ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶ್ವ ಯೋಗ ದಿನ: ರಾಜಪಥ್ ಹಿಂದಿಕ್ಕಿ ಗಿನ್ನೆಸ್ ದಾಖಲೆಗೆ ಮೈಸೂರು ಸಜ್ಜು

By ಅನುಷಾ ರವಿ
|
Google Oneindia Kannada News

ಮೈಸೂರು, ಜೂನ್ 10: ಜೂನ್ 21ರಂದು ವಿಶ್ವ ಯೋಗ ದಿನದ ಆಚರಣೆಗೆ ಇಡೀ ವಿಶ್ವವೇ ಸಿದ್ದವಾಗುತ್ತಿದೆ. ಆದರೆ ಈ ಬಾರಿ ಮೈಸೂರಿನಲ್ಲಿ ಯೋಗ ದಿನ ಎಂದಿಗಿಂತ ವಿಶೇಷ. ಕಾರಣ ದೆಹಲಿಯ ರಾಜಪಥ್ ನಲ್ಲಿ ಸ್ಥಾಪನೆಯಾಗಿದ್ದ ಗಿನ್ನೆಸ್ ದಾಖಲೆಯನ್ನು ಮುರಿದು ಹೊಸ ದಾಖಲೆ ಬರೆಯಲು ಮೈಸೂರು ಸಜ್ಜಾಗಿದೆ.

ಜೂನ್ 21ರಂದು ಬೃಹತ್ ಸಾಮೂಹಿಕ ಯೋಗ ದಿನದ ಆಚರಣೆಗೆ ಮುಂದಾಗಿರುವ ಸಾಂಸ್ಕೃತಿಕ ರಾಜಧಾನಿ ಮೈಸೂರು ಗಿನ್ನೆಸ್ ದಾಖಲೆ ಸ್ಥಾಪನೆಗೆ ಮುಂದಾಗಿದೆ. ಅಂದು ಒಟ್ಟು 60,000 ಸಾವಿರ ಜನರು ಏಕಕಾಲದಲ್ಲಿ ಮೈಸೂರಿನಲ್ಲಿ ಯೋಗ ಮಾಡಲಿದ್ದಾರೆ.

ಮೈಸೂರು ಅರಮನೆ ಮುಂಭಾಗದಲ್ಲಿ ಈ ಯೋಗ ಕಾರ್ಯಕ್ರಮ ನಡೆಯಲಿದೆ. ಇದಕ್ಕಾಗಿ ಕರ್ನಾಟಕ ಸರಕಾರ ಹೊಸದೊಂದು ವೆಬ್ಸೈಟನ್ನೇ ಆರಂಭಿಸಿದೆ. ಮಾತ್ರವಲ್ಲ ಸಾರ್ವಜನಿಕರು ತಾವಾಗಿಯೇ ಇಲ್ಲಿ ನೋಂದಣಿ ಮಾಡಿಕೊಂಡು ಯೋಗದಲ್ಲಿ ಪಾಲ್ಗೊಳ್ಳಿ ಎಂದು ಸರಕಾರ ಕೇಳಿಕೊಂಡಿದೆ.

Mysuru set to beat Rajpath, to attempt Guinness record on International Yoga day

ಆಸಕ್ತರು http://yogadaymysuru.com ವೆಬ್ಸೈಟಿಗೆ ಲಾಗ್ ಇನ್ ಆಗಿ ನೋಂದಣಿ ಮಾಡಿಕೊಳ್ಳಬಹದು. ಜೂನ್ 21 ರಂದು ಬೆಳಿಗ್ಗೆ 6 ರಿಂದ 8 ಗಂಟೆಯವರೆಗೆ ಅರಮನೆ ಮುಂಭಾಗದ ಖಾಲಿ ಜಾಗದಲ್ಲಿ ಯೋಗ ನಡೆಯಲಿದೆ.

