ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಡುಕರು ಮಾಡಿದ ಯಡವಟ್ಟು: ಹೊರಬಂತು ಪತಿಹಂತಕಿಯ ಗುಟ್ಟು!

By Yashaswini
|
Google Oneindia Kannada News

ಮೈಸೂರು, ನವೆಂಬರ್ 10: ವರುಷದ ಹಿಂದೆ ಖಾಸಗಿ ಶಾಲಾ ಮುಖ್ಯಸ್ಥನ ಹತ್ಯೆ ಪ್ರಕರಣವನ್ನು ಮೈಸೂರಿನ ಸಿಸಿಬಿ ಪೊಲೀಸರು ಭೇದಿಸಿದ್ದಾರೆ. ಆಗ ಸಹಜ ಸಾವು ಎಂದು ಆ ವ್ಯಕ್ತಿಯ ದೇಹಕ್ಕೆ ಅಗ್ನಿ ಸ್ಪರ್ಶ ಮಾಡುವ ಮೂಲಕ ಅಂತ್ಯಕ್ರಿಯೆ ಮಾಡಿ ಕೈ ತೊಳೆದುಕೊಂಡಿದ್ದ ಪ್ರಕರಣ ಇದೀಗ ಭೀಕರ ತಿರುವು ಪಡೆದುಕೊಂಡಿದೆ. ಹಂತಕರು ಕುಡಿದು ಬಾರ್ ವೊಂದರಲ್ಲಿ ಕೊಚ್ಚಿಕೊಂಡ ಪೌರುಷ, ಸದ್ಯ ಅವರ ಕೈಗೆ ಬೇಡಿ ಬೀಳುವಂತೆ ಮಾಡಿದೆ.

ಮೈಸೂರು: ಆತ್ಮಹತ್ಯೆ - ಬೈಕ್ ಅಪಘಾತ; ಪ್ರತ್ಯೇಕ ಪ್ರಕರಣಗಳಲ್ಲಿ 4 ಸಾವುಮೈಸೂರು: ಆತ್ಮಹತ್ಯೆ - ಬೈಕ್ ಅಪಘಾತ; ಪ್ರತ್ಯೇಕ ಪ್ರಕರಣಗಳಲ್ಲಿ 4 ಸಾವು

ಪತ್ನಿಯೇ ಮೂವರೊಂದಿಗೆ ಸೇರಿ ಗಾಢ ನಿದ್ರೆಯಲ್ಲಿದ್ದ ಪತಿಯನ್ನು ದಿಂಬಿನಿಂದ ಅದುಮಿ ಉಸಿರುಕಟ್ಟಿಸಿ ಹತ್ಯೆಗೈದಿದ್ದಾರೆಂಬ ಅತ್ಯಂತ ಭೀಕರ ಸತ್ಯವನ್ನು ಪೊಲೀಸರು ಇದೀಗ ಬಯಲು ಮಾಡಿದ್ದಾರೆ.

Mysuru police finally decoded a murder mystery in Mysuru

ಘಟನೆ ಹಿನ್ನೆಲೆ :
2016 ಅಕ್ಟೋಬರ್‌ 19 ರಂದು ದಟ್ಟಗಳ್ಳಿ ಚಾಣಕ್ಯ ಕೃಷ್ಣ ಎಂಬವರು ಸಾವನ್ನಪ್ಪಿದ್ದು, ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಬಿಂಬಿಸಲಾಗಿತ್ತು. ಸಹಜ ಸಾವು ಎಂದುಕೊಂಡಿದ್ದ ಪ್ರಕರಣಕ್ಕೆ ಹೊಸ ತಿರುವು ದೊರಕಿದ್ದು, ಇದೀಗ ಪತ್ನಿಯೇ ಹತೈಗೈದಿದ್ದಾಳೆ ಎಂಬ ಮಾಹಿತಿ ಬಹಿರಂಗಗೊಂಡಿದೆ. ಕೃಷ್ಣ ಮಲಗಿದ್ದಾಗ ದಿಂಬಿನಿಂದ ಉಸಿರು ಗಟ್ಟಿಸಿ ಹತ್ಯೆ ಮಾಡಲಾಗಿದೆ ಎನ್ನಲಾಗುತ್ತಿದೆ. ಕೃಷ್ಣ ನ ಪತ್ನಿ ರಾಧಾ ಹಾಗೂ ಮೂವರು ಸಹಚರರಿಂದ ಕೃತ್ಯ ನಡೆದಿದೆ.

ಕಳೆದ 15 ದಿನಗಳ ಹಿಂದೆ ಕುವೆಂಪು ನಗರದ ಬಾರೊಂದರಲ್ಲಿ ಕಂಠಪೂರ್ತಿ ಕುಡಿದಿದ್ದ ಮೂವರು ಯುವಕರಲ್ಲಿ ಓರ್ವ ರಾತ್ರಿ 10.45 ರ ಸುಮಾರು ಮಾತಿನ ಭರಾಟೆಯಲ್ಲಿ ದಿಂಬಿನಿಂದ ಮುಖ ಅದುಮಿ ಉಸಿರು ಕಟ್ಟಿಸಿ ಸ್ಕೂಲ್ ಕೃಷ್ಣ ನನ್ನು ಕೊಲೆ ಮಾಡಿದ್ದರೂ ಒಂದು ವರ್ಷದಿಂದ ಯಾರಿಗೂ ಗೊತ್ತೇ ಆಗಲಿಲ್ಲ ನೋಡು ಹೇಗೆ ಮೆಂಟೇನ್ ಮಾಡಿದ್ದೇವೆ ಎಂದು ಪೌರುಷ ಕೊಚ್ಚಿಕೊಂಡಿದ್ದಾನೆ.

