ಕುತೂಹಲ ಕೆರಳಿಸಿದ RSS ಕಚೇರಿಗೆ ಪ್ರೇಮಕುಮಾರಿ ದಿಢೀರ್ ಭೇಟಿ

Posted By: ಯಶಸ್ವಿನಿ ಎಂ.ಕೆ
Subscribe to Oneindia Kannada

ಮೈಸೂರು, ಏಪ್ರಿಲ್ 10 : ಕೊನೆಗೂ ಮಾಜಿ ಸಚಿವ ಹಾಗೂ ಮೈಸೂರು ಭಾಗದ ಬಿಜೆಪಿ ನಾಯಕ ರಾಮದಾಸ್ ರಾಜಕೀಯ ಭವಿಷ್ಯಕ್ಕೆ ಪ್ರೇಮಕುಮಾರಿ ಮಾರಕವಾಗುವುದು ಮತ್ತೊಮ್ಮೆ ಸಾಬೀತಾಗಿದೆ.

ರಕ್ಷಣೆಗಾಗಿ ಸಿದ್ದರಾಮಯ್ಯಗೆ ಮನವಿ ಮಾಡಿದ ಪ್ರೇಮಕುಮಾರಿ

ಹೌದು, ಮೈಸೂರು ಬಿಜೆಪಿಯಲ್ಲಿ ಭಿನ್ನಮತ ಸ್ಪೋಟವಾಗಿದ್ದು ಕಳಂಕಿತ ಪಟ್ಟಿಯಲ್ಲಿರುವ ರಾಮದಾಸ್ ಗೆ ಟಿಕೆಟ್ ಬೇಡವೆಂದು ಬಿಜೆಪಿ ನಾಯಕರು ಪಟ್ಟು ಹಿಡಿದಿದ್ದಾರೆ. ಮೈಸೂರಿನ ಕೃಷ್ಣರಾಜ ಕ್ಷೇತ್ರದ ಟಿಕೆಟ್ ಹಂಚಿಕೆ ಬಗ್ಗೆ ಕರೆಯಲಾಗಿದ್ದ ಸಭೆಯಲ್ಲಿ, ರಾಮದಾಸ್ ವಿರುದ್ಧ ಸ್ಥಳೀಯರು ಹಾಗೂ ಮುಖಂಡರು ನೋವು ತೋಡಿಕೊಂಡಿದ್ದು ರಾಮದಾಸ್ ಬದಲು ಬೇರೆಯವರಿಗೆ ಟಿಕೆಟ್ ಕೊಟ್ಟರೆ ಗೆಲ್ಲಿಸಿ ಕೊಡುವುದಾಗಿ ಮುಖಂಡರು ತಿಳಿಸಿದ್ದಾರೆ ಎನ್ನಲಾಗಿದೆ. ರಾಮದಾಸ್ ವಿರುದ್ಧ ಬಿಜೆಪಿ ಮುಖಂಡರಾದ ಸೋಮಸುಂದರ್ ಹಾಗೂ ಗೋಕುಲ್ ಗೋವರ್ಧನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

ಬಿಜೆಪಿ ಉಸ್ತುವಾರಿ ಮುರಳೀಧರರಾವ್ ರಾಜ್ಯಾಧ್ಯಕ್ಷ ಬಿಎಸ್ವೈ ಇವರ ಎದುರು ಹಲವರು ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ರಾಮದಾಸ್ ಗೆ ಟಿಕೆಟ್ ನೀಡಿದರೆ ಪಕ್ಷ ಸೋಲುತ್ತದೆ. ರಾಮದಾಸ್ ಭ್ರಷ್ಟಾಚಾರದ ಬೇಗುದಿಯಲ್ಲಿ ಸಿಲುಕಿದ್ದು ಇದರಿಂದ ಪಕ್ಷಕ್ಕೆ ಈಗಾಗಲೇ ಸಾಕಷ್ಟು ಮುಜುಗರವಾಗಿದೆ. ಅಲ್ಲದೆ ರಾಮದಾಸ್ ಚುನಾವಣೆಗೆ ನಿಂತರೆ ತಾನು ನಿಲ್ಲುವುದಾಗಿ ಪ್ರೇಮಕುಮಾರಿ ಹೇಳಿದ್ದನ್ನು ಕೆಲ ಮುಖಂಡರು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಇನ್ನು ಇದೇ ಸಭೆಯಲ್ಲಿ ರಾಮದಾಸ್ ಕೂಡ ಮೌನವಾಗಿದದ್ದರೆ ಎನ್ನಲಾಗಿದೆ.

ಸುತ್ತೂರು ಮಠಕ್ಕೆ ಭೇಟಿ ನೀಡಿದ ಪ್ರೇಮಕುಮಾರಿ

ಸುತ್ತೂರು ಮಠಕ್ಕೆ ಭೇಟಿ ನೀಡಿದ ಪ್ರೇಮಕುಮಾರಿ

ಮಾಜಿ ಸಚಿವ ರಾಮದಾಸ್ ವಿರುದ್ಧ ಚುನಾವಣಾ ಅಖಾಡಕ್ಕಿಳಿದಿರುವ ಪ್ರೇಮಕುಮಾರಿ ಇಂದು ಸುತ್ತೂರು ಮಠಕ್ಕೆ ಭೇಟಿ ನೀಡಿದರು. ಪ್ರೇಮಕುಮಾರಿ ಇಂದು ಸುತ್ತೂರು ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಪ್ರೇಮ ಕುಮಾರಿ ಲಿಂಗಾಯಿತ- ವೀರಶೈವ ಧರ್ಮಕ್ಕೆ ಸೇರಿದವರಾಗಿದ್ದು, ಮೈಸೂರು ಭಾಗದ ಲಿಂಗಾಯಿತ- ವೀರಶೈವರ ಕೇಂದ್ರವಾಗಿರುವ ಸುತ್ತೂರು ಮಠಕ್ಕೆ ಭೇಟಿ ನೀಡುವ ಮೂಲಕ ಎಸ್.ಎ. ರಾಮದಾಸ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

