ಮೆಲ್ಬರ್ನ್ ನಲ್ಲಿ ಅಪಘಾತ: ಕೋಮಾ ತಲುಪಿದ ಮೈಸೂರಿನ ನೇತ್ರಾ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಜನವರಿ 24 : ಆಸ್ಟ್ರೇಲಿಯಾದ ಮೆಲ್ಬರ್ನಿನ ಸಾಫ್ಟ್ ವೇರ್ ಉದ್ಯೋಗಿ ಮೈಸೂರಿನ ಮೂಲದ ನೇತ್ರಾ ಕೃಷ್ಣಮೂರ್ತಿ ಈಚೆಗೆ ನಡೆದ ರಸ್ತೆ ಅಪಘಾತದಲ್ಲಿ ಮಾರಣಾಂತಿಕವಾಗಿ ಗಾಯಗೊಂಡಿದ್ದು, ಕೋಮಾ ಸ್ಥಿತಿಗೆ ಜಾರಿದ್ದಾರೆ. ತನ್ನ ಎಂಟು ತಿಂಗಳ ಕಂದಮ್ಮ ತಾಯಿಯ ಮೃದುನುಡಿಯನ್ನು ಕೇಳದಾಗಿದೆ.

ಕಳೆದ ಶುಕ್ರವಾರ ಮೆಲ್ಬರ್ನ್‍ನಲ್ಲಿ ವ್ಯಕ್ತಿಯೊಬ್ಬನ ನಿರ್ಲಕ್ಷ್ಯದಿಂದ ವಾಹನ ಚಾಲಾಯಿಸಿದ್ದರ ಪರಿಣಾಮ ವಾಹನವು ಪಾದಚಾರಿಗಳ ಮೇಲೆ ಮೇಲೇರಗಿತ್ತು ಈ ಅಪಘಾತದಲ್ಲಿ ನೇತ್ರಾ ಅವರ ತಲೆಗೆ, ದೇಹದ ಇತರೆ ಭಾಗಗಳಾದ ಶ್ವಾಸಕೋಶ, ಮೂತ್ರಕೋಶ, ಪಕ್ಕೆಲುಬು ಹಾಗೂ ಇತರೆ ಭಾಗಗಳಿಗೆ ತೀವ್ರ ಗಂಭೀರ ಗಾಯಗಳಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪತಿ ಮೊಹನ್ ಕುಮಾರ್ ತಿಳಿಸಿದ್ದಾರೆ.[ಚಿತ್ರದುರ್ಗ : ಭೀಕರ ಅಪಘಾತ, 7 ವಿದ್ಯಾರ್ಥಿನಿಯರು ಸಾವು]

mysuru techie crippled in Australia road rampage

ನೇತ್ರಾ ಎಂಟು ತಿಂಗಳಿನಿಂದಷ್ಟೇ ತಾಯಿಯಾಗಿದ್ದಾರೆ. ಅವರು ಕಳೆದ ವಾರವಷ್ಟೇ ಹೆರಿಗೆ ರಜೆ ಮುಗಿಸಿ ಉದ್ಯೋಗಕ್ಕೆ ಮರಳಿದ್ದಾರೆ. ಶುಕ್ರವಾರ ಮಧ್ಯಾಹ್ನ ತನ್ನ ಪುಟ್ಟ ಕಂದನಿಗೆ ಹಾಲುಣ್ಣಿಸಿ ಕಚೇರಿಗೆ ತೆರಳುವ ಸಂದರ್ಭದಲ್ಲಿ ಈ ರಸ್ತೆ ಅಪಘಾತ ಸಂಭವಿಸಿದ್ದು, ಸದ್ಯ ತೀವ್ರಾ ನಿಗಾ ಘಟಕದ್ದು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎನ್ನಲಾಗಿದೆ.

ಇನ್ನು ಈ ಅಪಘಾತದಲ್ಲಿ ಆಸ್ಟ್ರೇಲಿಯಾದ ಐವರು ದುರ್ಮರಣಕ್ಕೀಡಾಗಿದ್ದರು. ಈ ಅಪಘಾತದಲ್ಲಿ ಬುದುಕಿ ಉಳಿದಿದ್ದು ನೇತ್ರ ಮಾತ್ರ. ಆದರೆ ಆಕೆಯ ಸ್ಥಿತಿ ಚಿಂತಾಜನಕವಾಗಿದ್ದು ಕೋಮಾ ಹಂತ ತಲುಪಿರುವುದು ಪರಿವಾರಕ್ಕೆ ತೀವ್ರ ನೋವನ್ನು ಉಂಟು ಮಾಡಿದೆ.

ಕಲಬುರಗಿ ನೇತ್ರಾ ಅವರ ತವರು ಮನೆಯಾಗಿದ್ದು, ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ಎಂಜಿನಿಯರ್ ಮೈಸೂರಿನಲ್ಲಿ ವ್ಯಾಸಂಗ ಮಾಡಿ ಉದ್ಯೋಗಕ್ಕಾಗಿ ಆಸ್ಟ್ರೇಲಿಯಾಕ್ಕೆ ತೆರಳಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A Mysuru woman IT professional, who was among the critically injured in a deadly incident in Melbourne last week when a man intentionally hit pedestrians with his car and killed five persons, is recovering, her husband said
Please Wait while comments are loading...