ಮೈಸೂರಿನಲ್ಲಿ ಗಿನ್ನಿಸ್ ದಾಖಲೆಗಾಗಿ ಯೋಗ: ಕುಸಿದು ಬಿದ್ದ 10 ಮಕ್ಕಳು

Posted By:
Subscribe to Oneindia Kannada

ಮೈಸೂರು, ಜೂನ್ 19: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನಲೆಯಲ್ಲಿ ಮೈಸೂರಿನಲ್ಲಿಂದು ವಿಶ್ವದಾಖಲೆಯ ಲಾಂಗೆಸ್ಟ್ ಚೈನ್ ಲಿಂಕ್ ಯೋಗ ಪ್ರದರ್ಶನ ನಡೆಯಿತು. ಗಿನ್ನಿಸ್ ದಾಖಲೆಗಾಗಿ ಅತೀ ಉದ್ದದ ಯೋಗ ಸರಪಳಿ ಪ್ರಯತ್ನ ಆರಂಭಕ್ಕೆ ಬೆಳಿಗ್ಗೆಯಿಂದಲೇ ಶಾಲಾ‌ ವಿದ್ಯಾರ್ಥಿಗಳು ಆಗಮಿಸಿದ್ದರು. ಕಾರ್ಯಕ್ರಮ‌ ತಡವಾದ ಹಿನ್ನೆಲೆಯಲ್ಲಿ ಸುಸ್ತಾದ 10 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕುಸಿದುಬಿದ್ದರು. ತಕ್ಷಣ ಅವರಿಗೆ ಚಿಕಿತ್ಸೆ ನೀಡಲಾಗಿದ್ದು, ಮತ್ತೆ ಯೋಗ ಚೈನ್ ನಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದರು.

ಮೈಸೂರಿನಲ್ಲಿ 20 ಸಾವಿರ ಜನರಿಂದ ಯೋಗಾಭ್ಯಾಸ

Mysuru students fainted while practicing yoga for guinness record

ಕಳೆದ 2014 ರಲ್ಲಿ ತಮಿಳುನಾಡಿನ ಪೆರಂಬೂರಿನ ವಿದ್ಯಾಶಾಲಾದ 3800 ವಿದ್ಯಾರ್ಥಿಗಳಿಂದ ಚೈನ್ ಲಿಂಕ್ ಯೋಗದ ವಿಶ್ವದಾಖಲೆ ನಿರ್ಮಿಸಿದ್ದರು. ಆ ದಾಖಲೆಯನ್ನು ಅಳಿಸಿ ಹಾಕಲು ಮೈಸೂರು ನಗರದ ವಿದ್ಯಾರ್ಥಿಗಳು ಯೋಗ ಪ್ರದರ್ಶನ ನೀಡುತ್ತಿದ್ದಾರೆ. ವೀರ ಭದ್ರಾಸನ ಪ್ರಕಾರ 1 ಹಾಗೂ 2, ತ್ರಿಕೋನಾಸನ, ಪ್ರೇರಿತಪಡೋತ್ತಾಸನಗಳನ್ನು ಯೋಗ ಪಟುಗಳು ಪ್ರದರ್ಶಿಸುತ್ತಿದ್ದಾರೆ. 3 ನಿಮಿಷಗಳಲ್ಲಿ ಯೋಗ ಪ್ರದರ್ಶಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಲಿದ್ದಾರೆ. ಅರಮನೆ ಆವರಣದ ತುಂಬೆಲ್ಲ ಮಕ್ಕಳ ಯೋಗಾಭ್ಯಾಸದ ಕಲರವ ಕೇಳಿ ಬಂತು.

ಅಂತಾರಾಷ್ಟ್ರೀಯ ಯೋಗದಿನದಂದು ಗಿನ್ನಿಸ್ ಪಟ್ಟಿ ಸೇರಲಿದೆಯೇ ಮೈಸೂರು?

Mysuru students fainted while practicing yoga for guinness record

ಗಿನ್ನಿಸ್ ದಾಖಲೆಗಾಗಿಯೇ ಈ ಲಾಂಗೆಸ್ಟ್ ಯೋಗ ಚೈನ್:
ಲಾಂಗೆಸ್ಟ್ ಯೋಗ ಚೈನ್ ಲಿಂಕ್ ಗಿನ್ನಿಸ್ ದಾಖಲೆಗಾಗಿ ಮಾಡಿದ ಯೋಗ ಪ್ರದರ್ಶನದಲ್ಲಿ 8 ಸಾವಿರ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ಮೈಸೂರಿನ ವಿವಿಧೆಡೆಗಳಲ್ಲಿರುವ 20ಕ್ಕೂ ಹೆಚ್ಚು ಶಾಲೆಯ ವಿದ್ಯಾರ್ಥಿಗಳು ಯೋಗ ಪ್ರದರ್ಶನದಲ್ಲಿ ಪಾಲ್ಗೊಂಡು ಪ್ರದರ್ಶನ ನೀಡಿದ್ದಾರೆ ಎನ್ನುತ್ತಾರೆ ಮೈಸೂರು ಜಿಲ್ಲಾಧಿಕಾರಿ ರಂದೀಪ್. ಯೋಗ ಪ್ರದರ್ಶನಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಗಿನ್ನಿಸ್ ಸಂಸ್ಥೆಗೆ ನೀಡಲಾಗುವುದು. ಇಂದು ನಡೆದ ಚೈನ್ ಲಿಂಕ್ ಯೋಗ ಪ್ರದರ್ಶನ ಗಿನ್ನೆಸ್ ದಾಖಲೆಗೆ ಸೇರ್ಪಡೆಯಾಗುವ ವಿಶ್ವಾಸವಿದೆ. ಈ ಬಗ್ಗೆ ಮುಂದಿನ ಹದಿನೈದು ದಿನಗಳಲ್ಲಿ ಸಂಪೂರ್ಣ ವಿವರ ಲಭ್ಯವಾಗಲಿದೆ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The Mysuru district administration has decided to create a Guinness world record in longest yoga chain on International Yoga Day, June 21. A rehearsal was held as a prelude to the Yoga Day at the Mysuru Palace premises on June 19th. Few students feel fainted while practicing yoga.
Please Wait while comments are loading...