ಮೈಸೂರು: ಜೂಜು ಅಡ್ಡೆಗಳ ಮೇಲೆ ದಾಳಿ; 67 ಬಂಧನ

Posted By:
Subscribe to Oneindia Kannada

ಮೈಸೂರು, ಜುಲೈ 24: ನಗರದಲ್ಲಿ ಅಕ್ರಮ ಜೂಜು ಚಟುವಟಿಕೆಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಸಿಸಿಬಿ ಪೊಲೀಸರು ಕೆಲವು ಕ್ಲಬ್ ಗಳ ಮೇಲೆ ದಾಳಿ ನಡೆಸಿ ಕ್ಲಬ್ ಸದಸ್ಯರಲ್ಲದವರು ಜೂಜಾಟದಲ್ಲಿ ಪಣಕ್ಕಿಟ್ಟಿದ್ದ ಒಟ್ಟು ಎರಡು ಲಕ್ಷದ ಅರವತ್ತೇಳು ಸಾವಿರ ರೂ.ನಗದು, 67 ವ್ಯಕ್ತಿಗಳು ಹಾಗೂ ಮೂವತ್ತ ಮೂರು ಮೊಬೈಲ್ ಗಳನ್ನು ಭಾನುವಾರ ವಶಪಡಿಸಿಕೊಂಡಿದ್ದಾರೆ.

ಕೆ.ಆರ್.ವೃತ್ತದ ವಿಶ್ವೇಶ್ವರಯ್ಯ ಕಟ್ಟಡದ ಎರಡನೇ ಮಹಡಿಯಲ್ಲಿನ ನ್ಯೂ ಮಾಡ್ರನ್ ರಿಕ್ರಿಯೇಷನ್ ಕ್ಲಬ್ ನಲ್ಲಿ ದಾಳಿಯಲ್ಲಿ ಅಧ್ಯಕ್ಷ ಸೇರಿದಂತೆ, ನ ಅಧ್ಯಕ್ಷ ಸೇರಿದಂತೆ 37ಮಂದಿಯನ್ನು ದಸ್ತಗಿರಿ ಮಾಡಿ ಅವರಿಂದ 1,51,630ರೂ.ನಗದು ಹಾಗೂ 33 ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆದಿದ್ದಾರೆ.

Mysuru police has raided various illegal gambling and casino cetres in the city

ಸ್ಪೋರ್ಟ್ಸ್ ಕ್ಲಬ್ ಮೇಲೆಯೂ ಇದೇ ರೀತಿಯ ದೂರುಗಳು ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಪೊಲೀಸರು ಮದ್ಯ ಸೇವಿಸುತ್ತಿದ್ದ ಇಬ್ಬರು ವ್ಯಕ್ತಿಗಳು ಹಾಗೂ ಕ್ಲಬ್ ನ ಆಡಳಿತ ಮಂಡಳಿಯ ವಿರುದ್ಧ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಫಾರಂ ಹೌಸ್ ನಲ್ಲಿರುವ ಹೊಯ್ಸಳ ಸ್ಪೋರ್ಟ್ಸ್ ಕ್ಲಬ್ ಮೇಲೆ ದಾಳಿ ನಡೆಸಿದ ಪೊಲೀಸರು ಜೂಜಾಟ ನಡೆಸುತ್ತಿದ್ದ ಸದಸ್ಯರಲ್ಲದವರನ್ನು ಹಾಗೂ ಕ್ಲಬ್ ನ ಮಾಲಿಕರು ಸೇರಿ 32 ಮಂದಿಯನ್ನು ದಸ್ತಗಿರಿ ಮಾಡಿ ಪಣಕ್ಕಿಟ್ಟಿದ್ದ 1,15,680ರೂ.ನಗದು ವಶಪಡಿಸಿಕೊಂಡಿದ್ದಾರೆ.

Mysuru : Child trafficking erupted again | Oneindia Kannada

ಎನ್.ಆರ್.ಮೊಹಲ್ಲಾದ ಶಿವಾಜಿ ರಸ್ತೆಯ ಮರ್ಚೆಂಟ್ ಕ್ಯೂ ಸ್ಪೋರ್ಟ್ಸ್ ರಿಕ್ರಿಯೇಷನ್ ಅಸೋಸಿಯೇಷನ್ ಮೇಲೆಯೂ ಪೊಲೀಸರು ದಾಳಿ ನಡೆಸಿದ್ದು, ಕ್ಲಬ್ ನಲ್ಲಿ ಸದಸ್ಯರಲ್ಲದವರು ಅಲ್ಲಿ ಧೂಮಪಾನ ಮಾಡುತ್ತಿದ್ದು ಅವರ ಮೇಲೆ ಕೋಟ್ಪಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The Mysuru Police has raided on various illegal gambling and casino centres in Mysuru city and arrested several people who were engaged in the illegal activity and ceased Rs. 2 Lakhs 67 thousands.
Please Wait while comments are loading...