ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ವಿವಿ ಹಂಗಾಮಿ ಕುಲಪತಿಗೆ ಲೇಡಿಸ್ ಹಾಸ್ಟೇಲ್ ನಲ್ಲೇನು ಕೆಲಸ?!

ವಿನಾಕಾರಣ ಲೇಡೀಸ್ ಹಾಸ್ಟೆಲ್ ಗೆ ಪದೇ ಪದೇ ಭೇಟಿ ನೀಡುತ್ತಿದ್ದ ಮೈಸೂರು ವಿವಿಯ ಹಂಗಾಮಿ ಕುಲಪತಿ ದಯಾನಂದ ಮಾನೆ ಅವರ ಮೇಲೆ ವಿದ್ಯಾರ್ಥಿನಿಯೋರ್ವಳು ದೂರು ನೀಡಿದ್ದಾರೆ.

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಏಪ್ರಿಲ್ 18 : ಮೈಸೂರು ವಿವಿ ಕುಲಪತಿ ದಯಾನಂದ ಮಾನೆ ಅನಗತ್ಯ ಮತ್ತು ನಿಷ್ಪ್ರಯೋಜಕ ಸಮಸ್ಯೆಗಳ ಕಾರಣವೊಡ್ಡಿ ಬಾಲಕಿಯರ ಹಾಸ್ಟೇಲ್ ಗೆ ಪದೇ ಪದೇ ಭೇಟಿ ನೀಡುತ್ತಿರುತ್ತಾರೆ ಎಂಬ ಗುರುತರ ಆರೋಪ ಕೇಳಿಬಂದಿದೆ. ಹೊತ್ತಲ್ಲದ ಹೊತ್ತಿನಲ್ಲಿ, ಅವರ ಮನಬಂದಂತೆ ವಿದ್ಯಾರ್ಥಿನಿಯರ ಹಾಸ್ಟೆಲ್ ಗೆ ಭೇಟಿ ನೀಡುತ್ತಾರೆ ಎಂದು ಆರೋಪಿಸಿ ಅಲ್ಲಿನ ವಿದ್ಯಾರ್ಥಿನಿಯೋರ್ವರು ಕುಲಸಚಿವ ಪ್ರೊ.ರಾಜಣ್ಣ ಅವರಿಗೆ ದೂರು ಸಲ್ಲಿಸಿದ್ದಾರೆ.

ಕರ್ನಾಟಕದ ಪ್ರತಿಷ್ಠಿತ ವಿವಿ ಎಂಬ ಗೌರವ ಹೊಂದಿರುವ ಮೈಸೂರು ವಿವಿ ಮತ್ತೊಮ್ಮೆ ವಿವಾದಕ್ಕೆ ಗುರಿಯಾಗಿದೆ. ಮಾನೆ ವಿಷಯಕ್ಕೆ ಸಂಬಂಧಿಸಿದಂತೆ ವಿವಿಯ ರಿಜಿಸ್ಟ್ರಾರ್ ಅವರೇ ಸ್ವತಃ ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ ಅವರ ಗಮನ ಸೆಳೆದಿದ್ದಾರೆ ಎನ್ನಲಾಗಿದೆ. ಪ್ರಭಾರಿ ವಿಸಿ ದಿನಾಲು ಮೂರು ಬಾರಿ ಮಹಿಳಾ ಹಾಸ್ಟೆಲ್ ಗೆ ಭೇಟಿ ನೀಡುತ್ತಿದ್ದು, ಇದರ ಬಗ್ಗೆ ಅಲ್ಲಿನ ವಿದ್ಯಾರ್ಥಿನಿಯರೇ ದೂರಿದ್ದಾರೆ ಎಂದು ಹೇಳಲಾಗಿದೆ.[ಮಾಜಿ ಸಂಸದ ಎಚ್ ವಿಶ್ವನಾಥ್ ಜೆಡಿಎಸ್ ಗೆ: ದೇವೇಗೌಡ್ರು ಏನಂದ್ರು?]

ಫೆ.19ರಂದು ಮೈಸೂರು ವಿಶ್ವವಿದ್ಯಾನಿಲಯದ ಹಂಗಾಮಿ ಕುಲಪತಿಗಳಾಗಿ ನೇಮಕಗೊಂಡಿರುವ ಪ್ರೊ.ದಯಾನಂದ ಮಾನೆ ಸರ್ಕಾರ ಹಾಗೂ ವಿಶ್ವವಿದ್ಯಾಲಯಗಳ ನೀತಿ ನಿಯಮಗಳನ್ನು ಗಾಳಿಗೆ ತೂರಿ ತನ್ನ ಮನಸಿಗೆ ಬಂದಂತೆ ಆಡಳಿತ ನಡೆಸುತ್ತಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಯಾವಾಗ ಬೇಕಾದರೂ ವಿದ್ಯಾರ್ಥಿನಿಯರ ಹಾಸ್ಟೆಲ್ ಗೆ ಭೇಟಿ ನೀಡಿ, ವಿದ್ಯಾರತ್ಹಿಗಳಿಗೆ ಮುಜುಗರವಾಗುವಂತೆ ಮಾಡುತ್ತಿದ್ದಾರೆ. ಅವರು ಹಾಸ್ಟೆಲ್ ಗೆ ಭೇಟಿ ನೀಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ರಾಜಣ್ಣ ಪತ್ರದಲ್ಲೇನಿದೆ?

