ಶಶಿಗೆ ಜೈಲಾಗಿದ್ದಕ್ಕೆ ಪಟಾಕಿ ಸಿಡಿಸಿದ ಮೈಸೂರಿನ ಪ್ರಜ್ಞಾವಂತರು

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಫೆಬ್ರವರಿ 15: ತಮಿಳುನಾಡಿನಲ್ಲಿ ಶಶಿಕಲಾ ನಟರಾಜನ್ ತಪ್ಪಿತಸ್ಥಳೆಂದು ನ್ಯಾಯಾಲಯ ನೀಡಿರುವ ತೀರ್ಪನ್ನು ಸ್ವಾಗತಿಸಿ ಮೈಸೂರು ಪ್ರಜ್ಞಾವಂತ ವೇದಿಕೆಯ ಕಾರ್ಯಕರ್ತರು ಸೆಂಟ್ ಮೇರಿಸ್ ವೃತ್ತದಲ್ಲಿ ಪಟಾಕಿ ಸಿಡಿಸಿ ಸಾರ್ವಜನಿಕರಿಗೆ ಸಿಹಿ ವಿತರಿಸುವ ಮೂಲಕ ಸಂಭ್ರಮಿಸಿದರು.

ಪ್ರಜ್ಞಾವಂತ ವೇದಿಕೆಯ ಕಾರ್ಯಕರ್ತರು ಮಾತನಾಡಿ, ಭಾರತದ ಸಂವಿಧಾನದ ವಿರುದ್ಧವಾಗಿ ಮುಖ್ಯಮಂತ್ರಿಯಾಗಲು ಮುಂದಾಗಿದ್ದ ಶಶಿಕಲಾ ನಟರಾಜನ್ ಕಾನೂನನ್ನು ತನ್ನ ಕೈಗೊಂಬೆಯಾಗಿಸಿಕೊಳ್ಳಲು ಸಂಚು ರೂಪಿಸಿದ್ದರು, ಆದರೆ ಹಣದಿಂದ ಅಧಿಕಾರ ಸಿಗಲಿಲ್ಲ ಪ್ರಜಾಪ್ರಭುತ್ವದ ಹೋರಾಟಕ್ಕೆ ಇಂದು ಜಯಸಿಕ್ಕಿದೆ, ಸಂವಿಧಾನದ ಮುಂದೆ ಯಾರು ದೊಡ್ಡವರಲ್ಲ ಎಂಬುದಕ್ಕೆ ಈ ನಿದರ್ಶನವೇ ಸಾಕ್ಷಿ ಎಂದಿದ್ದಾರೆ. ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬರಬೇಕೆಂದು ಈ ಹಿಂದೆ ಒತ್ತಾಯಿಸಿದ್ದರು.[ಕಾನೂನಿನ ಕಣ್ಣಿನಿಂದ ಭ್ರಷ್ಟರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ-ಬಿವಿ ಆಚಾರ್ಯ]

Mysuru pragnavanta vedike members celebrating VK Sasikala’s conviction

ಈ ವೇಳೆ ಕನಕಗಿರಿ ರವಿತೇಜ, ನಗರಪಾಲಿಕೆ ಸದಸ್ಯ ಮಾ.ವಿ ರಾಂಪ್ರಸಾದ್, ಮೈಸೂರು ಪ್ರಜ್ಞಾವಂತ ವೇದಿಕೆಯ ಅಧ್ಯಕ್ಷ ಕಡಕೊಳ ಜಗದೀಶ್, ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಶಿವಪ್ಪಾಜಿ, ರಾಜಗೋಪಾಲ್, ಸಂದೀಪ್, ಮಹಿಳಾ ಮುಖಂಡರಾದ ಲಕ್ಷ್ಮಿದೇವಿ, ಸುನಂದ, ಬ್ರಹ್ಮೇಂದ್ರ, ಸುರೇಶ್, ಆಟೋ ಮಂಜು ಇತರರಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mysuru pragnavanta vedike menbers celebrating VK Sasikala’s conviction in mysuru
Please Wait while comments are loading...