ಹೋಂ ವರ್ಕ್ ಮಾಡಿಲ್ಲವೆಂದು ರಕ್ತಬರುವಂತೆ ಬಾರಿಸಿದ ಶಿಕ್ಷಕಿ!

Posted By:
Subscribe to Oneindia Kannada

ಮೈಸೂರು, ನವೆಂಬರ್ 22: ಚಾಮರಾಜನಗರದ ಬಸವಾಪುರದಲ್ಲಿಅಂಗನವಾಡಿ ಸಹಾಯಕಿಯೊಬ್ಬರು ಮಗುವಿಗೆ ಬರೆ ಹಾಕಿದ ಘಟನೆ ಮಾಸುವ ಮುನ್ನವೇ, ಹೋಂ ವರ್ಕ್ ಮಾಡಿಲ್ಲ ಎಂದು ಶಾಲಾ ಶಿಕ್ಷಕಿಯೊಬ್ಬರು ಮಗುವಿನ ಕೈಗೆ ಗಾಯವಾಗುವಂತೆ ಹೊಡೆದ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಎನ್.ಆರ್.ಮೊಹಲ್ಲದ ಸೆಂಟ್ ಆನ್ಸ್ ಶಾಲೆಯ 3ನೇ ತರಗತಿ ವಿದ್ಯಾರ್ಥಿನಿ ಮೊಮಿನಾ ಖಾನಂ ಎಂಬಾಕೆಗೆ ಶಾಲಾ ಶಿಕ್ಷಕಿ ಜವೀರಿಯಾ ನೀಡಿದ್ದ ಹೊಂವರ್ಕ್ ಮಾಡದ ಕಾರಣ ವಿದ್ಯಾರ್ಥಿಗೆ ಶಿಕ್ಷೆ ನೀಡುವ ಭರದಲ್ಲಿ ಈ ಹಲ್ಲೆ ನಡೆಸಲಾಗಿದೆ. ಮಂಗಳವಾರ ಈ ಘಟನೆ ನಡೆದಿದ್ದು ಶಾಲೆಯಿಂದ ಬಾಲಕಿ ಸಂಜೆ ಮನೆಗೆ ಬಂದ ಕೂಡಲೇ ಪೋಷಕರಿಗೆ ವಿಷಯ ತಿಳಿಸಿದ್ದಾಳೆ.

Mysuru: A teacher has beaten a girl mercilessly for not preparing homeworks.

ಕೈ ಯಲ್ಲಿ ರಕ್ತ ಬರುವ ರೀತಿಯಲ್ಲಿ ಶಿಕ್ಷಕಿ ಥಳಿಸಿರುವ ಕಾರಣ ಗಾಯಗೊಂಡ ವಿದ್ಯಾರ್ಥಿನಿ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಥಳಿತವನ್ನು ಪ್ರಶ್ನಿಸಿದ್ದ ಪೋಷಕರಿಗೆ ನಿಮ್ಮ ಮಗಳೇ ಬಿದ್ದಿದ್ದು ಎಂಬು ಸಬೂಬು ನೀಡಿದ್ದಾರೆ. ಹೀಗಾಗಿ ಬಾಲಕಿ ತಂದೆ ಅಸ್ಗರ್ ಎನ್ ಆರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A teacher has beaten a girl mercilessly for not preparing homeworks. The incident took place in Mysuru. The girl's parents have given complaint to the police.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