ಕಳ್ಳರ ಹಿಡಿಯಲು ಮಾರು ವೇಷ ಧರಿಸಿದ ಮೈಸೂರು ಪೊಲೀಸರು

Posted By: ಯಶಸ್ವಿನಿ ಎಂ.ಕೆ
Subscribe to Oneindia Kannada

ಮೈಸೂರು, ಜನವರಿ 11 : ಆಭರಣ ಧರಿಸಿ, ಕೈಯಲ್ಲಿ ಮೊಬೈಲ್ ಮತ್ತು ಬ್ಯಾಗ್ ಹಿಡಿದು ಹೋಗುತ್ತಿದ್ದ ಮಹಿಳೆಯರನ್ನು ದೋಚಿ ಪರಾರಿಯಾಗುತ್ತಿದ್ದ ಇಬ್ಬರು ಖದೀಮರನ್ನು ಆಪರೇಷನ್ ಡಿಕಾಯ್' ಕಾರ್ಯಾ ಚರಣೆ ಮೂಲಕ ಬಂಧಿಸುವಲ್ಲಿ ,ಮೈಸೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ಮಹಿಳಾ ಪೊಲೀಸರನ್ನು ಸಾಮಾನ್ಯ ಗೃಹಿಣಿಯರಂತೆ ಒಡವೆ ಹಾಕಿ, ವ್ಯಾನಿಟಿ ಬ್ಯಾಗು ನೀಡಿ ಒಂಟಿಯಾಗಿ ನಗರದ ಹಲವೆಡೆ ಓಡಾಡುವಂತೆ ಮಾಡಿ, ಕಳ್ಳರು ಅವರನ್ನು ದೋಚಲು ಬಂದಾಗ ಮಾರುವೇಷದಲ್ಲಿ ಅಡಗಿದ್ದ ಪೊಲೀಸರು ಕಳ್ಳರ ಬೆನ್ನು ಹತ್ತಿ ಬಂಧಿಸಿದ್ದಾರೆ. ಈ ರೀತಿಯ ಕಾರ್ಯಾಚರಣೆಗೆ ಆಪರೇಷನ್ ಡಿಕಾಯ್ ಎಂದು ಹೆಸರು.

ಸಂಕ್ರಾಂತಿ ವಿಶೇಷ ಪುಟ

ನಾಯ್ಡುನಗರದ ನಿವಾಸಿಗಳಾದ ಸನ್ನಿ ಡೊನಾಲ್ಡ್(24) ಹಾಗೂ ಕಿರಣ್(21) ಅಪರೇಶನ್ ಡಿಕಾಯ್ ಖೆಡ್ಡಕ್ಕೆ ಬಿದ್ದ ಸುಲಿಗೆಕೋರರು. ಇವರಿಂದ 1.70 ಲಕ್ಷ ರೂ ಮೌಲ್ಯದ ಮೌಲ್ಯದ 12 ಗ್ರಾಂ ಚಿನ್ನಾಭರಣ, 02 ಮೊಬೈಲ್ ಫೋನ್ ಹಾಗೂ ಕೃತ್ಯಕ್ಕೆ ಬಳಸಿದ್ದ 1 ಬೈಕ್ ವಶ ಪಡಿಸಿಕೊಳ್ಳಲಾಗಿದೆ.

Mysuru police new plan Operation Decoy Two Captives Captive

ಜನವರಿ 8 ರಂದು ವಿಜಯನಗರ ಪೊಲೀಸರು ವಿದ್ಯಾ ವರ್ಧಕ ಕಾಲೇಜು ರಸ್ತೆಯಲ್ಲಿ ಆಪರೇಷನ್ ಡಿಕಾಯ್ ಕಾರ್ಯಾಚರಣೆಯಲ್ಲಿದ್ದಾಗ ಆಯಿಸ್ಟಾರ್ ಬೇ ಹೋಟೆಲ್ ಬಳಿ ಮಹಿಳಾ ಸಿಬ್ಬಂದಿಯಿಂದ ಮೊಬೈಲ್ ಕಿತ್ತುಕೊಂಡು ಹೋಗಲು ಯತ್ನಿಸಿದಾಗ ಇಬ್ಬರನ್ನು ಹಿಡಿದ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.

ಡಿ.28ರ ರಾತ್ರಿ ಕಲಾಮಂದಿರದ ಮುಂಭಾಗ ರಸ್ತೆಯಲ್ಲಿ ಸ್ಕೂಟರ್‍ನ ಹಿಂಭಾಗ ಕುಳಿತು ಬರುತ್ತಿದ್ದ ಮಹಿಳೆಯ ಚಿನ್ನಾಭರಣ ಮತ್ತು ಮೊಬೈಲ್ ಇದ್ದ ವ್ಯಾನಿಟಿ ಬ್ಯಾಗನ್ನು ಹಾಗೂ ಡಿ.29ರ ರಾತ್ರಿ ವಿಜಯನಗರ ವಾಟರ್ ಟ್ಯಾಂಕ್ ರಸ್ತೆಯಲ್ಲಿ ಬೈಕ್‍ನ ಹಿಂಭಾಗ ಕುಳಿತು ಬರುತ್ತಿದ್ದ ಮಹಿಳೆಯ ಮೊಬೈಲ್ ಮತ್ತು ನಗದು ಇದ್ದ ಪರ್ಸನ್ನು ಕಿತ್ತುಕೊಂಡು ಹೋಗಿರುವುದಾಗಿ ಒಪ್ಪಿಕೊಂಡಿದ್ದಾರೆ.

