ಕ್ಲಬ್ ಹೆಸರಿನಲ್ಲಿ ಜೂಜು ದಂಧೆ: ಮೈಸೂರಿನಲ್ಲಿ 37 ಮಂದಿ ಬಂಧನ

Posted By:
Subscribe to Oneindia Kannada

ಮೈಸೂರು, ಜುಲೈ 20: ಕ್ಲಬ್ ಹೆಸರಿನಲ್ಲಿ ಅಕ್ರಮವಾಗಿ ಜೂಜಾಟ ನಡೆಸುತ್ತಿದ್ದ 37 ಮಂದಿಯನ್ನು ಮೈಸೂರು ಸಿಸಿಬಿ ಮತ್ತು ದೇವರಾಜ ಠಾಣಾ ಪೊಲೀಸರು ಕಳೆದ ರಾತ್ರಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೈಸೂರು: ಮುಂಚಿತವಾಗಿ ತೆರೆವ ಬಾರ್ ಮೇಲೆ ಅಧಿಕಾರಿಗಳ ದಾಳಿ
ಬಂಧಿತರಿಂದ 1,51,630 ರೂ. ನಗದು ಹಣ, 33 ಮೊಬೈಲ್‍ ಗಳನ್ನು ವಶಕ್ಕೆ ಪಡೆದಿದ್ದಾರೆ. ಕೆ.ಆರ್. ಸರ್ಕಲ್‌ನಲ್ಲಿರುವ ವಿಶ್ವೇಶ್ವರಯ್ಯ ಕಟ್ಟಡದಲ್ಲಿನ 2ನೇ ಮಹಡಿಯಲ್ಲಿರುವ ನ್ಯೂ ಮಾಡರ್ನ್ ರಿಕ್ರಿಯೇಷನ್ ಕ್ಲಬ್ ಮೇಲೆ ದಾಳಿ ನಡೆಸಿದ ಪೊಲೀಸರು ಕ್ಲಬ್ ಅಧ್ಯಕ್ಷರಾದ ಆನಂದ್ ಹಾಗೂ ಎಂ.ಎಲ್. ರಾಮಲಿಂಗಯ್ಯ ಸೇರಿದಂತೆ 37 ಮಂದಿಯನ್ನು ಬಂಧಿಸಿದ್ದಾರೆ.

Mysuru police arrests 37 gamblers in a club

ಆನಂದ್ ಮತ್ತು ರಾಮಲಿಂಗಯ್ಯ ಅವರು ಕ್ಲಬ್‍ ನ ನಿಯಮಾವಳಿಗಳನ್ನು ಉಲ್ಲಂಘಿಸಿ ಸದಸ್ಯರಲ್ಲದವರಿಗೆ ಕ್ಲಬ್‍ ಗೆ ಪ್ರವೇಶ ನೀಡಿದ್ದರು. ಕ್ಲಬ್‌ ಗೆ ಬರುವ ಇತರರಿಂದಲೂ ಹಣವನ್ನು ಗೆಲ್ಲಬಹುದೆಂಬ ಅಮಿಷವೊಡ್ಡಿ ಅವರಿಂದ ಹಣವನ್ನು ಪಡೆದು ಜೂಜಾಟ ನಡೆಸುತ್ತಿದ್ದರು ಎನ್ನಲಾಗಿದೆ. ಈ ಸಂಬಂಧ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾತ್ರೋರಾತ್ರಿ ಮಳಿಗೆಗೆ ಕನ್ನ

ಜುಲೈ 19 ರ ರಾತ್ರಿ ಮೈಸೂರಿನ ಅಶೋಕರಸ್ತೆಯಲ್ಲಿರುವ ಡರ್ಲಾ ಸೆರಾಮಿಕ್ಸ್ ಮಳಿಗೆಗೆ ನುಗ್ಗಿದ ಕಳ್ಳರು 2 ಲಕ್ಷ ರೂಪಾಯಿಯನ್ನು ಲಪಟಾಯಿಸಿದ್ದಾರೆ.

ಮಳಿಗೆಯ ಕಟ್ಟಡದ ಮೇಲ್ಛಾವಣಿ ಬಳಿಯಿಂದ ಇಳಿದು ಒಳನುಗ್ಗಿದ ಕಳ್ಳರು ಕ್ಯಾಶ್ ಕೌಂಟರ್ ನಲ್ಲಿದ್ದ ಎರಡು ಲಕ್ಷ ರೂ. ಕದ್ದೊಯ್ದಿದ್ದು, ಗುರುವಾರ ಬೆಳಿಗ್ಗೆ ಮಳಿಗೆಯ ಬಾಗಿಲು ತೆರದಾಗ ಮಾಲೀಕರ ಗಮನಕ್ಕೆ ಬಂದಿದೆ.
ಮೇಲಿನಿಂದ ಇಳಿದು ಬರಲಾಗುತ್ತದೆ ಎಂದು ಯಾರಿಗೂ ತಿಳಿದಿರಲಿಲ್ಲ.

Mysuru Jail :4 Prisoners Shifted From Bengaluru Parappa Jail | Oneindia Kannada

ಈ ಕೃತ್ಯವನ್ನು ಯಾರೋ ತಿಳಿದವರೇ ಮಾಡಿರಬೇಕೆಂಬ ಶಂಕೆಯನ್ನು ಮಾಲೀಕರು ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಲಷ್ಕರ್ ಠಾಣೆಯ ಇನ್ಸಪೆಕ್ಟರ್ ಭೇಟಿ ನೀಡಿದ್ದು, ಬೆರಳಚ್ಚು ಮತ್ತು ಶ್ವಾನದಳ ದ ಮೂಲಕ ಪರಿಶೀಲನೆ ನಡೆಸಲಾಗುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Mysuru police have arrested 37 men who were gambling in a club. The incident took place on 19th July, evening.
Please Wait while comments are loading...