ಮೈಸೂರಿನಲ್ಲಿ ಇನ್ನಷ್ಟು 5ಜಿ ಹಾಟ್ ಸ್ಪಾಟ್ ಗಳು : ಪ್ರತಾಪ್ ಸಿಂಹ

Posted By:
Subscribe to Oneindia Kannada

ಮೈಸೂರು, ಜುಲೈ 14: ಸ್ವಚ್ಛ ನಗರಿ, ಸಮರ್ಥ ನಗರಿ ಎನಿಸಿಕೊಂಡಿರುವ ಮೈಸೂರಿನ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಲಿದೆ. ಪ್ರಾಯೋಗಿಕವಾಗಿ ಆರಂಭವಾದ 5ಜಿ ವೈ ಫೈ ಹಾಟ್ ಸ್ಪಾಟ್ ಗಳು ಯಶಸ್ವಿಯಾಗಿದ್ದು, ನಗರದ ಹಲವೆಡೆ ಇನ್ನಷ್ಟು ಹಾಟ್ ಸ್ಪಾಟ್ ಗಳನ್ನು ಕಾಣಬಹುದಾಗಿದೆ.

ಮೈಸೂರನ್ನು ಸ್ಮಾರ್ಟ್ ಸಿಟಿಯಾಗಿ ಉನ್ನತೀಕರಿಸುವ ಸಂಬಂಧವಾಗಿ ಮೈಸೂರಿನ ಸಾರ್ವಜನಿಕ ಸ್ಥಳಗಳಲ್ಲಿ ಕ್ವಾಡ್ಜೆನ್-ಬಿ.ಎಸ್.ಎನ್.ಎಲ್ ಸಂಸ್ಥೆ ವತಿಯಿಂದ 5ಜಿ ವೈಫೈ ಹಾಟ್ ಸ್ಪಾಟ್ ಗಳನ್ನು ಅಳವಡಿಸುವ ಕಾಮಗಾರಿಯು ಈಗಾಗಲೇ ಮೈಸೂರು ನಗರದ ಹಲವೆಡೆ ಪ್ರಗತಿಯಲ್ಲಿದೆ.[ಬೆಂಗಳೂರು, ಮುಂಬೈ, ದೆಹಲಿ ಸ್ಮಾರ್ಟ್ ಸಿಟಿಗಳಲ್ಲ: ಸಮೀಕ್ಷೆ]

Mysuru to get more BSNL 5G Wi-Fi hotspots : Pratap Simha

ಈಗಾಗಲೇ ಮೈಸೂರು ಮೃಗಾಲಯದ ಆವರಣದಲ್ಲಿ 5ಜಿ ವೈಫೈ ಹಾಟ್ ಸ್ಪಾಟ್ ಅನ್ನು ಉದ್ಘಾಟನೆಗೊಳಿಸಲಾಗಿದ್ದು, ಇದೇ ಮಾದರಿಯ 5ಜಿ ವೈಫೈ ಹಾಟ್ ಸ್ಪಾಟ್ ಅನ್ನು ಮೈಸೂರು ನಗರದ ಮೈಸೂರು ಜಿಲ್ಲಾ ನ್ಯಾಯಲಯದ ಆವರಣದಲ್ಲಿ ಅಳವಡಿಸುವ ಕಾಮಗಾರಿಯು ಪೂರ್ಣಗೊಂಡಿದೆ.[ಬಿಎಸ್ಎನ್ಎಲ್ ನಿಂದ 40 ಸಾವಿರ ವೈಫೈ ಹಾಟ್ ಸ್ಪಾಟ್]

