ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಸ್ಪಾ ಸೆಂಟರ್‌ನಲ್ಲಿ ವೇಶ್ಯಾವಾಟಿಕೆ: ನಾಲ್ವರ ಬಂಧನ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜುಲೈ 19: ಹೊರಗಿನ ಜನಕ್ಕೆ ಮಸಾಜ್ ಸೆಂಟರ್ ನಡೆಸುವಂತೆ ಬಿಂಬಿಸುತ್ತಾ ಒಳಗೊಳಗೆ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ನಾಲ್ವರನ್ನು ನಜರಾಬಾದ್ ಪೊಲೀಸರು ಬಂಧಿಸಿ, ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ.

ಬನ್ನಿಮಂಟಪ ಎ.ಬಡಾವಣೆ ನಿವಾಸಿ ನಾಗರಾಜು (49), ಕೇರಳದ ಅನ್ನಪರಂಬನಾಥ್‌ನ ರೋಣಿ, ಸುಲ್ತಾನ್ ಬತ್ತೇರಿಯ ಸಜ್ಜೀವನ್, ಇರಟ್ಟಿಯ ಮೆಲ್ಬಿನ್ ಬಂಧಿತರು.

ನಗರದ ನಜರ್‌ಬಾದ್ ಪೊಲೀಸ್ ಠಾಣೆಯ ವ್ಯಾಪ್ತಿಗೊಳಪಡುವ ಬಿ.ಎನ್.ರಸ್ತೆಯ ರೂಪ ಹೋಟೆಲ್ ಪಕ್ಕದಲ್ಲಿ ನಾಗರಾಜ್ ಎಂಬಾತ ಎಎನ್‌ಎಸ್ ಸ್ಪಾ ಸೆಂಟರ್ ತೆರೆದು ಅಲ್ಲಿ ಮಸಾಜ್ ಮಾಡುವ ನೆಪದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದನು ಎನ್ನಲಾಗಿದೆ.

ಪುರುಷರಿಗೆ ಮಹಿಳೆಯರಿಂದಲೇ ಮಸಾಜ್ ಮಾಡಿಸುವ ಮೂಲಕ ಉದ್ರೇಕಿಸಿ ವೇಶ್ಯಾವಾಟಿಕೆ ದಂಧೆಯನ್ನು ನಡೆಸಲಾಗುತ್ತಿತ್ತು. ಆನ್‌ಲೈನ್ ಮೂಲಕವೂ ಗಿರಾಕಿಗಳನ್ನು ಕರೆತರಲಾಗುತ್ತಿತ್ತು.

Mysuru: Prostitution racket busted, 4 arrested

ಯುವತಿಯರೇ ಮಸಾಜ್ ಮಾಡುತ್ತಿದ್ದರಿಂದ ಗಿರಾಕಿಗಳ ಸಂಖ್ಯೆಯೂ ಹೆಚ್ಚಾಗಿತ್ತು. ಮೇಲ್ಮೋಟಕ್ಕೆ ಮಸಾಜ್ ಸೆಂಟರ್‌ನಂತೆ ಕಂಡು ಬಂದರೂ ಒಳಗೆ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದದ್ದು ಹೆಚ್ಚು ದಿನ ಗುಟ್ಟಾಗಿ ಉಳಿಯಲಿಲ್ಲ.

ಈ ಬಗ್ಗೆ ಪೊಲೀಸರಿಗೂ ದೂರು ಹೋಗಿದ್ದರಿಂದ ಮೈಸೂರು ನಗರದ ಉಪ ಪೊಲೀಸ್ ಆಯುಕ್ತ ಎನ್.ರುದ್ರಮುನಿ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಎಸಿಪಿ ಸಿ. ಗೋಪಾಲ್‌ರವರ ನೇತೃತ್ವದಲ್ಲಿ ಸಿಸಿಬಿ ಇನ್ಸ್‌ಪೆಕ್ಟರ್ ವೈ.ಪಿ.ಚಂದ್ರಕಲಾ, ಉಪ ನಿರೀಕ್ಷಕ ಹೆಚ್. ರಮೇಶ, ಹಾಗೂ ನಜರ್‌ಬಾದ್ ಠಾಣಾ ಇನ್ಸ್‌ಪೆಕ್ಟರ್ ಎಂ.ಎಲ್. ಶೇಖರ್ ಮತ್ತು ಸಿಸಿಬಿ ಸಿಬ್ಬಂದಿ ರವಿ, ಎನ್.ಜೀವನ್, ಬಿ. ರಾಧೇಶ, ಉಮೇಶ, ಆರ್. ನಾಗುಬಾಯಿ, ಮಂಜುಳ ಮತ್ತು ನಜರ್‌ಬಾದ್ ಠಾಣೆಯ ಸಿಬ್ಬಂದಿಯನ್ನೊಳಗೊಂಡ ತಂಡವನ್ನು ರಚಿಸಿ ಎಎನ್‌ಎಸ್ ಸ್ಪಾ ಸೆಂಟರ್ ಮೇಲೆ ದಾಳಿ ಮಾಡಲಾಗಿತ್ತು.

ಈ ಸಂದರ್ಭ ವೇಶ್ಯಾವಾಟಿಕೆ ನಡೆಸಿತ್ತಿದ್ದದ್ದು ಕಂಡು ಬಂದಿದ್ದು ನಾಲ್ವರು ಆರೋಪಿಗಳನ್ನು ಬಂಽಸಿ, ಇಬ್ಬರು ಯುವತಿಯರನ್ನು ರಕ್ಷಿಸಲಾಗಿದೆ. ಬಂಧಿತರಿಂದ ವೇಶ್ಯಾವಾಟಿಕೆಗೆ ಬಳಕೆಯಾಗಿದ್ದ 5 ಮೊಬೈಲ್ ಫೋನ್ ಹಾಗೂ 13 ,ಸಾವಿರ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
The Nazarabad police in Mysuru have busted a prostitution racket, and arrested four people for allegedly forcing two women working in a spa into prostitution.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X