ಈ ಸಂಬಂಧ ಜಯಲಕ್ಷ್ಮೀಪುರಂ ಹಾಗೂ ವಿಜಯನಗರ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತರಿಂದ ರೂ. 1.70 ಲಕ್ಷ ರೂ ಮೌಲ್ಯದ 12 ಗ್ರಾಂ ಚಿನ್ನಾಭರಣ , 2 ಸ್ಯಾಮ್‍ಸಂಗ್ ಜೆ7 ಪ್ರೈಮ್ ಮೊಬೈಲ್ ಫೋನ್‍ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಬಜಾಜ್ ಪಲ್ಸರ್ ಬೈಕ್‍ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಆರೋಪಿಗಳು ಬೈಕ್ ವೀಲಿಂಗನ್ನು ಕರಗತಗೊಳಿಸಿಕೊಂಡಿದ್ದು, ಈ ಹಿಂದೆ ಸಹ ಇದೇ ರೀತಿಯ ಅಪರಾಧಗಳನ್ನು ಮಾಡಿರುವ ಬಗ್ಗೆ ನರಸಿಂಹರಾಜ ಮತ್ತು ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.

ಏನಿದು ಡಿಕಾಯ್ ಆಪರೇಷನ್
ನಗರದಲ್ಲಿ ಮಹಿಳೆಯರು ನಡಿಗೆ, ದ್ವಿ ಚಕ್ರ ವಾಹನ ಮತ್ತು ಆಟೋಗಳಲ್ಲಿ ಹೋಗುವಾಗ ಬೈಕ್‍ನಿಂದ ಬಂದು ಅವರ ಮೊಬೈಲ್ ಫೋನ್, ವ್ಯಾನಿಟಿ ಬ್ಯಾಗ್‍ಗಳನ್ನು ಕಿತ್ತುಕೊಂಡು ಹೋಗುತ್ತಿರುವ ಪ್ರಕರಣಗಳು ಕಂಡುಬಂದ ಹಿನ್ನೆಲೆಯಲ್ಲಿ ಮೈಸೂರು ನಗರ ಪೊಲೀಸ್ ಆಯುಕ್ತರು, ಮಹಿಳಾ ಪೊಲೀಸ್ ಸಿಬ್ಬಂದಿಗೆ ಆಭರಣ ಧರಿಸಿ, ಕೈಯಲ್ಲಿ ಮೊಬೈಲ್ ಮತ್ತು ವ್ಯಾನಿಟಿ ಬ್ಯಾಗ್ ಹಿಡಿದುಕೊಂಡು ಸಾರ್ವಜನಿಕರಂತೆ ಬಿಂಬಿಸಿ, ಕಳ್ಳರು ಅವರಿಂದ ಮೊಬೈಲ್ ಫೋನ್, ವ್ಯಾನಿಟಿ ಬ್ಯಾಗ್ ಕಿತ್ತುಕೊಂಡು ಹೋಗುವ ಸಮಯದಲ್ಲಿ ಮಹಿಳಾ ಸಿಬ್ಬಂದಿ ಸುತ್ತ ಇರುವ ಪೊಲೀಸರು ದಾಳಿ ಮಾಡಿ ಕಳ್ಳರನ್ನು ಹಿಡಿಯುವ "ಆಪರೇಷನ್ ಡಿಕಾಯ್" ಕಾರ್ಯಾಚರಣೆಯನ್ನು ನಗರದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ನಡೆಸುವಂತೆ ಸೂಚಿಸಿದ್ದರು.

ನಗರದ ಅಪರಾಧ ವಿಭಾಗದ ಡಿಸಿಪಿ ವಿಕ್ರಂ ಅಮಟೆ ಮಾರ್ಗದರ್ಶನದಲ್ಲಿ ಎನ್.ಆರ್. ವಿಭಾಗದ ಎಸಿಪಿ ಉಮೇಶ್ ಜಿ ಸೇಠ್ ರವರ ನೇತೃತ್ವದಲ್ಲಿ ವಿಜಯನಗರ ಪೊಲೀಸ್ ಠಾಣೆಯ ಇನ್‍ಸ್ಪೆಕ್ಟರ್ ಪಿ ಪಿ.ಎನ್. ಅನಿಲ್‍ಕುಮಾರ್, ಪಿಎಸ್‍ಐ ಎನ್. ರಾಮ ಚಂದ್ರ, ಎಎಸ್‍ಐ ಕೃಷ್ಣ, ಸಿಬ್ಬಂದಿಗಳಾದ ಶಂಕರ್, ಈಶ್ವರ್, ಸುರೇಶ್, ಸಾಗರ್, ಸಿ. ಮಹೇಶ್, ರೂಪ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mysuru Police have been arrested two men by the movement Operation Decoy.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