ಮೈಸೂರು ಮಹಾನಗರ ಆಸ್ತಿ ತೆರಿಗೆ ಪಾವತಿದಾರರ ಗಮನಕ್ಕೆ

Subscribe to Oneindia Kannada

ಮೈಸೂರು, ಏಪ್ರಿಲ್, 04: ಮೈಸೂರು ಮಹಾನಗರ ಪಾಲಿಕೆ ಸಹ ಆಸ್ತಿ ತೆರಿಗೆ ವಿವರ ಸಲ್ಲಿಕೆಗೆ ಸಂಬಂಧಿಸಿ ನಿಯಮಾವಳಿಗಳನ್ನು ಹೊರಡಿಸಿದೆ. 1976ರ ಕರ್ನಾಟಕ ಪೌರ ನಿಗಮಗಳ ಕಾಯ್ದೆ ಪ್ರಕರಣ 108ರ ಪ್ರಕಾರ ಮೈಸೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಪ್ರತಿಯೊಂದು ಕಟ್ಟಡ ಮತ್ತು ನಿವೇಶನಗಳಿಗೆ ಮಾಲೀಕರು ಆಸ್ತಿ ತೆರಿಗೆ ಪಾವತಿ ಮಾಡಬೇಕಾಗುತ್ತದೆ.

ಏಪ್ರಿಲ್ ತಿಂಗಳ ಆರಂಭದಿಂದ ಆಸ್ತಿ ತೆರಿಗೆ ಪಾವತಿ ಕೆಲಸ ಆರಂಭವಾಗಲಿದ್ದು ಮಹಾನಗರ ಪಾಲಿಕೆ ಕೆಳಕಂಡ ನಿಯಮಾವಳಿಗಳನ್ನು ಹೊರಡಿಸಿದೆ. ಸ್ವಚ್ಛ ನಗರಿಯ ನಿವೇಶನ ಮಾಲೀಕರು ಕೆಳಕಂಡ ನಿಯಮಾವಳಿಗಳನ್ನು ಗಮನವಿಟ್ಟು ಓದಬೇಕಾಗುತ್ತದೆ. [ಬಿಬಿಎಂಪಿ ಆಸ್ತಿ ತೆರಿಗೆ ಸಲ್ಲಿಕೆ ಪ್ರಕ್ರಿಯೆ ಹೇಗೆ?]

mysuru

* 2016-17 ನೇ ಸಾಲಿಗೆ ಪ್ರತಿಯೊಬ್ಬ ಕಟ್ಟಡ/ನಿವೇಶನ ಮಾಲೀಕರು ಮೈಸೂರು ನಗರ ಪಾಲಿಕೆಗೆ ಆಸ್ತಿ ತೆರಿಗೆ ಪಾವತಿಸಬೇಕು

* ನಗರ ಪಾಲಿಕೆ ಕಾಯ್ದೆಯ ಪ್ರಕರಣದ ಅನ್ವಯ ಏಪ್ರಿಲ್ ತಿಂಗಳ ಒಳಗೆ ಆಸ್ತಿ ತೆರಿಗೆ ಪಾವತಿಸುವವರಿಗೆ ಒಟ್ಟು ಆಸ್ತಿ ತೆರಿಗೆ ಬಾಬ್ತಿನಲ್ಲಿ ಶೇ.5 ರಷ್ಟು ರಿಯಾಯಿತಿ ಪಡೆಯಲು ಅವಕಾಶವಿದೆ.[ಮೈಸೂರಲ್ಲಿ ವಾಹನ ನಿಲುಗಡೆ ಶುಲ್ಕ ದಂಧೆಗೆ ಬಿತ್ತು ಕಡಿವಾಣ]

* ಜೂನ್ ತಿಂಗಳ ವರೆಗೆ ಆಸ್ತಿ ತೆರಿಗೆ ಪಾವತಿಸುವವರಿಗೆ ಯಾವುದೇ ರೀತಿ ಬಡ್ಡಿ ವಿಧಿಸಲಾಗುವುದಿಲ್ಲ.

* 2016 ರ ಜುಲೈ 1ನೇ ತಾರೀಕಿನಿಂದ ಆಸ್ತಿ ತೆರಿಗೆ ಪಾವತಿಸುವವರಿಗೆ ಪ್ರತಿ ತಿಂಗಳು ಶೇ. 2 ರಷ್ಟು ಬಡ್ಡಿ ವಿಧಿಸಲಾಗುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
This is the time when property owners rush to pay their property tax. Now, the Mysuru Mahanagara Palike has simplified the procedure of paying property tax. Individuals must pay Property Tax from 1st April of the Assessment Year. Delayed payment of Property Tax results in interest 2% per month or 24% per annum. Here is the instructions of Mysuru property tax.
Please Wait while comments are loading...