2015ರಲ್ಲಿ ದೆಹಲಿಯ ರಾಜಪಥ್ ನಲ್ಲಿ ನಡೆದಿದ್ದ ಯೋಗ ದಿನಾಚರಣೆಯಲ್ಲಿ 35,985 ಜನರು ಪಾಲ್ಗೊಂಡಿದ್ದರು. ಈ ಮೂಲಕ ರಾಜಪಥ್ ನಲ್ಲಿ ಗಿನ್ನೆಸ್ ದಾಖಲೆ ನಿರ್ಮಾಣವಾಗಿತ್ತು. ಇದೀಗ ಆ ದಾಖಲೆಯನ್ನು ಮುರಿಯಲು ಮೈಸೂರು ಹೊರಟಿದೆ. ಅದಕ್ಕಾಗಿ 60 ಸಾವಿರ ಜನರು ಏಕಕಾಲದಲ್ಲಿ ಯೋಗ ಮಾಡಲು ಯೋಜನೆ ಹಾಕಿಕೊಂಡಿದೆ.

ಹಾಗಂಥ ಇನ್ನೆಸ್ ದಾಖಲೆ ಮಾಡುವುದು ಮೈಸೂರಿಗೆ ಸುಲಭವೂ ಅಲ್ಲ. ಕಾರಣ ಉತ್ತರ ಪ್ರದೇಶ ಕೂಡಾ ರೇಸ್ ನಲ್ಲಿದ್ದು, ರಾಮಾಬಾಯಿ ಅಂಬೇಡ್ಕರ್ ಮೈದಾನದಲ್ಲಿ 55,000 ಜನ ಏಕಕಾಲದಲ್ಲಿ ಯೋಗ ಮಾಡುವ ಯೋಜನೆಯನ್ನು ಉತ್ತರ ಪ್ರದೇಶ ಸರಕಾರ ಹಾಕಿಕೊಂಡಿದೆ. ಅಲ್ಲಿನ ಯೋಗ ದಿನಾಚರಣೆಯಲ್ಲಿ ಸ್ವತಃ ಪ್ರಧಾನಮಮಂತ್ರಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಹಾಗಾಗಿ ಉತ್ತರ ಪ್ರದೇಶ ದಾಖಲೆಯನ್ನು ಮೀರಬೇಕಾದರೆ ಮೈಸೂರು ಯೋಗ ದಿನಾಚರಣೆಯಲ್ಲಿ 60,000 ಜನರು ಪಾಲ್ಗೊಳ್ಳಬೇಕಾಗಿದೆ.

ಉತ್ತರ ಪ್ರದೇಶದ ಸವಾಲಿನ ಮಧ್ಯೆ ಮೈಸೂರು ಜಿಲ್ಲಾಡಳಿತ ಗಿನ್ನೆಸ್ ರೆಕಾರ್ಡ್ ಮಾಡುವ ಸಿದ್ಧತೆಯಲ್ಲಿದೆ. ಶನಿವಾರದ ವೇಳೆಗೆ 6347 ಜನರು ಯೋಗ ದಿನಕ್ಕೆ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇನ್ನೂ 10 ದಿನಗಳು ಬಾಕಿ ಉಳಿದಿದ್ದು ಯೋಗ ಮಾಡಲು ಎಷ್ಟು ಜನ ಹರಿದು ಬರಲಿದ್ದಾರೆ ನೋಡಬೇಕು. ಇದರ ಮೇಲೆ ಮೈಸೂರು ಯೋಗ ದಿನದ ಗಿನ್ನೆಸ್ ದಾಖಲೆಯ ಭವಿಷ್ಯ ನಿರ್ಧಾರವಾಗಲಿದೆ.

English summary
As the world gears up to celebrate Yoga on June 21, Mysuru will attempt to create a Guinness record. The cultural capital of Karnataka will host a mega mass Yoga event that is expected to see more than 60,000 participants.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X