ಆಗ ಉಳಿದವರು ಕೇಕೆ ಹಾಕಿ ನಗುತ್ತಾ ಮತ್ತೆ - ಮತ್ತೆ ಮದ್ಯ ಆರ್ಡರ್ ಮಾಡುತ್ತಿದ್ದುದನ್ನು ಅದೇ ಬಾರ್ ನಲ್ಲಿ ಇವರ ಟೇಬಲ್ ಹಿಂಭಾಗ ಕುಳಿತಿದ್ದ ಕೃಷ್ಣನ ಸಂಬಂಧಿ ಕೇಳಿಸಿಕೊಂಡಿದ್ದಾರೆ. ಮರುದಿನ ಆ ವ್ಯಕ್ತಿ ತಮ್ಮ ಸಂಬಂಧಿಗಳಿಗೆ ಈ ವಿಷಯ ತಿಳಿಸಿ ನಾಲ್ಕೈದು ದಿನಗಳವರೆಗೆ ಚರ್ಚೆ ನಡೆಸಿ ಕಡೆಗೆ ಕೃಷ್ಣನ ಪತ್ನಿಯನ್ನು ಕೇಳಿದಾಗ ಯಾವುದೇ ಕಾರಣಕ್ಕೂ ಹಾಗೆ ನಡೆದಿಲ್ಲ. ಅವರು ಹಾರ್ಟ್ ಅಟ್ಯಾಕ್ ನಿಂದ ಸಾವನ್ನಪ್ಪಿದ್ದು ಎಂದು ಆಕೆ ವಾದ ಮಾಡಿ ಕೊಲೆಯ ವಿಷಯವನ್ನು ಅಲ್ಲಗಳೆದಿದ್ದರು.

ಕಡೆಗೆ ಸಂಬಂಧಿಕರು ಕುವೆಂಪು ನಗರ ಠಾಣೆಗೆ ತೆರಳಿ ಲಿಖಿತ ದೂರು ನೀಡಿ ಬಾರ್ ನಲ್ಲಿ ಮಾತನಾಡಿಕೊಳ್ಳುತ್ತಿದ್ದ ಬಗ್ಗೆಯೂ ಮಾಹಿತಿ ನೀಡಿದರು. ಪ್ರಕರಣದ ಗಂಭೀರತೆ ಅರಿತ ನಗರ ಪೊಲೀಸ್ ಕಮಿಷನರ್ ಸುಬ್ರಹ್ನಣ್ಯೇಶ್ವರರಾವ್ ಅವರು ತನಿಖೆಯನ್ನು ಸಿಸಿಬಿಗೆ ಒಪ್ಪಿಸಿದರು. ತನಿಖೆ ಆರಂಭಿಸಿದ ಸಿಸಿಬಿ ಎಸಿಪಿ ಗೋಪಾಲ್ ಇನ್ಸ್ಪೆಕ್ಟರ್ ಜಗದೀಶ್ ಅವರು ಶಂಕಿತ ಮಂಜುನಾಥನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಡೆದ ಸತ್ಯ ಸಂಗತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ತಾವು ಕೃಷ್ಣನನ್ನು ಗಾಢ ನಿದ್ರೆಯಲ್ಲಿದ್ದಾಗ ಅವರ ಮನೆಯಲ್ಲೇ ಹತ್ಯೆಗೈದಿದ್ದಾಗಿ ಸಾಕ್ಷ್ಯ ನಾಶ ಮಾಡುವ ಸಲುವಾಗಿ ಮೃತದೇಹವನ್ನು ಸುಟ್ಟು ಹಾಕಿ ಅಂತ್ಯಕ್ರಿಯೆ ನೆರವೇರಿಸಲು ನಾವೇ ಪ್ರೇರೇಪಣೆ ನೀಡಿದ್ದಾಗಿಯೂ, ಮಂಜುನಾಥ್ ಒಪ್ಪಿಕೊಂಡಿದ್ದಾನೆಂದು ತಿಳಿದುಬಂದಿದೆ. ಮಂಜು ಚಾಣಕ್ಯ ಶಾಲೆಗೆ ವಾಟರ್ ಸಪ್ಲೈ ಮಾಡುತ್ತಿದ್ದ ಆಗ ಪರಿಚಯವಾಗಿದ್ದ ಮಂಜು ಜತೆ ಸೇರಿ ಪತ್ನಿ ತನ್ನ ಪತಿಯನ್ನು ಹತ್ಯೆಗೈದಿದ್ದಾಳೆ. ಪತಿ ಕೃಷ್ಣ ಹಾಗೂ ಪತ್ನಿ ರಾಧಾ ಇಬ್ಬರೂ ಇದೇ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಕೊಲೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಪತ್ನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

English summary
Mysuru police finally decoded a murder mystery in Mysuru. Police are trying to arrest a wife who killed her husband. The reason behind the incident is still unknown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X