ರಾಮದಾಸ್ ವಿರುದ್ಧ ಸ್ಪರ್ಧೆ

ರಾಮದಾಸ್ ವಿರುದ್ಧ ಸ್ಪರ್ಧೆ

ಸುತ್ತೂರು ಮಠದ ಆಶೀರ್ವಾದ ಪಡೆದವರಿಗೆ ಜಯ ತಪ್ಪಿದ್ದಲ್ಲ. ಹೀಗಾಗಿ ಬಿಜೆಪಿಯಿಂದ ರಾಮದಾಸ್ ಗೆ ಟಿಕೆಟ್ ಖಾತ್ರಿಯಾದರೆ ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ ಎನ್ನುತ್ತಿರುವ ಇವರು, ಅನ್ಯಾಯದ ವಿರುದ್ದ ಕೆ.ಆರ್. ಕ್ಷೇತ್ರದಲ್ಲೇ ಸ್ಪರ್ಧಿಸಿ ನ್ಯಾಯ ಕಂಡುಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಕೆ.ಆರ್. ಕ್ಷೇತ್ರದಲ್ಲಿ 30-35 ಸಾವಿರದಷ್ಟಿರುವ ಲಿಂಗಾಯತ ವೀರಶೈವ ಮತಗಳೇ ನಿರ್ಣಾಯಕವಾಗಿದ್ದು, ಒಂದು ವೇಳೆ ಒತ್ತಡಕ್ಕೆ ಕಟ್ಟುಬಿದ್ದು ರಾಮದಾಸ್ ಗೆ ಟಿಕೆಟ್ ನೀಡಿದರೂ ಗೆಲುವು ಸುಲಭದ ಮಾತಲ್ಲ. ಹೀಗಾಗಿ ಸುತ್ತೂರು ಮಠದ ಭೇಟಿಯಿಂದ ಸ್ಪರ್ಧೆಯ ಉತ್ಸಾಹ ಹೆಚ್ಚಿಸಿಕೊಂಡಿರುವ ಪ್ರೇಮಕುಮಾರಿ ಜಾತಿಯನ್ನು ಟ್ರಂಪ್ ಕಾರ್ಡ್ ಮಾಡಿಕೊಂಡು‌ ರಾಮದಾಸ್ ವಿರುದ್ದ ಸೆಣಸಲು ಸಜ್ಜಾಗಿದ್ದಾರೆ.

ಆರ್ ಎಸ್ ಎಸ್ ಕಚೇರಿಗೆ ಭೇಟಿ ಏಕೆ?

ಆರ್ ಎಸ್ ಎಸ್ ಕಚೇರಿಗೆ ಭೇಟಿ ಏಕೆ?

ಇನ್ನು ಕೃಷ್ಣ ರಾಜ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಪ್ರೇಮಕುಮಾರಿ ಅವರು ಮೈಸೂರಿನ ಆರ್‌ಎಸ್‌ಎಸ್‌ ಕಚೇರಿಗೆ ತೆರಳಿ ಬೆಂಬಲ ಯಾಚಿಸಿದ್ದಾರೆ. ಜೆಎಲ್ ಬಿ ರಸ್ತೆಯಲ್ಲಿರುವ ಸಂಘದ ಕಚೇರಿಗೆ ಆಗಮಿಸಿದ ಪ್ರೇಮಾ ಕುಮಾರಿ ಅವರು ಅಲ್ಲಿದ್ದ ಕಾರ್ಯಕರ್ತರ ಬಳಿ ನಾನು ನಿಮ್ಮ ಸಹೋದರಿ ನನಗೆ ಬೆಂಬಲ ನೀಡಿ ಎಂದು ಮನವಿ ಮಾಡಿದರು. ಇದರಿಂದಾಗಿ ಕಾರ್ಯಕರ್ತರು ತೀವ್ರ ಮುಜುಗರ ಅನುಭವಿಸುವಂತಾಯಿತು.

ಬೆಂಬಲ ನೀಡಿ

ಬೆಂಬಲ ನೀಡಿ

ಜೆಎಲ್ ಬಿ ರಸ್ತೆಯಲ್ಲಿರುವ ಸಂಘದ ಕಚೇರಿಗೆ ಆಗಮಿಸಿದ ಪ್ರೇಮಾ ಕುಮಾರಿ ಅವರು ಅಲ್ಲಿದ್ದ ಕಾರ್ಯಕರ್ತರ ಬಳಿ ನಾನು ನಿಮ್ಮ ಸಹೋದರಿ ನನಗೆ ಬೆಂಬಲ ನೀಡಿ ಎಂದು ಮನವಿ ಮಾಡಿದರು. ಇದರಿಂದಾಗಿ ಕಾರ್ಯಕರ್ತರು ತೀವ್ರ ಮುಜುಗರ ಅನುಭವಿಸುವಂತಾಯಿತು. ರಾಮ್‌ ದಾಸ್‌ ಅವರಿಗೆ ಟಿಕೆಟ್ ಸಿಗದಿರಲು ನಾನು ಕಾರಣಳಲ್ಲ. ಅವರಿಂದ ನನಗೆ ಅನ್ಯಾಯವಾಗಿದೆ ಎಂದು ಕಾರ್ಯಕರ್ತರ ಬಳಿ ಹೇಳಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Premkumari who was in the news some times back her alleged controversial friendship with BJP leder S A Ramdas, gave a surprise visit to suttur mutt and RSS Office.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