ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಣೇಶ ಹಬ್ಬಕ್ಕೆ ಬಲವಂತವಾಗಿ ಚಂದಾ ವಸೂಲಿ ಮಾಡಿದ್ರೆ ಜೈಲು!

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಆಗಸ್ಟ್ 23: ಗಣಪತಿ ಹಬ್ಬ ಬಂದಾಯಿತು, ನಿಮ್ಮ ಮನೆ ಅಕ್ಕ -ಪಕ್ಕ ಗಣಪತಿ ಇಡುತ್ತಿದ್ದೀವಿ. ದಯವಿಟ್ಟು ಹಣ ಕೊಡಿ ಎಂದು ನಿಮ್ಮ ಬಳಿ ಬರುತ್ತಿದ್ದಾರಾ..? ಅಥವಾ ನೀವು ರಸ್ತೆಯಲ್ಲಿ ತೆರಳುತ್ತಿದ್ದರೆ ಬಲವಂತವಾಗಿ ನಿಲ್ಲಿಸಿ ಹಣ ಕೇಳುತ್ತಿದ್ದಾರಾ..? ಹಾಗಾದ್ರೆ ಇನ್ಯಾಕೆ ತಡ ಈಗಲೇ ಪೊಲೀಸರಿಗೆ ತಿಳಿಸಿಬಿಡಿ. ಅವರೆಲ್ಲಾ ಸಜಾ ಬಂಧಿಗಳಾಗಳಾದು ಪಕ್ಕಾ.

ಹೌದು, ಗಣಪತಿ ಹಬ್ಬಕ್ಕೆ 2 ದಿನ ಬಾಕಿ ಇದೆ. ಗೌರಿ ಗಣೇಶ ಹಬ್ಬವನ್ನು ಎಲ್ಲೆಡೆ ಆಚರಿಸಲಾಗುತ್ತಿದ್ದು, ಶಾಂತಿ ಹಾಗೂ ಸೌಹಾರ್ದಯುತವಾಗಿ ಆಚರಿಸಲು ಗಣಪತಿಯನ್ನು ಪ್ರತಿಷ್ಠಾಪನೆ ಮಾಡುವವರು ಬಲವಂತವಾಗಿ ಯಾವುದೇ ಚಂದಾ ವಸೂಲಿ ಮಾಡುವಂತಿಲ್ಲ.

ಹಾಗೇನಾದರೂ ಕಂಡು ಬಂದಲ್ಲಿ ಅಂಥಹವರ ವಿರುದ್ಧ ಕಲಂ 384 ಐಪಿಸಿ ರೀತ್ಯಾ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮೈಸೂರು ಪೊಲೀಸ್ ಸುಬ್ರಹ್ಮಣ್ಯೇಶ್ವರರಾವ್ ತಿಳಿಸಿದ್ದಾರೆ.

Mysuru police Commissioner instructs to observe peaceful Ganesha festival

ಈ ಅಪರಾಧಕ್ಕೆ ಮೂರು ವರ್ಷಗಳ ಸಜೆ ಅಥವಾ ದಂಡ ವಿಧಿಸಬಹುದು ಎಂದಿದ್ದಾರೆ. ಗಣಪತಿ ಪ್ರತಿಷ್ಠಾಪನೆಗೂ ಮುನ್ನ ಪೊಲೀಸರ ಪೂರ್ವಾನುಮತಿ ಪಡೆಯಬೇಕು. ಪ್ರತಿಷ್ಠಾಪನೆಗೂ ಮುನ್ನ ಸ್ಥಳದ ಮಾಲಿಕರ ಒಪ್ಪಿಗೆ ಪತ್ರ ಪಡೆಯಬೇಕು. ಸಾರ್ವಜನಿಕ ಸ್ಥಳವಾಗಿದ್ದಲ್ಲಿ ನಗರಪಾಲಿಕೆ ಅಥವಾ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪತ್ರವನ್ನು ಪಡೆಯಬೇಕು.