ರಾಜಣ್ಣ ಪತ್ರದಲ್ಲೇನಿದೆ?

ಈ ಎಲ್ಲ ದೂರಿನ ಜೊತೆ ಪ್ರೊ.ದಯಾನಂದ ಮಾನೆ ಅವರ ಕುರಿತಂತೆ ಸರ್ಕಾರಕ್ಕೆ ಪ್ರೊ.ರಾಜಣ್ಣ ಪತ್ರವೊಂದನ್ನು ಬರೆದಿದ್ದಾರೆ. ಪ್ರೊ.ಮಾನೆ ತಾನು ಹಂಗಾಮಿಯಾಗಿ ನೇಮಕವಾದಂದನಿಂದಲೂ ದುಂಡಾವರ್ತನೆ ತೋರುತ್ತಿದ್ದು, ರಾಜ್ಯ ಶಾಸ್ತ್ರದಲ್ಲಿ 2-3 ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದ ಆರು ಮಂದಿಯನ್ನು ತೆಗೆದುಹಾಕಿ ಅವರ ಬದಲಿಗೆ ಸಂದರ್ಶನವನ್ನೇ ನಡೆಸದೇ ಇಬ್ಬರನ್ನು ಅತಿಥಿ ಉಪನ್ಯಾಸಕರನ್ನಾಗಿ ನೇಮಕ ಮಾಡುವಂತೆ ಆದೇಶ ಹೊರಡಿಸಿದ್ದಾರೆ ಎಂದು ಪತ್ರದಲ್ಲಿ ಬರೆಯಲಾಗಿದೆ.

ವಿನಾಕಾರಣ ಹಾಸ್ಟೆಲ್ ಭೇಟಿ

ವಿನಾಕಾರಣ ಹಾಸ್ಟೆಲ್ ಭೇಟಿ

ಇವರ ಮೇಲೆ ಲೈಂಗಿಕ ಕಿರುಕುಳದ ಆರೋಪಗಳಿದ್ದರೂ ಹಿರಿಯ ಡೀನರೆಂದು ಇವರನ್ನೇ ಕುಲಪತಿಗಳನ್ನಾಗಿ ಮಾಡಲು ಕೇಳಿಕೊಳ್ಳಲಾಗಿತ್ತು. ಆದರೆ ಇವರು ವಿದ್ಯಾರ್ಥಿನಿಯರ ವಸತಿ ನಿಲಯಗಳಿಗೆ ಭೇಟಿ ನೀಡಿ ವಿದ್ಯಾರ್ಥಿನಿಯರನ್ನು ಕೊಠಡಿಗೆ ಕರೆದು ಸಂಬಂಧವಿಲ್ಲದ ವಿಷಯಗಳ ಕುರಿತು ಮಾತನಾಡುತ್ತಾರೆ. ಪದೇ ಪದೇ ಭೇಟಿ ನೀಡುತ್ತಾರೆ ಎಂಬ ಆರೋಪ ಬಂದಿದೆ ಎಂಬುದಾಗಿ ಪತ್ರದಲ್ಲಿ ವಿವರಿಸಿದ್ದಾರೆ.[ನೀರು ಒದಗಿಸದಿದ್ದರೆ ನಿರ್ದಾಕ್ಷಿಣ್ಯ ಕ್ರಮ: ಮಹದೇವಪ್ಪ]

ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆ

ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆ

ವರದಿಗಳ ಪ್ರಕಾರ ಸಿಸಿಟಿವಿಗಳಲ್ಲೂ ಮಾನೆ ಹಾಸ್ಟೆಲ್ ಒಳಗೆ ಒಡಾಡುತ್ತಿರುವುದು ದಾಖಲಾಗಿದೆ. ಮಹಿಳಾ ಹಾಸ್ಟೆಲ್ ನ ಮೂಲಗಳ ಪ್ರಕಾರ ಈ ತಿಂಗಳು ಕನಿಷ್ಠ ನಾಲ್ಕು ಬಾರಿ ಮಾನೆ ಈ ರೀತಿ ಮಾಡಿದ್ದಾರೆ ಎನ್ನಲಾಗಿದೆ.ಕೆಲಸದ ವೇಳೆ ನಂತರ ಸಂಜೆಯ ಹೊತ್ತಿನಲ್ಲಿ ವಿಸಿ ಹಾಸ್ಟೇಲ್ ಗೆ ಭೇಟಿ ನೀಡಿದ್ದು ಹೆಸರು ಹೇಳಬಯಸದ ವಿದ್ಯಾರ್ಥಿನಿ ಪ್ರಕಾರ ಅವರಿಗೆ ವಿಸಿ ಅವರ ಈ ವರ್ತನೆ ಬೇಸರ ತರಿಸಿದೆ. ಜಾಗಿಂಗ್ ನಂತರ ಅದೇ ಉಡುಪುಗಳಲ್ಲಿ ಹಾಸ್ಟೆಲ್ ಪ್ರವೇಶಿಸಿದ್ದಾರೆ. ಹಿಂದಿನ ವಿಸಿಗಳಾರೂ ಈ ರೀತಿ ನಡೆದುಕೊಂಡಿರಲಿಲ್ಲ.[ಮೈಸೂರು ಬಾಲಕನ ಸಾವಿಗೆ ಆರ್ ಬಿಐ ಕಾರಣ : ಎಎಪಿ]

ವಿವಿಯಲ್ಲಿ ಅಕ್ರಮ?

ವಿವಿಯಲ್ಲಿ ಅಕ್ರಮ?

ಅಲ್ಲದೇ 402 ವಿದ್ಯಾರ್ಥಿನಿಯರಿರುವ ಈ ಹಾಸ್ಟೆಲ್ ನಲ್ಲಿ ಈ ಹಿಂದೆ ಆತ್ಮಹತ್ಯೆ ತಪ್ಪಿಸಲು ಫ್ಯಾನ್ ಗಳನ್ನು ತೆಗೆಯಲಾಗಿತ್ತು. ಆದರೆ ಈಗ ಕೇವಲ 12 ಕೊಠಡಿಗಳಲ್ಲಿ ಫ್ಯಾನ್ ಅಳವಡಿಸಲಾಗಿದೆ. ಇದು ಏಕೆ? ಎಂದು ಕೆಲವರು ಪ್ರಶ್ನಿಸಿದ್ದಾರೆ. ತಮ್ಮ ಒಪ್ಪಿಗೆ ಇಲ್ಲದೇ ಫ್ಯಾನ್ ಗಳನ್ನು ಹಾಕಿಸುವ ವಿಷಯವನ್ನು ಕುರಿತು ರಿಜಿಸ್ಟ್ರಾರ್‍ ರಾಜಣ್ಣ ಆಕ್ಷೇಪ ವ್ಯಕ್ತಪಡಿಸುತ್ತಾರೆ. ಜೊತೆಗೆ ವಿವಿಯಲ್ಲಿನ ಅಕ್ರಮಗಳನ್ನು ಕರಿತು ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಬರೆದಿರುವುದಾಗಿ ಅವರು ಹೇಳಿದ್ದಾರೆ.[ಮೈಸೂರಿನಲ್ಲಿ ಬೆಂಕಿಯುಗುಳುವ ಭೂಮಿ: ಭೂವಿಜ್ಞಾನಿಗಳಿಗೇ ಸವಾಲು!]

ಸಮರ್ಥಿಸಿಕೊಂಡ ಮಾನೆ

ಸಮರ್ಥಿಸಿಕೊಂಡ ಮಾನೆ

ಈ ಆರೋಪಗಳನ್ನು ತಳ್ಳಿಹಾಕಿರುವ ದಯಾನಂದ ಮಾನೆ, ನಾನು ಎರಡು ಬಾರಿ ಮಾತ್ರ ಹಾಸ್ಟೆಲ್ ಗೆ ಭೇಟಿ ನೀಡಿದ್ದೇನೆ. ಆಗ ತಮ್ಮೊಡನೆ ವಿಶ್ವವಿದ್ಯಾಲಯದ ಇತರ ಸದಸ್ಯರೂ ಇದ್ದರು. ತಾವು ಏಕಾಂಗಿಯಾಗಿ ಎಂದೂ ಹಾಸ್ಟೆಲ್ ಗೆ ಭೇಟಿ ನೀಡಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.[ಬಲಮುರಿಯಲ್ಲೂ ಸೊರಗಿದ್ದಾಳೆ ಕಾವೇರಿ!]

English summary
The vice chancellor of Mysuru University Jagadeesh Mane is facing a controversy now. Without any reason he was oftenly going to Ladies hostel. A student has given complaint to registrar Prof. Rajanna.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X