ಮೈಸೂರಿನಲ್ಲಿ 'ಬಾಂಬ್ ನಾಗ' ಅಲಿಯಾಸ್ ಹಳೇ ನೋಟು ನಾಗರಾಜ್ ಹುಡುಕಾಟ

By: ಯಶಸ್ವಿನಿ ಎಂ.ಕೆ
Subscribe to Oneindia Kannada

ಮೈಸೂರು, ಏಪ್ರಿಲ್ 19 :ನಾಗನ ಕೆಲವು ತೋಟದ ಮನೆಗಳು, ರೆಸಾರ್ಟ್ ಗಳು ಮೈಸೂರಿನಲ್ಲಿದ್ದು, ಪೊಲೀಸರು ಇಂಚಿಂಚೂ ಬಿಡದೆ ಹುಡುಕುತ್ತಿದ್ದಾರೆ.

ದರೋಡೆ, ಅಪಹರಣ ಪ್ರಕರಣದಲ್ಲಿ ಬಂಧಿಸಲು ತೆರಳಿದ್ದ ವೇಳೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿ ತಲೆಮರೆಸಿಕೊಂಡಿರುವ ವಿ.ನಾಗರಾಜ್ ಅಲಿಯಾಸ್ 'ಬಾಂಬ್ ನಾಗ'ನಿಗಾಗಿ ರಾಜ್ಯಾದ್ಯಂತ ಶೋಧ ಕಾರ್ಯ ಚುರುಕುಗೊಂಡಿದೆ.

ಇತ್ತ ಪೊಲೀಸರು ಮನೆಯೊಳಗೆ ಪ್ರವೇಶಿಸುತ್ತಿದ್ದಂತೆ ಹಿಂಬಾಗಿಲಿನಿಂದ ಆತ ಪರಾರಿಯಾಗಿದ್ದು ಎಲ್ಲರಿಗೂ ತಿಳಿದಿದೆ. ಹಾಗಾಗಿ ನಾಗನ ಶೋಧಕ್ಕಾಗಿ ಖಾಕಿ ಪಡೆ ನಾಲ್ಕು ತಂಡ ರಚಿಸಿದೆ.[ಪರಾರಿಯಾಗಿರುವ ಶ್ರೀರಾಂಪುರ ಬಾಂಬ್ ನಾಗನ ಪೂರ್ವಾಪರ]

Bomb Naga

ತಮಿಳುನಾಡು, ಮಡಿಕೇರಿ, ಧರ್ಮಪುರಿ, ಬರಗೂರು, ರತ್ನಪುರಿ ಕಾಡುಗಳ ಪ್ರದೇಶಗಳಲ್ಲಿಯೂ ಶೋಧ ಕಾರ್ಯ ನಡೆದಿದೆ. ಧರ್ಮಪುರಿಗೆ ತೆರಳಿದ್ದಾನೆ ಎನ್ನುವ ಮಾಹಿತಿಯ ಹಿನ್ನೆಲೆಯಲ್ಲಿ ಶೋಧಕಾರ್ಯ ನಡೆಸಿರುವ ಪೊಲೀಸರು ಮೈಸೂರನ್ನು ಸುತ್ತಿದ್ದಾರೆ.

ಕಾಡಿನ ಪ್ರದೇಶಕ್ಕೆ ಅಗಮಿಸುವ ಇಂಥ ಕುಳಗಳಿಗೆ ಇಲ್ಲಿ ಯಾರ ಭಯವೂ ಇರುವುದಿಲ್ಲ ಅನ್ನುವ ನಂಬಿಕೆ. ಮತ್ತು ಅಲ್ಲಿನ ಗುಡ್ಡಗಾಡು ಪ್ರದೇಶದ ಜನರು ಇವರನ್ನು ಸತ್ಕರಿಸುತ್ತಾರೆ ಎಂಬ ಭಾವನೆಯಿಂದ ಹೆಚ್ಚಾಗಿ ಅರಣ್ಯವಿರುವ ಪ್ರದೇಶಗಳನ್ನೇ ತಮ್ಮ ಅಡಗು ತಾಣವನ್ನಾಗಿಸಿಕೊಳ್ಳುತ್ತಾರೆ ಎನ್ನಲಾಗುತ್ತಿದೆ.[ಕೇರಳದಲ್ಲಿ ತಲೆಮರೆಸಿಕೊಂಡಿರುವ ಬಾಂಬ್ ನಾಗ?]

ಜಾಮೀನು ಅರ್ಜಿ ಸಲ್ಲಿಕೆ
ಈ ನಡುವೆ ನಾಗರಾಜ್ ನಿರೀಕ್ಷಣಾ ಜಾಮೀನು ಕೋರಿ ಬೆಂಗಳೂರಿನ 11ನೇ ಎಸಿಎಂಎಂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ಮಾಹಿತಿ ಲಭ್ಯವಾಗಿದೆ. ನಾನು ಪ್ರಕರಣದಲ್ಲಿ ಭಾಗಿಯಾಗಿಲ್ಲ. ನಾನು ಹಲವು ವರ್ಷಗಳಿಂದ ಸಮಾಜಸೇವೆಯಲ್ಲಿ ತೊಡಗಿದ್ದೇನೆ. ಸಮಾಜ ವಿರೋಧಿ ಚಟುವಟಿಕೆಯಲ್ಲಿ ತೊಡಗುವ ಉದ್ದೇಶವಿಲ್ಲ ಎಂದು ತಿಳಿಸಿರುವ ಸುದ್ದಿ ಇದೆ.

ಇನ್ನು ನನಗೆ ದೂರುದಾರ ಯಾರೆಂದು ಗೊತ್ತೇ ಇಲ್ಲ. ಬ್ಲ್ಯಾಕ್ ಅಂಡ್ ವೈಟ್ ದಂಧೆಯಲ್ಲಿ ತೊಡಗಿದ್ದೇನೆ ಎಂದು ಸಿಸಿಬಿ ಪೊಲೀಸರು ದಾಳಿ ಮಾಡಿದ್ದು, ನಿರೀಕ್ಷಣಾ ಜಾಮೀನು ನೀಡಬೇಕು ಎಂದು ಮನವಿ ಸಲ್ಲಿಸಿರುವುದಾಗಿ ತಿಳಿದುಬಂದಿದೆ. ಒಟ್ಟಿನಲ್ಲಿ ನಾಗರಾಜ್ ಪತ್ತೆ ಕಾರ್ಯ ಜೋರಾಗಿಯೇ ನಡೆದಿದೆ.[100 ಕೋಟಿ ಹಣ 3ಮಚ್ಚು 2 ಡ್ಯಾಗರ್ ಪತ್ತೆ, ವಿ ನಾಗರಾಜ್ ಪರಾರಿ!]

ಮೈಸೂರಿನಲ್ಲಿ ಆತ ಇರುವ ಮಾಹಿತಿ ಲಭ್ಯವಾಗಿತ್ತು. ಅದಕ್ಕಾಗಿ ಶೋಧ ಕಾರ್ಯ ನಡೆಸಿದ್ದೆವು. ಇನ್ನೂ ಆತನಿಗಾಗಿ ಪೊಲೀಸರು ಹುಡುಕುತ್ತಲೇ ಇದ್ದಾರೆ. ಆತ ಸಿಗುವವರೆಗೂ ನಮ್ಮ ಪ್ರಯತ್ನ ನಿಲ್ಲಲ್ಲ ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Mysuru police searching for Bomb Naga who escaped from Bengaluru Sriramapur after raid by CCB police.
Please Wait while comments are loading...