ಗಂಡು ಮಗುವಿಗೆ ಜನ್ಮವಿತ್ತ ಮೈಸೂರು ಯುವರಾಣಿ ತ್ರಿಷಿಕಾ ಕುಮಾರಿ

Posted By:
Subscribe to Oneindia Kannada
   ಗಂಡು ಮಗುವಿಗೆ ಜನ್ಮವಿತ್ತ ಮೈಸೂರಿನ ಮಹಾರಾಣಿ ತ್ರಿಶಿಕಾ ಕುಮಾರಿ | Oneindia Kannada

   ಬೆಂಗಳೂರು, ಡಿಸೆಂಬರ್ 6: ಮೈಸೂರು ಯದುವಂಶಕ್ಕೆ ಹೊಸ ಅತಿಥಿಯ ಆಗಮನವಾಗಿದೆ. ಮೈಸೂರಿನ ಮಹಾರಾಣಿ ತ್ರಿಷಿಕಾ ಕುಮಾರಿ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಬೆಂಗಳೂರಿನ ಇಂದಿರಾ ನಗರದ ಖಾಸಗಿ ಆಸ್ಪತ್ರೆಯಲ್ಲಿ ತ್ರಿಷಿಕಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆ.

   ಮಗು ಹುಟ್ಟಿದ ಖುಷಿಯಲ್ಲಿ ಅಂಬಾವಿಲಾಸ ಅರಮನೆಯಲ್ಲಿ ಸಂಭ್ರಮ ಮನೆಮಾಡಿದೆ. ಇನ್ನು ಯದುವೀರ್ ಕೃಷ್ಣದತ್ತ ಒಡೆಯರ್ ಅವರು ತಂದೆಯಾದ ಖುಷಿಯಲ್ಲಿದ್ದಾರೆ.

   Mysuru royal family blessed with baby boy

   ತ್ರಿಷಿಕಾ ಕುಮಾರಿ ಅವರಿಗೆ ಇಂದು ಹೆರಿಗೆ ನೋವು ಕಾಣಿಸಿಕೊಂಡಿದ್ದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಗರ್ಭಿಣಿ ಆದಾಗಿನಿಂದಲೂ ಬೆಂಗಳೂರಿನ ಇಂದಿರಾನಗರದಲ್ಲಿರುವ ತಾಯಿ ಮನೆಯಲ್ಲಿ ಅವರು ತಾಯಿಯ ಆರೈಕೆಯಲ್ಲಿದ್ದರು.

   ಗುಡ್ ನ್ಯೂಸ್: ಮೈಸೂರು ಯದುವಂಶದ ಕುಡಿ ಆಗಮನಕ್ಕೆ ಕ್ಷಣಗಣನೆ

   2013ರಲ್ಲಿ ಶ್ರೀಕಂಠದತ್ತ ಒಡೆಯರ ಮರಣದ ನಂತರ 2015 ರಲ್ಲಿ ಮಹಾರಾಣಿ ಪ್ರಮೋದಾ ದೇವಿ ಅವರು ತಮಗೆ ಮಕ್ಕಳಿಲ್ಲದ ಕಾರಣ ಯದುವೀರ್ ಅವರನ್ನು ಮೈಸೂರು ರಾಜ ವಂಶಕ್ಕೆ ದತ್ತು ತೆಗೆದುಕೊಂಡಿದ್ದರು. 2016ರಲ್ಲಿ ರಾಜಸ್ಥಾನದ ದುರ್ಗಪುರದ ರಾಜವಂಶಸ್ಥರ ಕುಟುಂಬಕ್ಕೆ ಸೇರಿದ ತ್ರಿಷಿಕಾ ಕುಮಾರಿ ಅವರನ್ನು ವರಿಸಿದ್ದರು.

   Mysuru royal family blessed with baby boy

   ನೂರಾರು ವರ್ಷಗಳಿಂದ ಮೂಲ ವಂಶಸ್ಥರಿಗೆ ಮಕ್ಕಳಾಗಿರಲಿಲ್ಲ. ಸಾರ್ವಜನಿಕರು ಇದನ್ನು ಅಲಮೇಲಮ್ಮನ ಶಾಪ ಎಂದು ಭಾವಿಸಿದ್ದರು. ಇದೇ ಮೊದಲ ಬಾರಿಗೆ ಯದುವೀರ್ ಪತ್ನಿ ಮಗುವಿಗೆ ಜನ್ಮ ನೀಡಿದ್ದು ಅಲಮೇಲಮ್ಮನ ಶಾಪ ವಿಮೋಚನೆಯಾದಂತಾಗಿದೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Scion of the Mysuru royal family Yaduveer's wife Trishika Kumari blessed with baby boy in a private hospital in Bengaluru on December 6.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