ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು: ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ವಿವಿ ಪರೀಕ್ಷೆ ಮುಂದೂಡಿಕೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ನವೆಂಬರ್ 15: ಮೈಸೂರಿನಲ್ಲಿ 83 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಪದವಿ ಪರೀಕ್ಷೆಗಳನ್ನು ಮುಂದೂಡುವಂತೆ ಜಿಲ್ಲಾಧಿಕಾರಿ ಡಿ.ರಂದೀಪ್ ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿಗಳಿಗೆ ತಿಳಿಸಿದ್ದಾರೆ.

ಮೈಸೂರು: ಸಾಹಿತ್ಯ ಸಮ್ಮೇಳನಕ್ಕೆ ಸಜ್ಜಾದ ಕನ್ನಡ ತೇರುಮೈಸೂರು: ಸಾಹಿತ್ಯ ಸಮ್ಮೇಳನಕ್ಕೆ ಸಜ್ಜಾದ ಕನ್ನಡ ತೇರು

ಪರೀಕ್ಷೆ ಇರುವುದರಿಂದ ವಿದ್ಯಾರ್ಥಿಗಳು ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಸಾಧ್ಯವಾಗಲಾರದು. ಅದರಿಂದ ಸಾಹಿತ್ಯ ಸಮ್ಮೇಳನದ ಸಮಯದಲ್ಲಿ ಪರೀಕ್ಷೆ ಮುಂದೂಡುವಂತೆ ಜಿಲ್ಲಾಧಿಕಾರಿಗಳು ಪತ್ರ ಬರೆದಿದ್ದಾರೆ. ನ.24,25,26 ರಂದು ಮಹಾರಾಜ ಕಾಲೇಜು ಮೈದಾನದಲ್ಲಿ ಸಮ್ಮೇಳನ ನಡೆಯುವುದುರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ ಎಂಬ ಕಾರಣಕ್ಕೆ ಕಾಲೇಜುಗಳಲ್ಲಿ ನಡೆಯಬೇಕಿದ್ದ ಪದವಿ ಪರೀಕ್ಷೆಗಳನ್ನು ಮುಂದೂಡಿ ವಿದ್ಯಾರ್ಥಿಗಳೂ ಕೂಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಅನುವು ಮಾಡಿಕೊಡಬೇಕೆಂದು ತಿಳಿಸಿದ್ದಾರೆ.

Mysuru: PG Exams postponed due to Kannada Sahitya Sammelana

ಶಾಲಾ ವಿದ್ಯಾರ್ಥಿಗಳಿಂದ ಕಸರತ್ತು
ಅಖಿಲ ಭಾರತ 83ನೇ ಕನ್ನಡ ಸಾಹಿತ್ಯ ಸಮ್ಮೇಳನ ಆರಂಭಕ್ಕೂ ಮುನ್ನ ಇಲ್ಲಿನ ಅರಮನೆ ಆವರಣದಲ್ಲಿ ನ.20ರಂದು ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಕಸರತ್ತುಗಳು ನಡೆಯಲಿವೆ.

83 ನೇ ಸಾಹಿತ್ಯ ಸಮ್ಮೇಳನ ನಿಮಿತ್ತ ನಗರಕ್ಕೆ ಮತ್ತೆ ದೀಪಾಲಂಕಾರ !83 ನೇ ಸಾಹಿತ್ಯ ಸಮ್ಮೇಳನ ನಿಮಿತ್ತ ನಗರಕ್ಕೆ ಮತ್ತೆ ದೀಪಾಲಂಕಾರ !

ಪ್ರೌಢಶಾಲೆಯ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳು 'ಅಖಿಲ ಭಾರತ 83ನೇ ಕನ್ನಡ ಸಾಹಿತ್ಯ ಸಮ್ಮೇಳನ' ಇಲ್ಲವೇ 'ರಾಮಾಯಣ ದರ್ಶನಂ-50' ಎಂದು ಅಕ್ಷರಗಳಲ್ಲಿ ವಿನ್ಯಾಸ ರೂಪಿಸಲಿದ್ದಾರೆ. ಕುವೆಂಪು ಅವರ 'ರಾಮಾಯಣ ದರ್ಶನಂ' ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆತು ಈಗ 50 ವರ್ಷಗಳಾಗಿವೆ. ಹೀಗಾಗಿ, 'ರಾಮಾಯಣ ದರ್ಶನಂ-50' ಎಂದು ಅಕ್ಷರಗಳಲ್ಲಿ ವಿನ್ಯಾಸ ರೂಪಿಸುವ ಉದ್ದೇಶ ಜಿಲ್ಲಾಡಳಿತಕ್ಕೆ ಇದೆ. ಇದನ್ನು ಡ್ರೋಣ್ ನೆರವಿನಿಂದ ಫೋಟೋ ತೆಗೆಯಲಾಗುವುದು.

ಸಮ್ಮೇಳನದ ಸ್ಥಳದ ಮೇಲೆ ಬಲೂನ್‌
ಅಖಿಲ ಭಾರತ 83ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ಇಲ್ಲಿನ ಮಹಾರಾಜ ಕಾಲೇಜಿನ ಮೈದಾನದಲ್ಲಿ ಸೋಮವಾರ ರಾತ್ರಿ ಬೃಹತ್‌ ಬಲೂನ್‌ ಅನ್ನು ಹಾರಿ ಬಿಡಲಾಗಿದೆ.

ಈ ಬಲೂನ್‌ಗೆ ಸುಮಾರು 50 ಸಾವಿರ ರೂ.ವೆಚ್ಚವಾಗಿದೆ. ಎರಡು ದಿನಕ್ಕೊಮ್ಮೆ ಈ ಬಲೂನ್‌ ಕೆಳಗಿಳಿಸಿ ಮತ್ತೆ ಗಾಳಿ ತುಂಬಿ ಹಾರಿ ಬಿಡಲಾಗುತ್ತದೆ ಎಂದು ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಜನಾರ್ದನ್ ತಿಳಿಸಿದರು.

English summary
Deputy Commissioner D.Randeep told the Vice Chancellors of the Mysore(Mysuru) University that postgraduate examinations should be postponed due to 83rd Akhila Bharateeya Kannada Sahitya Sammelan which will be taking place from Nov.24th to 26th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X