ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

ಮೈಸೂರು: ಒಂದು ಶವ ಹುಡುಕುತ್ತಿದ್ದರೆ, ಸಿಕ್ಕಿದ್ದು ಮೂರು ಶವ!

By ಮೈಸೂರು ಪ್ರತಿನಿಧಿ
Subscribe to Oneindia Kannada
For Quick Alerts
ALLOW NOTIFICATIONS
For Daily Alerts
    ಮೈಸೂರು: ಒಂದು ಶವ ಹುಡುಕುತ್ತಿದ್ದರೆ, ಸಿಕ್ಕಿದ್ದು ಮೂರು ಶವ! | Oneindia Kannada

    ಮೈಸೂರು, ನವೆಂಬರ್ 21: ಮೈಸೂರಿನ ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮ ಸಮೀಪದ ಅಂಕನಹಳ್ಳಿ ಕೆರೆಯಲ್ಲಿ ಸಿಕ್ಕ ಅಪರಿಚಿತ ಶವಗಳು ಯಾರದ್ದು ಎಂಬ ಪ್ರಶ್ನೆ ಇದೀಗ ಪೊಲೀಸರು ಸೇರಿದಂತೆ ಗ್ರಾಮಸ್ಥರನ್ನು ಕಾಡತೊಡಗಿದೆ. ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದಿದ್ದ ಮಹಿಳೆಯ ಶವದ ಹುಡುಕಾಟ ನಡೆಸಿದಾಗ ಪೊಲೀಸರಿಗೆ ಮತ್ತೆರಡು ಕೊಳೆತ ಶವ ದೊರೆತಿರುವುದು ಅಚ್ಚರಿಗೆ ಕಾರಣವಾಗಿದೆ.

    ರಾಮನಗರ: ಅರ್ಕಾವತಿ ನದಿಯಲ್ಲಿ ಕೊಚ್ಚಿಹೋದ ಬೈಕ್ ಸವಾರರು

    ಸಾಲಿಗ್ರಾಮ ಸಮೀಪದ ಲಕ್ಷ್ಮೀಪುರ ಗ್ರಾಮದ ಮಹೇಶ್ ಅವರ ಪತ್ನಿ ಪುಟ್ಟಗೌರಮ್ಮ (26) ಎಂಬಾಕೆ ನ.17ರಂದು ಬಟ್ಟೆತೊಳೆಯುವ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದಿದ್ದರು. ಈ ಬಗ್ಗೆ ಪತಿ ಮಹೇಶ್ ನೀಡಿದ ದೂರಿನ ಮೇರೆಗೆ ಶವವನ್ನು ಕೆರೆಯಿಂದ ಹೊರ ತೆಗೆಯುವ ಸಲುವಾಗಿ ಸಾಲಿಗ್ರಾಮ ಪೊಲೀಸ್ ಠಾಣೆಯ ಎ.ಎಸ್.ಐ ತಿಮ್ಮನಾಯಕ ಹಾಗೂ ಸಿಬ್ಬಂದಿ ಮೀನುಗಾರರ ಸಹಾಯಪಡೆದು ಶೋಧಕಾರ್ಯ ನಡೆಸಿದ್ದರು.

    Mysuru: police find 3 bodies instead of one in Mysuru

    ಚಾಮರಾಜ ಎಡದಂಡೆ ನಾಲೆಯ ಬಳಿ ಸ್ಥಳ ಪರಿಶೀಲಿಸಿದರೂ ಶವ ಪತ್ತೆಯಾಗಿರಲಿಲ್ಲ, ಶುಕ್ರವಾರದಿಂದ ನಾಲೆಯಲ್ಲಿ ಹುಡುಕಾಟ ನಡೆಸಿ ಕೊನೆಗೆ ಅಂಕನಹಳ್ಳಿ ಗ್ರಾಮದಲ್ಲಿ ಚಾಮರಾಜ ಎಡದಂಡೆ ನಾಲೆಗೆ ಹೊಂದಿ ಕೊಂಡಿರುವ ಕೆರೆಯಲ್ಲಿ ಪುಟ್ಟಗೌರಮ್ಮಳ ಶವ ಹುಡುಕುವಾಗ ಒಂದಿಷ್ಟು ದೂರದಲ್ಲಿ ಇಬ್ಬರು ಅಪರಿಚಿತ ಪುರುಷರ ಶವ ಪತ್ತೆಯಾಗಿದ್ದು, ಶವಗಳ ಗುರುತು ಪತ್ತೆ ಮಾಡಲಾಗದಷ್ಟು ದೇಹ ಕೊಳೆತು ವಿಕಾರವಾಗಿದೆ. ಇದರೊಂದಿಗೆ ಪುಟ್ಟಗೌರಮ್ಮಳ ಶವವೂ ದೊರೆತಿದೆ. ಇದೀಗ ಒಬ್ಬರ ಶವದೊಂದಿಗೆ ಇನ್ನಿಬ್ಬರು ಪುರುಷರ ಶವ ದೊರೆತಿದ್ದು ಅದು ಯಾರ ಶವ ಎಂಬುದು ಪೊಲೀಸರ ತನಿಖೆಯಿಂದ ಹೊರಬರಬೇಕಿದೆ.

    ರಾಮನಗರದಲ್ಲಿ ಕಾರು ಕೆರೆಗೆ ಉರುಳಿ ಮೂವರ ದುರ್ಮರಣ

    ಸ್ಥಳಕ್ಕೆ ಗ್ರೇಡ್-2 ತಹಸೀಲ್ದಾರ್ ಹೆಚ್.ಆರ್.ರಂಗರಾಜ್ ತಮ್ಮ ಸಿಬ್ಬಂದ್ದಿಗಳೊಡನೆ ತೆರಳಿ ಸ್ಥಳ ಪರಿಶೀಲಿಸಿ ಮಹಿಳೆ ಪುಟ್ಟಗೌರಮ್ಮಳ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅಪರಿಚಿತ ಶವದ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    In a strange incident, police have searching for a dead body of a woman, who died after drown into a stream in a Mysuru, But at the time of searching they found 3 bodies instead of one! Police are investigating about other two anonymous bodies.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more