ಮಕ್ಕಳ ಹುಟ್ಟುಹಬ್ಬದಂದು ಮೈಸೂರು ಪೊಲೀಸರಿಗೆ ರಜಾ

Posted By:
Subscribe to Oneindia Kannada

ನವೆಂಬರ್ 11, ಮೈಸೂರು : ಸದಾ ಕಾಲ ಕೊಲೆ, ಸುಲಿಗೆ, ಹೊಡೆದಾಟಗಳಂತಹಾ ಸುದ್ದಿಗಳೇ ಕೇಳುವ ಪೊಲೀಸರಿಗೆ ಸಿಹಿ ಸುದ್ದಿಗಳೇ ಅಪರೂಪ. ಆದರೆ ಇದು ಮಾತ್ರ ಅಪ್ಪಟ ಸಿಹಿ ಸುದ್ದಿ. ಆದರೆ ಮೈಸೂರಿನ ಪೊಲೀಸರಿಗೆ ಮಾತ್ರ.

ಹೌದು ಮೈಸೂರಿನ ಪೊಲೀಸರ ಪಾಲಿಗೆ ಇದು ನಿಜಕ್ಕು ಶುಭ ಸುದ್ದಿ. ಇನ್ನು ಮುಂದೆ ಮೈಸೂರು ಪೊಲೀಸರ ರಜೆ ಪಟ್ಟಿಗೆ ಇನ್ನೊಂದು ರಜೆ ಸೇರ್ಪಡೆ ಆಗಿಲಿದೆ. ಆದರೆ ಬೇರೆ ರಜೆಗಳಂತೆ ಅಲ್ಲ ಈ ರಜೆಗೆ ಬಹಳ ಮಹತ್ವವಿದೆ.

ಇನ್ನು ಮುಂದೆ ಮಕ್ಕಳ ಹುಟ್ಟುಹಬ್ಬದ ದಿನದಂದು ಮೈಸೂರು ಪೊಲೀಸರಿಗೆ ಖಡ್ಡಾಯ ರಜೆ ಸಿಗಲಿದೆ. ಹೀಗೆಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್ ಆದೇಶ ಮಾಡಿದ್ದಾರೆ.

Mysuru Police to get holiday for kids birthday

ಎಲ್ಲಾ ಸಂದರ್ಭಗಳಲ್ಲೂ ಕರ್ತವ್ಯ ನಿರ್ವಹಿಸುವ ಪೊಲೀಸರು ತಮ್ಮ ಕುಟುಂಬ ಸಂಭ್ರಮಗಳಿಂದ ವಂಚಿತರಾಗುತ್ತಿದ್ದಾರೆ. ಇದರಿಂದ ಅವರು ಮಾನಸಿಕ ಆತ್ಮಸ್ಥೈರ್ಯ ಕುಗ್ಗುತ್ತಿದೆ ಹಾಗಾಗಿ ರಜೆ ನೀಡುವ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ಪೊಲೀಸ್ ಕಾನ್ಸ್ಟೇಬಲ್ ನಿಂದ ಹಿಡಿದು ಪಿಎಸ್ಐವರೆಗೂ ಎಲ್ಲರಿಗೂ ಇದು ಅನ್ವಯವಾಗಲಿದ್ದು, ಪೊಲೀಸ್ ಠಾಣಾ ಸಿಬ್ಬಂದಿ, ಸಿಸಿಬಿ, ಸಿಎಸ್ಬಿ, ಸಿಸಿಆರ್ ಬಿ, ಕಂಟ್ರೋಲ್ ರೂಮ್, ವಿಮಾನ ನಿಲ್ದಾಣ, ಬೆರಳಚ್ಚು ಮುದ್ರೆ ಘಟಕದ ಸಿಬ್ಬಂದಿಗಳಿಗೂ ಅನ್ವಯವಾಗಲಿದೆ.

ಇದೊಂದು ಅತ್ಯುತ್ತಮ ಕ್ರಮವಾಗಿದ್ದು, ಮೈಸೂರು ಪೊಲೀಸರು ಆದೇಶವನ್ನು ತೆರೆದ ಹೃದಯದಿಂದ ಸ್ವಾಗತಿಸಿದ್ದಾರೆ.

ಪ್ರಸ್ತುತ ಮೈಸೂರಿಗೆ ಮಾತ್ರ ಸೀಮಿತವಾಗಿರುವ ಈ ನಿಯಮ ರಾಜ್ಯದ ಎಲ್ಲೆಡೆ ಜಾರಿಯಾಗಲಿ ಎಂಬುದು ಆಶಯ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Here is a good news for police in Mysuru. Now they can avail leave on the birthday of their kids. It is good gesture by police department in Mysuru.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