ವಿದ್ಯುಚ್ಛಕ್ತಿ ಅಳವಡಿಸುವ ಕುರಿತು ಚೆಸ್ಕಾಂನಿಂದ ಅನುಮತಿಯನ್ನು ಪಡೆಯಬೇಕು. ಅಗ್ನಿಶಾಮಕ ದಳದಿಂದ ಬೆಂಕಿ ಅನಾಹುತದ ಸುರಕ್ಷತೆಯ ಕುರಿತು ನಿರಾಕ್ಷೇಪಣಾ ಪತ್ರ ಪಡೆಯಬೇಕು, ವಿಸರ್ಜನೆಯ ವೇಳೆ ಸ್ಥಳ ಮತ್ತು ಮಾರ್ಗ ಹಾಗೂ ಇತರೆ ವಿಷಯಗಳ ಕುರಿತು ಮಾಹಿತಿಯನ್ನು ಪೂರ್ವಾನುಮತಿ ಪತ್ರದಲ್ಲಿ ನೀಡಬೇಕು ಎಂದಿದ್ದಾರೆ.

ಧ್ವನಿವರ್ಧಕ ಬಳಕೆ ಮತ್ತು ಮನರಂಜನಾ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಕಡ್ಡಾಯವಾಗಿ ಸಂಬಂಧಪಟ್ಟ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಅವರಿಂದ ಅನುಮತಿ ಪತ್ರ ಪಡೆಯಬೇಕು.

ಬೆಳಿಗ್ಗೆ 6ರಿಂದ ರಾತ್ರಿ 10ಗಂಟೆಯವೆರೆಗೆ ಮಾತ್ರ ಕಡಿಮೆ ಧ್ವನಿಯಲ್ಲಿ ಧ್ವನಿವರ್ಧಕ ಬಳಸಬೇಕು ನಿಯಮಗಳನ್ನು ಉಲ್ಲಂಘಿಸಿರುವುದು ಕಂಡು ಬಂದಲ್ಲಿ ಸಾರ್ವಜನಿಕರು ಸಂಬಂಧಪಟ್ಟ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಲು ತಿಳಿಸಿದ್ದಾರೆ.

ಪ್ಲಾಸ್ಟರ್ ಆಫ್ ಪ್ಯಾರೀಸ್ ವಶಕ್ಕೆ ಪಡೆದ ಅಧಿಕಾರಿಗಳು:
ಇಂದು ನಗರದ ವಿವಿಧ ಬಡಾವಣೆಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರೀಸ್ ಮತ್ತು ಬಣ್ಣಗಳಿಂದ ತಯಾರಿಸಿದ ಗೌರಿ-ಗಣೇಶ ವಿಗ್ರಹಗಳನ್ನು ವಶಕ್ಕೆ ಪಡೆದಿದ್ದಾರೆ.

ನಗರದ ವಿವಿಧ ಬಡಾವಣೆಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ರಾಸಾಯನಿಕಯುಕ್ತ ಬಣ್ಣ ಬಳಿದ ಗೌರಿ-ಗಣೇಶ ವಿಗ್ರಹಗಳನ್ನು ಮಾರಾಟ ಮಾಡಲಾಗುತ್ತಿತ್ತು. ಈ ಕುರಿತು ಖಚಿತ ಮಾಹಿತಿ ಪಡೆದ ಪಾಲಿಕೆಯ ಆರೋಗ್ಯಾಧಿಕಾರಿ ಡಾ.ನಾಗರಾಜು ನೇತೃತ್ವದ ತಂಡ ಸ್ಥಳಕ್ಕೆ ದಾಳಿ ನಡೆಸಿ ವಿಗ್ರಹಗಳನ್ನು ವಶಕ್ಕೆ ಪಡೆದಿದೆ.
ಮೈಸೂರು ಕನ್ನಡ ವೇದಿಕೆಯಿಂದ ಪರಿಸರಸ್ನೇಹಿ ಗಣಪತಿ ವಿತರಣೆ

ಗೌರಿ ಗಣೇಶ ಹಬ್ಬದ ಅಂಗವಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಮೈಸೂರು ಕನ್ನಡ ವೇದಿಕೆ ವತಿಯಿಂದ ಪರಿಸರ ಸ್ನೇಹಿ ಗಣಪತಿಯನ್ನು ನಗರದ ಗೌರಿಶಂಕರ ನಗರದಲ್ಲಿ ವಿತರಿಸಲಾಯಿತು. ಮನೆ ಮನೆಗೆ ತೆರಳಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರಲ್ಲದೆ ಮಣ್ಣಿನ ಗಣಪತಿಯನ್ನು ವಿತರಿಸಿದರು.

English summary
Commissioner of police Dr A Subrahmanyeshwara Rao instructed the public to observe Gowri Ganesha festival in a peaceful way.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X