಕ್ಷಿಯಾದರು.[ಮೈಸೂರು ವಿಶ್ವವಿದ್ಯಾಲಯ ವಿದ್ಯಾರ್ಥಿಗಳೆಲ್ಲ ಒಂದಾಗಿ ಬನ್ನಿ]

Mysuru university

ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾದ, ಶತಮಾನೋತ್ಸವ ಕಂಡಿರುವ ಹಾಗೂ ಕರ್ನಾಟಕದ ಮೊದಲ ಹಾಗೂ ದೇಶದ 4 ವಿಶ್ವವಿದ್ಯಾಲಯವಾಗಿರುವ ಮೈಸೂರು ವಿಶ್ವ ವಿದ್ಯಾಲಯದ ಶತಮಾನದ ಸಂಭ್ರಮದ ಸಮಾರೋಪ ಸಮಾರಂಭ ಮಾನಸ ಗಂಗೋತ್ರಿಯ ಆ್ಯಂಫಿ ಥಿಯೇಟರ್ (ಬಯಲು ರಂಗಮಂದಿರ) ನಲ್ಲಿ ನಡೆಯಿತು. [ಮೈಸೂರು ಪ್ರತಿದಿನ ನೆನೆಯಬೇಕಾದ ವೆಂಕಟಸುಬ್ಬ ಸೆಟ್ಟಿ]

 university

ಕಾರ್ಯಕ್ರಮದಲ್ಲಿ ಮಾತನಾಡಿದ 'ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು, ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಮೈಸೂರು ವಿಶ್ವವಿದ್ಯಾಲಯ ಶತಮಾನ ಪೂರೈಸಿರುವುದು ಮೈಲುಗಲ್ಲೇ ಸರಿ. ಮಹಿಳೆ, ಪುರುಷರೆನ್ನದೆ ಜ್ಞಾನದ ಬೆಳಕನ್ನು ನೀಡುತ್ತಿರುವ ವಿವಿ ದೇಶಕ್ಕೆ ಉತ್ತಮ ಮಾನವ ಸಂಪನ್ಮೂಲವನ್ನು ನೀಡುತ್ತಿದೆ' ಎಂದರು.['ಲರ್ನ್ ಟು ಸರ್ವ್,ಸರ್ವ್ ಟು ಲರ್ನ್' ಆರಂಭಿಸಿದ ಮೈಸೂರು ವಿವಿ]

Hamid Ansari

'ಮೈಸೂರು ವಿವಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದರ್ಶಿತ್ವದ ಪ್ರತೀಕ. ಅಲ್ಲದೆ ಬ್ರಿಟಿಷ್ ಆಡಳಿತಕ್ಕೆ ಒಳಪಡದೆ ಸ್ಥಾಪನೆಯಾದ ಮೊದಲ ವಿವಿಯೂ ಹೌದು. ಇಂದು ದೇಶದ ದೊಡ್ಡ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಯನ್ನು ಗಳಿಸಿದ್ದು, 85 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ' ಎಂದು ಶ್ಲಾಘಿಸಿದರು.

mysuru

ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಲೋಕೋಪಯೋಗಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ವಿವಿ ಕುಲಪತಿ ಪ್ರೊ.ರಂಗಪ್ಪ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

university mysore

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The valedictory of the centenary celebrations of the University of Mysuru held on July 22, 2016. Vice-President M. Hamid Ansari delivered valedictory address of the centenary celebrations.
Please Wait while comments are loading...