ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಲ್ಲಿ ಹಾಫ್ ಮ್ಯಾರಥಾನ್, ಬನ್ನಿ ಭಾಗವಹಿಸಿ

By Vanitha
|
Google Oneindia Kannada News

ಮೈಸೂರು, ಸೆ, 01 : ನಗರದ ಕ್ರೀಡಾ ನಿರ್ವಹಣ ಸಂಸ್ಥೆಯು ಐದನೇ ವರ್ಷದ ಮೈಸೂರು ಸಂಭ್ರಮದ ಅಂಗವಾಗಿ 'ಲೈಫ್ ಇಸ್ ಕಾಲಿಂಗ್' ವತಿಯಿಂದ ಹಾಫ್ ಮ್ಯಾರಥಾನ್ ಮತ್ತು ಓಟದ ಸ್ಪರ್ಧೆಯನ್ನು ಹಮ್ಮಿಕೊಂಡಿದೆ.

ಸ್ಪರ್ಧೆಯು ಸೆಪ್ಟೆಂಬರ್ 6ರ ಭಾನುವಾರದಂದು, ನಗರದ ಅಂಬಾವಿಲಾಸ ಅರಮನೆಯ ಬಲರಾಮ ದ್ವಾರದ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಬಳಿ ಬೆಳಿಗ್ಗೆ 6 ಗಂಟೆಗೆ ಆರಂಭವಾಗಲಿದೆ.[26 ಮೈಲಿ ಓಡಲು 92 ವರ್ಷದ ಅಜ್ಜಿಗೆ 7 ಗಂಟೆ ಸಾಕು!]

Mysuru sports management institution organizes half marathon and running race

ಮಕ್ಕಳು, ವೃದ್ದರು ಸೇರಿಂದತೆ ಎಲ್ಲರಿಗೂ ಸ್ಪರ್ಧೆಯಲ್ಲಿ ಭಾಗವಹಿಸಲು ಮುಕ್ತವಾಗಿ ಆಹ್ವಾನ ನೀಡಲಾಗಿದ್ದು, 10 ವರ್ಷ ಮೇಲ್ಪಟ್ಟವರಿಗೆ 5 ಕಿ.ಮೀ ನಡಿಗೆ ಏರ್ಪಡಿಸಿದ್ದರೆ,16 ವರ್ಷ ಮೇಲ್ಪಟ್ಟವರು ಹಾಫ್ ಮ್ಯಾರಥಾನ್ ನಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ.

ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಸ್ಪರ್ಧೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿದ್ದು, ಸ್ಪರ್ಧೆಯು 16 ರಿಂದ 45, 45 ರಿಂದ 60, 60 ವರ್ಷ ಮೇಲ್ಪಟ್ಟವರು ಎಂದು ಮೂರು ವಿಭಾಗದಲ್ಲಿ ಪ್ರಶಸ್ತಿ ವಿತರಿಸಲಾಗುತ್ತದೆ. ಅಲ್ಲದೇ ಓಟದಲ್ಲಿ ಪಾಲ್ಗೊಂಡ ಎಲ್ಲರಿಗೂ ಪದಕ ನೀಡಲಾಗುವುದು ಎಂದು ಕ್ರೀಡಾ ನಿರ್ವಹಣ ಸಂಸ್ಥೆಯ ಮುಖ್ಯಸ್ಥ ಮಿತ್ರ ಅವರು ಮಾಹಿತಿ ನೀಡಿದ್ದಾರೆ.

ಹಾಫ್ ಮ್ಯಾರಥಾನ್ ನಲ್ಲಿ ಭಾಗವಹಿಸುವ ಆಸಕ್ತರು ಹೆಸರು ನೋಂದಾಯಿಸಲು www.lifeiscalling-sports.com ಸಂಪರ್ಕಿಸಬಹುದಾಗಿದೆ. ಮೈಸೂರಿನ ನಾಗರಿಕರಲ್ಲಿ ಆರೋಗ್ಯಕರ ಜೀವನ ಶೈಲಿ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಈ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಸುಮಾರು 4,000 ಸ್ಪರ್ಧಾಳುಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದರು.

English summary
Mysuru sports management organizes half marathon and running race competation on September 06, Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X