ಮೈಸೂರು ಅರಮನೆಯಲ್ಲಿ ಕಸ: ಯದುವೀರ್ ಕಸಿವಿಸಿ

Posted By: Prithviraj
Subscribe to Oneindia Kannada

ಮೈಸೂರು, ಅಕ್ಟೋಬರ್, 13 : ದಸರಾ ಮಹೋತ್ಸವದಲ್ಲಿ ನವವಧುವಿನಂತೆ ಸಿಂಗಾರಗೊಂಡಿದ್ದ ಅರಮನೆಯಲ್ಲಿ ಈಗ ಎಲ್ಲಿ ನೋಡಿದರೂ ಕಸವೇ ಕಾಣುತ್ತಿದೆ. ಮಹೋತ್ಸವ ವೀಕ್ಷಿಸಲು ಬಂದ ಸಾರ್ವಜನಿಕರು ಅರಮನೆಯ ತುಂಬಾ ಎಲ್ಲೆಂದರಲ್ಲಿ ಕಸ ಬಿಸಾಡಿರುವ ಛಾಯಚಿತ್ರಗಳನ್ನು ರಾಜವಂಶಸ್ಥ ಯದುವೀರ್ ಪ್ರಕಟಿಸಿದ್ದು, ಸಾರ್ವಜನಿಕರ ಈ ನಡತೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಐತಿಹಾಸಿಕ ಮೈಸೂರು ಅರಮನೆಯನ್ನು ದಸರಾ ಸಂದರ್ಭದಲ್ಲಿ ಈ ರೀತಿ ಹಾಳು ಮಾಡಿರುವ ಸಾರ್ವಜನಿಕರ ನಡವಳಿಕೆಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅರಮನೆಯ ದರ್ಬಾರ್ ಹಾಲ್ ತುಂಬೆಲ್ಲಾ ಕಸಬಿಸಾಡಿರುವುದನ್ನು ಮೇಲಿನ ಚಿತ್ರಗಳಲ್ಲಿ ನೋಡಬಹುದಾಗಿದೆ.

ಅರಮನೆಯ ದರ್ಬಾರ್ ಹಾಲ್ ಚಿತ್ರಮಂದಿರವಲ್ಲ ಎಂದು ಸಾರ್ವಜನಿಕರು ಅರಿತುಕೊಳ್ಳಬೇಕಾದ ಅಗತ್ಯವಿದೆ. ಆ ತಿಳುವಳಿಕೆ ಅವರಿಗಿದ್ದರೆ ದರ್ಬಾಲ್ ಹಾಲ್ ಒಳಗೆ ತಿಂಡಿ ಪದಾರ್ಥಗಳನ್ನು ತೆಗೆದುಕೊಂಡು ಬರುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಅರಮನೆಯಲ್ಲಿ ಕಸ: ಯದುವೀರ್ ಅಸಮಾಧಾನ

ದೇಶದಲ್ಲೇ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿರುವ ಮೈಸೂರಿನ ಪ್ರಮುಖ ಆರಕರ್ಷಣೆಯಾದ ಅರಮನೆಯಲ್ಲಿ ಈ ರೀತಿ ಕಸ ಬಿಸಾಡಿರುವುದು ಹೇಯ ಕೃತ್ಯ" ಎಂದು ಅವರು ಹೇಳಿದ್ದಾರೆ.

ಅರಮನೆಯಲ್ಲಿ ಕಸ: ಯದುವೀರ್ ಅಸಮಾಧಾನ

ಕಳೆದ ಎರಡು ವರ್ಷಗಳಿಂದ ಸ್ವಚ್ಛನಗರಗಳ ಪೈಕಿ ಅಗ್ರಸ್ಥಾನದಲ್ಲಿರುವ ಮೈಸೂರಿನಲ್ಲಿ ಈ ರೀತಿ ಕಸ ಬಿಸಾಡುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ. ನಮ್ಮ ಸಂಸ್ಕೃತಿ, ನಮ್ಮ ಪರಂಪರೆಯನ್ನು ಬಿಂಬಿಸುವ ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕಾದ ಜವಾಬ್ದಾರಿ ನಮ್ಮ ಹೆಗಲ ಮೇಲಿದೆ ಎಂದು ಅವರು ಹೇಳಿದ್ದಾರೆ.

ಇನ್ನೂ ಅರಮನೆಯಲ್ಲಷ್ಟೇ ಅಲ್ಲದೇ ಜಂಬೂಸವಾರಿ ನಡೆಯುವ ಐದು ಕೀ.ಮೀ ಮಾರ್ಗದ ತುಂಬೆಲ್ಲಾ ಇದೇ ರೀತಿ ಕಸ ತುಂಬಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mysuru Royal call out litterbugs with pic showing Dasara aftermath. Tituler Yaduveer waeiyar shared an instagram post to show the sorry aftermath of the celebrations
Please Wait while comments are loading...