ಶುಕ್ರವಾರದಂದು(ಜುಲೈ 15) ಬೆಳಿಗ್ಗೆ 10.15ಗಂಟೆ ಸುಮಾರಿಗೆ ಮೈಸೂರು-ಕೊಡಗು ಲೋಕಸಭಾ ಸಂಸದ ಪ್ರತಾಪ್ ಸಿಂಹರವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಸಾರ್ವಜನಿಕರ ಉಪಯೋಗಕ್ಕೆ ಅನುವು ಮಾಡಿಕೊಡಲಿದ್ದಾರೆ. ಸದರಿ ಕಾರ್ಯಕ್ರಮದಲ್ಲಿ ಜಿಲ್ಲಾ ನ್ಯಾಯಲಯದ ಮಾನ್ಯ ನ್ಯಾಯದೀಶರು ಹಾಗೂ ಬಿ.ಎಸ್.ಎನ್.ಎಲ್ ಇಲಾಖೆಯ ಅಧಿಕಾರಿಗಳು ಭಾಗಹಿಸಲಿದ್ದಾರೆ.

ಎಲ್ಲೆಲ್ಲಿ ಹಾಟ್ ಸ್ಪಾಟ್ ಇದೆ?: ಆದರೆ, ಮೊದಲ 30 ನಿಮಿಷಗಳ ಇಂಟರ್ನೆಟ್ ಮಾತ್ರ ಉಚಿತವಾಗಿದ್ದು ನಂತರ ಶುಲ್ಕ ವಿಧಿಸಲಾಗುತ್ತದೆ. ಇಂಟರ್ನೆಟ್ ಸೌಲಭ್ಯ ಬಳಸುವವರಿಗೆ ಒನ್ ಟೈಮ್ ಪಾಸ್ವರ್ಡ್ ನೀಡಲಾಗುತ್ತದೆ ಎಂದು ಬಿಎಸ್ ಎನ್ ಎಲ್ ನಿರ್ದೇಶಕರಲ್ಲಿ ಒಬ್ಬರಾದ ಎನ್ ಕೆ ಗುಪ್ತ ವಿವರಿಸಿದ್ದಾರೆ.[ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಉಚಿತ ವೈಫೈ: ಪಾಟೀಲ್]

ಮೈಸೂರು ಮೃಗಾಲಯದಲ್ಲಿ ಟೈಗರ್ ಪಾರ್ಕ್, ಆನೆ ಗಾರ್ಡನ್, ರೆಸ್ಟೋರೆಂಟ್, ಜಿರಾಫೆ ಪಾರ್ಕ್ ಬಳಿ ವೈಫೈ ಹಾಟ್ ಸ್ಪಾಟ್ ಆವಡಿಸಲಾಗಿದೆ. 10ಎಂಬಿಪಿಎಸ್ ಸ್ಪೀಡ್ ನಲ್ಲಿ ಸಿಗುವ ಇಂಟರ್ನೆಟ್ ಸೌಲಭ್ಯವನ್ನು ಏಕಕಾಲಕ್ಕೆ 1000 ಮಂದಿ ಬಳಸಬಹುದಾಗಿದೆ.

ಒಟ್ಟಾರೆ ಕರ್ನಾಟಕ ವೃತ್ತ(ಬಿಎಸ್ ಎನ್ ಎಲ್ ಸರ್ಕಲ್ ) ದಲ್ಲಿ 19ಜಿಲ್ಲೆ, 215 ತಾಣಗಳಲ್ಲಿ 548 ಹಾಟ್ ಸ್ಪಾಟ್ ಅಳವಡಿಸಲಾಗಿದೆ. ನಗರ ಪ್ರದೇಶವಲ್ಲದೆ 90ಕ್ಕೂ ಅಧಿಕ ಹಳ್ಳಿಗಳಲ್ಲೂ ಹೈ ಸ್ಪೀಡ್ ಇಂಟರ್ನೆಟ್ ಒದಗಿಸಲಾಗಿದೆ ಇದಕ್ಕೆ ನ್ಯಾಷನಲ್ ಆಪ್ಟಿಕಲ್ ಫೈಬರ್ ನೆಟ್ವರ್ಕ್ ನೆರವಾಗಿದೆ.(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bharat Sanchar Nigam Limited (BSNL) has introduced grade 5G Wi-Fi hotspots at five places including Mysore Zoo. Now a Wi-Fi hotspot will be launched on July 15 by MP Pratap Simha on district court campus
Please Wait while comments are loading...